ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಪೀಟರ್ ವಾಕರ್ ನಿಧನ

1960ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎಲ್ಲ ಮೂರು ಟೆಸ್ಟ್ ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ನ ಮಾಜಿ ಆಲ್ ರೌಂಡರ್ ಪೀಟರ್ ವಾಕರ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. 

Published: 07th April 2020 01:38 PM  |   Last Updated: 07th April 2020 01:38 PM   |  A+A-


Peter Walker Passes Away

ಪೀಟರ್ ವಾಕರ್ (ಸಂಗ್ರಹ ಚಿತ್ರ)

Posted By : Srinivasamurthy VN
Source : UNI

ಲಂಡನ್: 1960ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎಲ್ಲ ಮೂರು ಟೆಸ್ಟ್ ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ನ ಮಾಜಿ ಆಲ್ ರೌಂಡರ್ ಪೀಟರ್ ವಾಕರ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. 

ಪಾರ್ಶ್ವವಾಯುವಿನಿಂದ ಪೀಟರ್ ಮೃತಪಟ್ಟಿದ್ದಾರೆ ಎಂದು ಬಿಬಿಸಿ ಸ್ಪೋಟ್ಸ್ ವರದಿ ಮಾಡಿದೆ.ಅಂತಾರಾಷ್ಟ್ರೀಯ ವೃತ್ತಿ ಬದುಕಿನಲ್ಲಿ ಗರಿಷ್ಠ 52 ರನ್ ಸೇರಿದಂತೆ ಪೀಟರ್ 128 ರನ್ ಗಳಿಸಿದ್ದಾರೆ. 

ಗ್ಲಮೊರ್ಗನ್ ತಂಡದೊಂದಿಗೆ 16 ವರ್ಷ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಈ ಸಮಯದ ಅವರು 469 ಪಂದ್ಯಗಳಲ್ಲಿ 13 ಶತಕ, 92 ಅರ್ಧ ಶತಕ ಬಾರಿಸಿದ್ದಾರೆ. ಜತೆಗೆ 25 ಬಾರಿ ಐದು ವಿಕೆಟ್ ಗೊಂಚಲು ಸೇರಿದಂತೆ 834 ವಿಕೆಟ್ ಕಬಳಿಸಿದ್ದಾರೆ. ಆರಂಭದಲ್ಲಿ ಎಡಗೈ ಮಧ್ಯಮ  ವೇಗಿಯಾಗಿ ಕಾಣಿಸಿಕೊಂಡ ಪೀಟರ್ ವೃತ್ತಿ ಬದುಕಿನ ಮಧ್ಯಂತರದಲ್ಲಿ ಎಡಗೈ ಸ್ಪಿನ್ ಬೌಲರ್ ಆಗಿ ಪರಿವರ್ತನೆಗೊಂಡಿದ್ದರು. ಪೀಟರ್ ನಿಧನಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸಂತಾಪ ಸೂಚಿಸಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp