ಕೊರೊನಾಗೆ ಪಾಕ್ ಕ್ರಿಕೆಟಿಗ ಸರ್ಫರಾಜ್ ಬಲಿ

ಪಾಕಿಸ್ತಾನದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಫಾರ್ ಸರ್ಫರಾಜ್ ಕೋವಿಡ್-19ಗೆ ಬಲಿಯಾಗಿದ್ದಾರೆ.
ಸಂಗ್ಹಹ ಚಿತ್ರ
ಸಂಗ್ಹಹ ಚಿತ್ರ

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಫಾರ್ ಸರ್ಫರಾಜ್ ಕೋವಿಡ್-19ಗೆ ಬಲಿಯಾಗಿದ್ದಾರೆ.

50 ವರ್ಷದ ಸರ್ಫರಾಜ್ ನನ್ನು ಕಳೆದ 3 ದಿನಗಳಿಂದ ಪೇಶಾವರದಲ್ಲಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. 

ಸರ್ಫರಾಜ್ ಪಾಕಿಸ್ತಾನದಲ್ಲಿ ಕೋವಿಡ್ -19ಗೆ ಬಲಿಯಾದ ಮೊದಲ ವೃತ್ತಿಪರ ಕ್ರಿಕೆಟಿಗನಾಗಿದ್ದಾನೆ. 1988ರಲ್ಲಿ ವೃತ್ತಿ ಬದುಕಿಗೆ ಪದಾರ್ಪಣೆಗೈದ ಸರ್ಫರಾಜ್, ಪೇಶಾವರ ಪರ ಆಡಿದ 15 ಪ್ರಥಮ ದರ್ಜೆ ಪಂದ್ಯಗಳಿಂದ 616 ರನ್ ಗಳಿಸಿದ್ದಾರೆ. 

ಸರ್ಫರಾಜ್ 1994ರಲ್ಲಿ ನಿವೃತ್ತಿ ಘೋಷಿಸುವ ಮುನ್ನ ಆರು ಏಕದಿನ ಪಂದ್ಯಗಳಿಂದ 96 ರನ್ ಸಹ ಕಲೆಹಾಕಿದ್ದಾರೆ. 2000 ಇಸವಿಯ ಮಧ್ಯಂತರದಲ್ಲಿ ಪೇಶಾವರದ ಹಿರಿಯರು ಮತ್ತು 19 ವರ್ಷದೊಳಗಿನ ತಂಡಕ್ಕೆ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com