ಕೊರೋನಾ ಭೀತಿ: ಪ್ರೇಕ್ಷಕರನ್ನು ಹೊರಗಿಟ್ಟು ಭಾರತ-ಆಸೀಸ್ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಚಿಂತನೆ

ಆಸ್ಟ್ರೇಲಿಯಾ ಮತ್ತು ಭಾರತ ಕ್ರಿಕೆಟ್ ಮಂಡಳಿಗಳು ಈ ವರ್ಷದ ಕೊನೆಯಲ್ಲಿ ಉಭಯ ದೇಶಗಳ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯೊಂದಿಗೆ ಮುನ್ನಡೆಯಲು ನಿರ್ಧರಿಸಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ)ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇವಿನ್ ರಾಬರ್ಟ್ಸ್ ಮಂಗಳವಾರ ಹೇಳಿದ್ದಾರೆ.
ಕೊಹ್ಲಿ-ಸ್ಮಿತ್
ಕೊಹ್ಲಿ-ಸ್ಮಿತ್

ಮೆಲ್ಬೋರ್ನ್: ಆಸ್ಟ್ರೇಲಿಯಾ ಮತ್ತು ಭಾರತ ಕ್ರಿಕೆಟ್ ಮಂಡಳಿಗಳು ಈ ವರ್ಷದ ಕೊನೆಯಲ್ಲಿ ಉಭಯ ದೇಶಗಳ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯೊಂದಿಗೆ ಮುನ್ನಡೆಯಲು ನಿರ್ಧರಿಸಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ)ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇವಿನ್ ರಾಬರ್ಟ್ಸ್ ಮಂಗಳವಾರ ಹೇಳಿದ್ದಾರೆ.

ಈ ಸರಣಿಯನ್ನು ಪ್ರೇಕ್ಷಕರನ್ನು ಹೊರಗಿಟ್ಟು ಆಡಲಾಗುವುದು ಎಂದಿರುವ ರಾಬರ್ಟ್ಸ್, ಐದು ಪಂದ್ಯಗಳ ಟೆಸ್ಟ್ ಸರಣಿ ಆಡುವ ಸಾಧ್ಯತೆ ಕುರಿತು ಸುಳಿವು ನೀಡಿದ್ದಾರೆ. ಈ ಮೊದಲು ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ನಿಗದಿಯಾಗಿತ್ತು. ಆದರೆ ಐದು ಪಂದ್ಯಗಳು ನಡೆಯುವ ಸಾಧ್ಯತೆ ಇದೆ.  

ಈ ಸಂಬಂಧ ಇಎಸ್ ಪಿಎನ್ ಕ್ರಿಕ್ ಇನ್ಫೋ ಜತೆ ಪ್ರತಿಕ್ರಿಯಿಸಿರುವ ರಾಬರ್ಟ್ಸ್, '' ಈ ಸಮಯದಲ್ಲಿ ನಾವು ಭಾರತೀಯ ಸರಣಿಯ ವಿಷಯದಲ್ಲಿ ಏನನ್ನೂ ತಳ್ಳುಹಾಕುವುದಿಲ್ಲ. ಸ್ಥಳದಲ್ಲಿ ಜನರು ಇರಲಿ, ಬಿಡಲಿ ಅಥವಾ ಗ್ಯಾಲರಿಗಳಲ್ಲಿ ಕುಳಿತುಕೊಳ್ಳದಿರಲಿ ಬಿಸಿಸಿಐ, ಭಾರತೀಯ ಆಟಗಾರರು ಮತ್ತು ಅವರ ಸಹಾಯಕ ಸಿಬ್ಬಂದಿ ಜತೆಗೆ ಕ್ರಿಕೆಟ್ ಜಗತ್ತಿಗೆ ಸ್ಫೂರ್ತಿ ನೀಡುವ ಸರಣಿಯನ್ನು ನಾವು ಪ್ರದರ್ಶಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಕ್ರಿಕೆಟ್ ಸ್ತಬ್ಧಗೊಂಡಿದ್ದು ಯಾವುದೇ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com