ಸುಳ್ಳುಗಾರರು ಮತ್ತು ದೇಶದ್ರೋಹಿಗಳ ವಿರುದ್ಧ ನನಗೆ ಅಹಂಕಾರವಿದೆ: ಶಾಹಿದ್ ಅಫ್ರಿದಿಗೆ ಗಂಭೀರ್ ತಿರುಗೇಟು

ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ಶಾಹೀದ್ ಆಫ್ರಿದಿ ನಡುವೆ ಟ್ವೀಟ್ ವಾರ ಮತ್ತೆ ಶುರುವಾಗಿದೆ. ಸುಳ್ಳುಗಾರರು ಮತ್ತು ದೇಶದ್ರೋಹಿಗಳ ವಿರುದ್ಧ ನನಗೆ ಅಹಂಕಾರವಿದೆ ಎಂದು ಗಂಭೀರ್ ತಿರುಗೇಟು ನೀಡಿದ್ದಾರೆ. 
ಗೌತಮ್-ಗಂಭೀರ್
ಗೌತಮ್-ಗಂಭೀರ್

ನವದೆಹಲಿ: ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ಶಾಹೀದ್ ಆಫ್ರಿದಿ ನಡುವೆ ಟ್ವೀಟ್ ವಾರ ಮತ್ತೆ ಶುರುವಾಗಿದೆ. ಸುಳ್ಳುಗಾರರು ಮತ್ತು ದೇಶದ್ರೋಹಿಗಳ ವಿರುದ್ಧ ನನಗೆ ಅಹಂಕಾರವಿದೆ ಎಂದು ಗಂಭೀರ್ ತಿರುಗೇಟು ನೀಡಿದ್ದಾರೆ. 

ಶಾಹಿದ್ ಅಫ್ರಿದಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಗೌತಮ್ ಮತ್ತು ವೀರೇಂದ್ರ ಸೆಹ್ವಾಗ್ ಬಗ್ಗೆ ಬರೆದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. 

ಶಾಹಿದ್ ತಮ್ಮ ಆತ್ಮಚರಿತ್ರೆಯಲ್ಲಿ ಗೌತಮ್ ಗಂಭೀರ್ ಅವರು ಸಾಧಾರಣ ಬ್ಯಾಟ್ಸ್ ಮನ್ ಅಷ್ಟೇ. ಹೀಗಾಗಿಯೇ ಅವರು ಯಾವುದೇ ದೊಡ್ಡ ದಾಖಲೆಯನ್ನು ಹೊಂದಿಲ್ಲ. ಅಲ್ಲದೆ ತಮ್ಮನ್ನು ತಾವು ಡಾನ್ ಬ್ರಾಡ್ಮನ್ ಮತ್ತು ಜೇಮ್ಸ್ ಬಾಂಡ್ ಎಂದು ಪರಿಗಣಿಸುತ್ತಾನೆ. ಆತನಿಗೆ ಹೇಗೆ ವರ್ತಿಸಬೇಕೆಂದು ಗೊತ್ತಿಲ್ಲ. ಆತನಿಗೆ ಮಾತಡೋಕೆ ಬರುತ್ತೆ ಹೊರತು ಆಡಲು ಬರುವುದಿಲ್ಲ. ನಾಟಕ ಮಾತ್ರ ಮಾಡುತ್ತಾರೆ ಎಂದು ಉಲ್ಲೇಖಿಸಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಗಂಭೀರ್ ಯಾರಿಗೆ ತಮ್ಮ ವಯಸ್ಸೆ ಗೊತ್ತಿಲ್ಲವೋ ಅವರಿಗೆ ನನ್ನ ದಾಖಲೆಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಅಫ್ರಿದಿ ನಿಮಗೆ ನೆನಪಿಸುತ್ತೇನೆ. 2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ನಾನು 54 ಎಸೆತಗಳಲ್ಲಿ 75 ರನ್ ಬಾರಿಸಿದ್ದೆ. ಆದರೆ ನೀವು ಡಕೌಟ್ ಆಗಿದ್ದೀರಾ. ಮುಖ್ಯ ವಿಚಾರ. ನಾವು ಚಾಂಪಿಯನ್ ಆಗಿದ್ದೇವು. ಹೌದು ನನಗೆ ದೇಶದ್ರೋಹಿಗಳ ಮತ್ತು ಸುಳ್ಳುಗಾರರ ವಿರುದ್ಧ ಅಹಂಕಾರವಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com