ಐಪಿಎಲ್ ಗಾಗಿ ಏಷ್ಯಾ ಕಪ್ ರದ್ದು ಮಾಡಲಾಗದು: ಪಿಸಿಬಿ

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅವಕಾಶ ಕಲ್ಪಿಸುವ ಸಲುವಾಗಿ ಏಷ್ಯಾಕಪ್ ಟೂರ್ನಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.
ಪಿಸಿಬಿ ಅಧ್ಯಕ್ಷ ಎಹ್ಸಾನ್ ಮಣಿ
ಪಿಸಿಬಿ ಅಧ್ಯಕ್ಷ ಎಹ್ಸಾನ್ ಮಣಿ

ಕರಾಚಿ: ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅವಕಾಶ ಕಲ್ಪಿಸುವ ಸಲುವಾಗಿ ಏಷ್ಯಾಕಪ್ ಟೂರ್ನಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

ಐಪಿಎಲ್ 13ನೇ ಆವೃತ್ತಿ ಮಾರ್ಚ್ 29 ರಿಂದ ಮೇ 24 ರವರೆಗೆ ನಡೆಯಬೇಕಿತ್ತು. ಆದರೆ ಭಾರತದಲ್ಲಿ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ವಿಸ್ತರಿಸಲಾಗಿರುವ ಲಾಕ್ ಡೌನ್ ಪರಿಣಾಮ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಐಪಿಎಲ್ ಗಾಗಿ  ಏಷ್ಯಾ ಕಪ್ ಟೂರ್ನಿ ರದ್ದು ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಡುವುದಿಲ್ಲ ಎಂದು ಪಿಸಿಬಿ ಹೇಳಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಎಹ್ಸಾನ್ ಮಣಿ, 'ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅವಕಾಶ ಕಲ್ಪಿಸಲು ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಿಗದಿಯಾಗಿರುವ  ಏಷ್ಯಾಕಪ್ ಟೂರ್ನಿಯನ್ನು ರದ್ದುಗೊಳಿಸಲು ಪಿಸಿಬಿ ಒಪ್ಪುವುದಿಲ್ಲ. ನಾನು ಈ ಉಹಾಪೋಹಗಳ ಬಗ್ಗೆ ಓದಿದ್ದೇನೆ ಮತ್ತು ಕೇಳಿದ್ದೇನೆ.

ಏಷ್ಯಾ ಕಪ್ ಟೂರ್ನಿ ಕೇವಲ ಪಾಕಿಸ್ತಾನ ಮತ್ತು ಭಾರತದ ನಡುವಿನ ಟೂರ್ನಿಯಲ್ಲ. ಟೂರ್ನಿಲ್ಲಿ ಇತರೆ ದೇಶಗಳೂ ಆಡುತ್ತಿವೆ. ಪಾಕಿಸ್ತಾನದಲ್ಲೇ ಈ  ಟೂರ್ನಿಯನ್ನು ಆಯೋಜಿಸಬೇಕಿತ್ತು. ಆದರೆ ಭಾರತವು ಭದ್ರತಾ ಕಾರಣಗಳನ್ನು ನೀಡಿ ಇಲ್ಲಿಗೆ ಬರಲು ಹಿಂದೇಟು ಹಾಕಿದ ನಂತರ ಅದನ್ನು ದುಬೈ ಮತ್ತು ಅಬುಧಾಬಿಗೆ ಸ್ಥಳಾಂತರಿಸಲಾಯಿತು. ಆದರೆ ಇದೀಗ ಅಲ್ಲಿಯೂ ಟೂರ್ನಿ ಆಯೋಜನೆ ಕುರಿತು ಪ್ರಶ್ನೆ ಎದ್ದಿದೆ. ಯಾವುದೇ  ಕಾರಣಕ್ಕೂ ಐಪಿಎಲ್ ಗಾಗಿ ಏಷ್ಯಾ ಕಪ್ ರದ್ದಾಗಲು ಬಿಡುವುದಿಲ್ಲ. ಏಷ್ಯಾದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಏಷ್ಯಾ ಕಪ್ ನಿರ್ಣಾಯಕ ಪಾತ್ರವಹಿಸಲಿದೆ. ಏಷ್ಯನ್ ಕ್ರಿಕೆಟ್ ಸಂಸ್ಥೆಗಳಿಗೆ ಆದಾಯ ತಂದೊಡ್ಡಲಿದೆ ಎಂದು ಹೇಳಿದರು.

ಅಂತೆಯೇ ಏಷ್ಯಾಕಪ್ ಟೂರ್ನಿಯನ್ನು ಬಾಂಗ್ಲಾದೇಶ ಅಥವಾ ಯುಎಇಗೆ ಸ್ಥಳಾಂತರಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಮಾತುಗಳು ಕೇಳಿಬರುತ್ತಿವೆ. ಮುಂದೆ ಐಸಿಸಿ ಯಾವ ತೀರ್ಮಾನಕ್ಕೆ ಬರುತ್ತದೆ ನೋಡೋಣ, ಆದರೆ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ  ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಕೂಡ ಮುಂದಕ್ಕೆ ಹೋದರೆ ಆಗ ಸಾಕಷ್ಟು ಕ್ರಿಕೆಟ್ ಸಂಸ್ಥೆಗಳು ಭಾರಿ ನಷ್ಠ ಅನುಭವಿಸಲಿವೆ ಎಂದು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com