ಭಾರತ-ಆಸೀಸ್ ಟಿ20 ವಿಶ್ವ ಕಪ್ ಆತಿಥ್ಯದ ಹಕ್ಕನ್ನು ವಿನಿಮಯ ಮಾಡಿಕೊಳ್ಳಬಹುದು: ಗವಾಸ್ಕರ್

ವಿಶ್ವ ಕ್ರಿಕೆಟ್‌ನಲ್ಲಿ ಕೊರೊನಾ ವೈರಸ್ ಬಿಕ್ಕಟ್ಟಿನ ಪರಿಣಾಮವನ್ನು ತಗ್ಗಿಸುವ ಭಾಗವಾಗಿ, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಒಂದು ಪರಿಹಾರವನ್ನು ಮಂಡಿಸಿದ್ದಾರೆ. 
ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಕೊರೊನಾ ವೈರಸ್ ಬಿಕ್ಕಟ್ಟಿನ ಪರಿಣಾಮವನ್ನು ತಗ್ಗಿಸುವ ಭಾಗವಾಗಿ, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಒಂದು ಪರಿಹಾರವನ್ನು ಮಂಡಿಸಿದ್ದಾರೆ.

' ಈ ಸಮಯದಲ್ಲಿ, ನಮಗೆಲ್ಲರಿಗೂ ತಿಳಿದಿರುವಂತೆ, ಸೆಪ್ಟೆಂಬರ್ 30 ರವರೆಗೆ ಆಸ್ಟ್ರೇಲಿಯಾವು ವಿದೇಶಿಗರನ್ನು ಸ್ವದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ವಿಶ್ವಕಪ್ ಟೂರ್ನಿ ಅಕ್ಟೋಬರ್ ಮಧ್ಯದಿಂದ ಅಥವಾ ಅಕ್ಟೋಬರ್ 3ನೇ ವಾರದಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ಇದು ಸ್ವಲ್ಪ ಕಷ್ಟಕರವಾದ ಕ್ಷಣ," ಎಂದು ಗವಾಸ್ಕರ್ ಹೇಳಿರುವ ಕುರಿತು ಸುದ್ದಿ ವಾಹಿನಿಯೊಂದು ಉಲ್ಲೇಖಿಸಿದೆ.

ವಿಶ್ವಕಪ್ ಆಯೋಜನೆ ಕುರಿತು ಸಲಹೆಯೊಂದನ್ನು ನೀಡಿರುವ ದಿಗ್ಗಜ ಗವಾಸ್ಕರ್, 2020ರ ಟಿ20 ವಿಶ್ವ ಕಪ್ ಗೆ ಭಾರತ ಆತಿಥ್ಯವಹಿಸಿದರೆ, ಆಸ್ಟ್ರೇಲಿಯಾ ಮುಂದಿನ ಆವೃತ್ತಿಗೆ ಆತಿಥ್ಯ ವಹಿಸಹುದು. ಮೂಲತಃ ಮುಂದಿನ ವರ್ಷ ಭಾರತದಲ್ಲಿ ಟಿ20 ವಿಶ್ವಕಪ್ ಆಯೋಜನೆಯಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಕೊರೊನಾ ಬೆದರಿಕೆಯು ಕಡಿಮೆಯದ್ದಾಗಿದೆ ಎಂದಿದ್ದಾರೆ.

ಒಂದು ವೇಳೆ ಇದನ್ನು ಮಾಡುವುದಾದರೆ ಭಾರತ ಮತ್ತು ಆಸ್ಟ್ರೇಲಿಯಾ ಒಪ್ಪಂದ ಮಾಡಿಕೊಳ್ಳಬಹುದು. ಭಾರತ ಮತ್ತು ಆಸ್ಟ್ರೇಲಿಯಾ ಆತಿಥ್ಯದ ಹಕ್ಕನ್ನು ವಿನಿಮಯ ಮಾಡಿಕೊಳ್ಳಬಹುದು. ಟಿ20 ವಿಶ್ವ ಕಪ್ ಭಾರತದಲ್ಲಿ ಇದೇ ವರ್ಷ ಅಕ್ಟೋಬರ್ -ನವೆಂಬರ್ ನಲ್ಲಿ ನಡೆದರೆ, ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ - ನವೆಂಬರ್ ನಲ್ಲಿ ಸಂಭವಿಸಬಹುದು, ಎಂದು ಗವಾಸ್ಕರ್ ಹೇಳಿದ್ದಾರೆ.

ಇದೇ ವೇಳೆ ಟಿ20 ವಿಶ್ವ ಕಪ್ ಗೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ನಡೆಯುವುದು ಸೂಕ್ತ ಎಂದು ಗವಾಸ್ಕರ್ ಹೇಳಿದ್ದಾರೆ. ಏಕೆಂದರೆ ಬಹು ರಾಷ್ಟ್ರೀಯ ಟೂರ್ನಿಗೆ ಸಜ್ಜಾಗಲು ಆಟಗಾರರಿಗೆ ಇದು ನೆರವಾಗಬಹುದೆಂದು ನುಡಿದಿದ್ದಾರೆ. ಸದ್ಯ ಕೊರೊನಾ ವೈರಸ್ ನಿಂದಾಗಿ ಅನಿರ್ದಿಷ್ಟಾವಧಿಗೆ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಮುಂದೂಡಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com