ಕೋವಿಡ್-19 ಬಿಕ್ಕಟ್ಟು ನಡುವೆ ಐಪಿಎಲ್ ಆಯೋಜಿಸಲು ಭಾರತದ ಎದುರು ಪ್ರಸ್ತಾವನೆ ಮುಂದಿಟ್ಟ ಶ್ರೀಲಂಕಾ

ಕೊರೋನಾ ವೈರಸ್ ನಿಂದ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 13ನೇ ಆವೃತ್ತಿ ಆಯೋಜಿಸಲು ಶ್ರೀಲಂಕಾ ಮುಂದೆ ಬಂದಿದೆ. ಈ ಕುರಿತು ಬಿಸಿಸಿಐಗೆ ಪ್ರಸ್ತಾವನೆ ಮುಂದಿಟ್ಟಿದೆ.
ಕೋವಿಡ್-19 ಬಿಕ್ಕಟ್ಟು ನಡುವೆ ಐಪಿಎಲ್ ಆಯೋಜಿಸಲು ಭಾರತದ ಎದುರು ಪ್ರಸ್ತಾವನೆ ಮುಂದಿಟ್ಟ ಶ್ರೀಲಂಕಾ

ಕೊಲಂಬೊ: ಕೊರೋನಾ ವೈರಸ್ ನಿಂದ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 13ನೇ ಆವೃತ್ತಿ ಆಯೋಜಿಸಲು ಶ್ರೀಲಂಕಾ ಮುಂದೆ ಬಂದಿದೆ. ಈ ಕುರಿತು ಬಿಸಿಸಿಐಗೆ ಪ್ರಸ್ತಾವನೆ ಮುಂದಿಟ್ಟಿದೆ.

2020ನೇ ಸಾಲಿನ ಐಪಿಎಲ್ ಆವೃತ್ತಿ ಮಾರ್ಚ್ 29ರಂದು ಆರಂಭವಾಗಬೇಕಿತ್ತು. ಆದರೆ ಕೊರೋನಾ ವೈರಸ್ ತೊಂದರೆಯಿಂದ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ ದೇಶಾದ್ಯಂತ ಲಾಕ್ ಡೌನ್ ಮೇ3ರವರೆಗೆ ಮುಂದೂಡಿರುವುದರಿಂದ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

ಇದೀಗ ಶ್ರೀಲಂಕಾದ ಕ್ರಿಕೆಟ್ ಮಂಡಳಿ ಭಾರತ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದ್ದು ಐಪಿಎಲ್ ನಡೆಸಲು ಮುಂದೆ ಬಂದಿರುವುದಾಗಿ ಹೇಳಿದೆ.

ಐಪಿಎಲ್ ರದ್ದುಪಡಿಸಿದರೆ ಅದರ ಪ್ರಾಯೋಜಕರು ಮತ್ತು ಬಿಸಿಸಿಐಗೆ 500ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ನಷ್ಟವಾಗಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವ ಸಿನ್ಹಲಾ ಡೈಲಿ ಲಂಕದೀಪಕ್ಕೆ ತಿಳಿಸಿದ್ದಾರೆ. ಮತ್ತೊಂದು ದೇಶದಲ್ಲಿ ಟೂರ್ನಮೆಂಟ್ ನಡೆಸುವ ಮೂಲಕ ಆಗುವ ನಷ್ಟವನ್ನು ಬಿಸಿಸಿಐ ಕಡಿಮೆ ಮಾಡಬಹುದು ಎಂದಿದ್ದಾರೆ.

ಶ್ರೀಲಂಕಾದಲ್ಲಿ ಆಟವಾಡಿದರೆ ಭಾರತೀಯ ಪ್ರೇಕ್ಷಕರಿಗೆ ಟಿವಿಯಲ್ಲಿ ಪಂದ್ಯ ವೀಕ್ಷಿಸಬಹುದು. ನಮ್ಮ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು ಭಾರತದ ಪ್ರತಿಕ್ರಿಯೆಗೆ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com