ಶಾಹಿದ್ ಆಫ್ರಿದಿ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಟೀಂ ಇಂಡಿಯಾದ ಒಬ್ಬರಿಗೆ ಮಾತ್ರ ಸ್ಥಾನ!

ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನ ವೇಳೆ ಘಟಾನುಘಟಿ ಆಟಗಾರರ ಎದುರು ಆಡಿದ ಅನುಭವ ಹೊಂದಿರುವ ಅಫ್ರಿದಿ ಇದೀಗ ಕ್ವಾರಂಟೈನ್ ದಿನಗಳಲ್ಲಿ ಯೂಟ್ಯೂಬ್ ಮೂಲಕ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದಾರೆ.

Published: 08th April 2020 04:14 PM  |   Last Updated: 08th April 2020 04:14 PM   |  A+A-


Kohli-Sachin

ಕೊಹ್ಲಿ-ಸಚಿನ್

Posted By : Vishwanath S
Source : UNI

ನವದೆಹಲಿ: ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನ ವೇಳೆ ಘಟಾನುಘಟಿ ಆಟಗಾರರ ಎದುರು ಆಡಿದ ಅನುಭವ ಹೊಂದಿರುವ ಅಫ್ರಿದಿ ಇದೀಗ ಕ್ವಾರಂಟೈನ್ ದಿನಗಳಲ್ಲಿ ಯೂಟ್ಯೂಬ್ ಮೂಲಕ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದಾರೆ.

ತಮ್ಮ ಆಲ್ ಟೈಮ್ ಬೆಸ್ಟ್ ತಂಡದಲ್ಲಿ ಪಾಕಿಸ್ತಾನದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಸಯೀದ್ ಅನ್ವರ್ ಅವರನ್ನು ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಆಯ್ಕೆ ಮಾಡಿದ್ದಾರೆ. ಅನ್ವರ್ ಟೆಸ್ಟ್ ಮತ್ತು ಏಕದಿನ ಕ್ರಿಕಟ್ ನಲ್ಲಿ ಸಮಗ್ರವಾಗಿ 13 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದರೆ. ಅವರೊಟ್ಟಿಗೆ ಮತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಆಗಿ ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್ ಅವರನ್ನು ಆಯ್ಕೆ ಮಾಡಿದ್ದಾರೆ.

 ಅಫ್ರಿದಿ ತಮ್ಮ ತಂಡದಲ್ಲಿ ಭಾರತದ ಒಬ್ಬ ಆಟಗಾರನಿಗೆ ಮಾತ್ರ ಅವಕಾಶ ನೀಡಿದ್ದಾರೆ. ಭಾರತ ತಂಡದ ಮಾಜಿ ದಿಗ್ಗಜ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಅವರನ್ನು ತಂಡದ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಅಫ್ರೀದಿ ಆಯ್ಕೆ ಮಾಡಿದ್ದು, ಮೂರನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ಇದ್ದಾರೆ. ಅಫ್ರಿದಿ ತಂಡದಲ್ಲಿ ಒಬ್ಬನೇ ಭಾರತೀಯ. ಆಫ್ರಿದಿ ಆಲ್ ಟೈಮ್ ಇಲೆವೆನ್ ತಂಡದಲ್ಲಿ ಸಯೀದ್ ಅನ್ವರ್, ಆಡಮ್ ಗಿಲ್ ಕ್ರಿಸ್ಟ್, ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಇಂಜಮಾಮ್ ಉಲ್ ಹಕ್, ಜಾಕ್ ಕಾಲಿಸ್, ರಶೀದ್ ಲತೀಫ್ (ವಿಕೆಟ್ ಕೀಪರ್), ವಸೀಂ ಅಕ್ರಮ್, ಶೇನ್ ವಾರ್ನ್, ಗ್ಲೆನ್ ಮೆಗ್ರಾತ್, ಶೋಯೆಬ್ ಅಖ್ತರ್ ಇದ್ದಾರೆ.

ಕ್ಲಾರ್ಕ್ ಶ್ರೇಷ್ಠ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ತೆಂಡೂಲ್ಕರ್, ಕೊಹ್ಲಿಗೆ ಸ್ಥಾನ
ಬ್ರಿಸ್ಬೇನ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್, ತಮ್ಮ ವೃತ್ತಿ ಬದುಕಿನ ಅವಧಿಯಲ್ಲಿಆಡಿದವರ ಏಳು ಸರ್ವಶ್ರೇಷ್ಠ ಬ್ಯಾಟ್ಸ್ ಮನ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಕ್ಲಾರ್ಕ್ ಅವರ ಶ್ರೇಷ್ಠ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಭಾರತದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸ್ಥಾನ ಕಲ್ಪಿಸಿದ್ದಾರೆ. ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಮತ್ತು ಜಾಕ್ ಕಾಲಿಸ್, ಆಸೀಸ್ ನ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಸ್ಥಾನ ಪಡೆದಿರುವ ಇತರ ಐವರು ಬ್ಯಾಟ್ಸ್ ಮನ್ ಗಳಾಗಿದ್ದಾರೆ.

ತೆಂಡೂಲ್ಕರ್ ಕುರಿತು ಪ್ರತಿಕ್ರಿಯಿಸಿರುವ 115 ಟೆಸ್ಟ್, 245 ಏಕದಿನ ಮತ್ತು 34 ಟಿ20 ಪಂದ್ಯಗಳನ್ನಾಡಿರುವ ಕ್ಲಾರ್ಕ್, ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ಬಹುಶಃ ತಾಂತ್ರಿಕವಾಗಿ ಅವರು ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿದ್ದಾರೆ ಎಂದಿದ್ದಾರೆ. ಜತೆಗೆ ಸಚಿನ್ ತಾಂತ್ರಿಕವಾಗಿ ಯಾವುದೇ ದೌರ್ಬಲ್ಯ ಹೊಂದಿರಲಿಲ್ಲಎಂದು ಹೇಳಿದ್ದಾರೆ.

ಈ ಮಧ್ಯೆ, 2015ರ ವಿಶ್ವ ಕಪ್ ವಿಜೇತ ತಂಡದ ನಾಯಕ, ಎಲ್ಲ ಮೂರು ಮಾದರಿಗಳಲ್ಲೂ ವಿರಾಟ್ ಕೊಹ್ಲಿಯೇ ಅತ್ಯುತ್ತಮ ಬ್ಯಾಟ್ಸ್ ಮನ್ ಎಂದು ಟೀಮ್ ಇಂಡಿಯಾ ನಾಯಕನಿಗೆ ಬಿರುದು ನೀಡಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp