2014ರ ಇಂಗ್ಲೆಂಡ್ ಪ್ರವಾಸದಿಂದ ತುಂಬ ಕಲಿತಿದ್ದೇನೆ: ವಿರಾಟ್ ಕೊಹ್ಲಿ

ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಮತ್ತು ರನ್ ಮೆಷಿನ್ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು 2014 ರ ಇಂಗ್ಲೆಂಡ್ ಪ್ರವಾಸದ ವೈಫಲ್ಯವು ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದೆ ಎಂದು ಬಹಿರಂಗಪಡಿಸಿದ್ದಾರೆ ಆದರೆ ಈ ನಿರಾಶೆಯಿಂದ ಅವರು ತಮ್ಮ  ವೃತ್ತಿಜೀವನವನ್ನು ಚೇತರಿಸಿಕೊಂಡರು ಎಂದು ತಿಳಿಸಿದ್ದಾರೆ. 

Published: 03rd April 2020 07:37 PM  |   Last Updated: 03rd April 2020 07:37 PM   |  A+A-


Virat Kohli

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ನವದೆಹಲಿ: ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಮತ್ತು ರನ್ ಮೆಷಿನ್ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು 2014 ರ ಇಂಗ್ಲೆಂಡ್ ಪ್ರವಾಸದ ವೈಫಲ್ಯವು ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದೆ ಎಂದು ಬಹಿರಂಗಪಡಿಸಿದ್ದಾರೆ ಆದರೆ ಈ ನಿರಾಶೆಯಿಂದ ಅವರು ತಮ್ಮ  ವೃತ್ತಿಜೀವನವನ್ನು ಚೇತರಿಸಿಕೊಂಡರು ಎಂದು ತಿಳಿಸಿದ್ದಾರೆ. 

ವಿರಾಟ್ ಗುರುವಾರ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರೊಂದಿಗಿನ ಇನ್ಸ್ಟಾಗ್ರಾಮ್ ಸಂಭಾಷಣೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ವಿರಾಟ್ 2014 ರ ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟೆಸ್ಟ್ ಪಂದ್ಯಗಳಲ್ಲಿ 134 ರನ್ ಗಳಿಸಿದ್ದರು. ಈ ಪ್ರವಾಸವು ಅವರ  ವೃತ್ತಿಜೀವನದ ಅತ್ಯಂತ ಕಳಪೆ ಪ್ರದರ್ಶನವಾಗಿದೆ ಮತ್ತು ತಂಡಕ್ಕೆ ಆದ್ಯತೆ ನೀಡುವುದಕ್ಕಿಂತ ಅವರ ವೈಯಕ್ತಿಕ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಅವರು ಹೆಚ್ಚು ಗಮನಹರಿಸಿದ್ದರು ಎಂದು ಅವರು ಹೇಳಿದರು.

"2014 ರ ಇಂಗ್ಲೆಂಡ್ ಪ್ರವಾಸವು ನನ್ನ ಜೀವನದ ಅತ್ಯಂತ ಕೆಟ್ಟ ಅವಧಿಯಾಗಿದೆ. ಬ್ಯಾಟ್ಸ್‌ಮನ್‌ ಆಗಿ ವ್ಯಫಲ್ಯ ಅನುಭವಿಸುತ್ತಿದ್ದ ಮತ್ತು ರನ್ ಗಳಿಸಲು ಪ ಎಂದು ಪರದಾಡುತ್ತಿರುವ ಬಗ್ಗೆ ಗೊತ್ತಾಗುತ್ತದೆ. ಆ ಸಮಯದಲ್ಲಿ ರನ್ ಬಾರಿಸುತ್ತೇನೆ ಎಂಬ ಭರವಸೆ ಸಹ ಇರಲಿಲ್ಲ. ಇದರ  ಹೊರತಾಗಿಯೂ, ನೀವು ಮರುದಿನ ಬೆಳಿಗ್ಗೆ ಆಟವಾಡಲು ಹೋಗಬೇಕು ಎಂಬುದನ್ನು ಅರಿತಿರುತ್ತಿರಿ. ನಾನು ರನ್ ಗಳಿಸಲು ಪರದಾಡುತ್ತಿರುವ ವಿಷಯ ನನ್ನನ್ನು ಕೊರೆಯಿತು” ಎಂದಿದ್ದಾರೆ. 

“ಈ ಬಗ್ಗೆ ಯುವಕರಿಗೆ ಹೇಳಬೇಕೆಂದರೆ ನಾನು ಉತ್ತಮವಾಗಿ ಆಡುವ ಇರಾದೆ ಹೊಂದ್ದಿದೆ. ಈ ವೇಳೆಯಲ್ಲಿ ತಂಡ ನನ್ನಿಂದ ಏನು ಬಯಸುತ್ತಿದೆ ಎಂಬುದನ್ನು ಅರಿಯುವಲ್ಲಿ ಎಡವಿದೆ. ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಲ್ಲಿ ತಂಡದಲ್ಲಿ ಸ್ಥಾನ ಗಟ್ಟಿಗೊಳ್ಳಿಸುವ ಕನಸು ಹೊಂದಿದ್ದೆ” ಎಂದು  ವಿರಾಟ್ ತಿಳಿಸಿದ್ದಾರೆ. ಪಂದ್ಯದ ಹಿಂದಿನ ದಿನದ ಸಿದ್ಧತೆಗಳ ದಿನಚರಿಯ ಬಗ್ಗೆ ಕೇಳಿದಾಗ, ಇದು ಮಾನಸಿಕ ಸಮತೋಲನ ಬಗ್ಗೆ ದೃಷ್ಟಿ ಇಟ್ಟಿದ್ದೇನು ಎಂದು ವಿರಾಟ್ ಹೇಳಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp