ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ರೀತಿಯ ಕ್ರೀಡೆಗಳು ಕಷ್ಟಸಾಧ್ಯ: ಐಪಿಎಲ್ ಮರೆತುಬಿಡಿ- ಸೌರವ್ ಗಂಗೂಲಿ

ಈ ಬಾರಿಯ ಐಪಿಎಲ್  ನಡೆಯುವ ಸಾಧ್ಯತೆಗಳು ತೀರಾ ಮಂಕಾಗಿದೆ ಎಂಬುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಒಪ್ಪಿಕೊಂಡಿದ್ದಾರೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ನವದೆಹಲಿ: ಈ ಬಾರಿಯ ಐಪಿಎಲ್  ನಡೆಯುವ ಸಾಧ್ಯತೆಗಳು ತೀರಾ ಮಂಕಾಗಿದೆ ಎಂಬುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಒಪ್ಪಿಕೊಂಡಿದ್ದಾರೆ.

ಬಿಸಿಸಿಐ ಪದಾಧಿಕಾರಿಗಳೊಂದಿಗೆ ಮಾತನಾಡಿದ ನಂತರ ಐಪಿಎಲ್ ನ್ನು ಮತ್ತಷ್ಟು ದಿನ ಮುಂದೂಡಲಾಗುತ್ತದೆಯೇ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯ ಆದರೆ, ವಾಸ್ತವವಾಗಿ ಮಾತನಾಡುವಾಗ ಜಗತ್ತಿನಾದ್ಯಂತ ಜನಜೀವನಕ್ಕೆ ಸಂಚಕಾರ ಬಂದಿರುವಾಗ ಕ್ರೀಡೆಯ ಭವಿಷ್ಯ ಏಲ್ಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಈಗಿನ ಸನ್ನಿವೇಶನದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ, ವಿಮಾನ ನಿಲ್ದಾಣಗಳು ಮುಚ್ಚಿವೆ,  ಜನರು ಮನೆಯಲ್ಲಿಯೇ ಇದ್ದಾರೆ, ಆಫೀಸ್ ಗಳು ಲಾಕ್ ಡೌನ್ ಆಗಿವೆ. ಯಾರೂ ಎಲ್ಲಿಗೂ ಹೋಗದಂತಾಗಿದೆ. ಮೇ ತಿಂಗಳ ಮಧ್ಯದವರೆಗೂ ಇದು ಹೀಗೆಯೇ ಇರಲಿದೆ ಎಂಬುದು ತೋರಿಸುತ್ತಿದೆ ಎಂದರು.

ಆಟಗಾರರನ್ನು ಎಲ್ಲಿಂದ ಕರೆತರುವುದು, ಆಟಗಾರರು ಏಲ್ಲಿ ಪ್ರಯಾಣಿಸುತ್ತಾರೆ, ಪ್ರಪಂಚದಲ್ಲಿ ಎಲ್ಲಿಯೂ ಯಾವುದೇ ರೀತಿಯ ಕ್ರೀಡೆಯ ಪರ ಸನ್ನಿವೇಶ ಇಲ್ಲ. ಐಪಿಎಲ್ ಅನ್ನು ಮರೆತುಬಿಡಿ ಎಂದರು. 

ದೇಶಾದ್ಯಂತ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ರವರೆಗೂ ಲಾಕ್ ಡೌನ್ ಹೇರಲಾಗಿದೆ. ಮಾರ್ಚ್ 29 ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಬಿಸಿಸಿಐ ಮುಂದೂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com