ಶ್ರೀಲಂಕಾದಲ್ಲಿ ಐಪಿಎಲ್ ನಡೆಸುವ ಬಗ್ಗೆ ಚರ್ಚಿಸಿಲ್ಲ ಎಂದ ಬಿಸಿಸಿಐ ಸ್ಪಷ್ಟನೆ

ಪ್ರಸ್ತುತ ಅನಿರ್ದಿಷ್ಟಾವಧಿಗೆ ಅಮಾನತುಗೊಂಡಿರುವ ಐಪಿಎಲ್ 13ನೇ ಆವೃತ್ತಿಗೆ ಆತಿಥ್ಯ ವಹಿಸಲು ಶ್ರೀಲಂಕಾ ಮಂಡಳಿ(ಎಸ್ ಎಲ್ ಸಿ) ಮುಂದಾಗಿದೆ. ಆದರೆ ಕೋವಿಡ್ -19ನಿಂದಾಗಿ ಇಡೀ ಪ್ರಪಂಚವೇ ಸ್ತಬ್ಧಗೊಂಡಿರುವ ಇಂತಹ ಸಂದಿಗ್ದತೆಯಲ್ಲಿ ಈ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿಲ್ಲ ಎಂದು ಬಿಸಿಸಿಐನ ಪ್ರಭಾವಶಾಲಿ ದನಿಗಳು ಭಾವಿಸಿವೆ.
ಬಿಸಿಸಿಐ
ಬಿಸಿಸಿಐ

ನವದೆಹಲಿ: ಪ್ರಸ್ತುತ ಅನಿರ್ದಿಷ್ಟಾವಧಿಗೆ ಅಮಾನತುಗೊಂಡಿರುವ ಐಪಿಎಲ್ 13ನೇ ಆವೃತ್ತಿಗೆ ಆತಿಥ್ಯ ವಹಿಸಲು ಶ್ರೀಲಂಕಾ ಮಂಡಳಿ(ಎಸ್ ಎಲ್ ಸಿ) ಮುಂದಾಗಿದೆ. ಆದರೆ ಕೋವಿಡ್ -19ನಿಂದಾಗಿ ಇಡೀ ಪ್ರಪಂಚವೇ ಸ್ತಬ್ಧಗೊಂಡಿರುವ ಇಂತಹ ಸಂದಿಗ್ದತೆಯಲ್ಲಿ ಈ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿಲ್ಲ ಎಂದು ಬಿಸಿಸಿಐನ ಪ್ರಭಾವಶಾಲಿ ದನಿಗಳು ಭಾವಿಸಿವೆ.

ಪೂರ್ವ ನಿಗದಿಯಂತೆ ಐಪಿಎಲ್ ಟೂರ್ನಿ ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಬೇಕಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಟೂರ್ನಿಯನ್ನು ಮುಂದೂಡಿದೆ. ಜತೆಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕವೇ ಟೂರ್ನಿ ಆಯೋಜಿಸುವ ಬಗ್ಗೆ ಚಿಂತಿಸುವುದಾಗಿ ಹೇಳಿದೆ.

ಐಪಿಎಲ್ ರದ್ದುಪಡಿಸಿದರೆ ಅದರ ಪ್ರಾಯೋಜಕರು ಮತ್ತು ಬಿಸಿಸಿಐಗೆ 500ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ನಷ್ಟವಾಗಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವ ಸಿನ್ಹಲಾ ಡೈಲಿ ಲಂಕದೀಪಕ್ಕೆ ತಿಳಿಸಿದ್ದರು. ಮತ್ತೊಂದು ದೇಶದಲ್ಲಿ ಟೂರ್ನಮೆಂಟ್ ನಡೆಸುವ ಮೂಲಕ ಆಗುವ ನಷ್ಟವನ್ನು ಬಿಸಿಸಿಐ ಕಡಿಮೆ ಮಾಡಬಹುದು ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com