ಧೋನಿ ಇನ್ಮುಂದೆ ಟೀಂ ಇಂಡಿಯಾ ಪರ ಆಡುವುದು ಕಷ್ಟ: ಹರ್ಭಜನ್ ಸಿಂಗ್

ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾಕ್ಕೆ ಮತ್ತೆ ಕಮ್ ಬ್ಯಾಕ್  ಆಗಲು ಬಯಸುವುದಿಲ್ಲ ಎಂದು ಹಿರಿಯ ಟೀಂ ಇಂಡಿಯಾ ಸ್ಪೀನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ ಸಿಂಗ್
ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ ಸಿಂಗ್

ನವದೆಹಲಿ: ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾಕ್ಕೆ ಮತ್ತೆ ಕಮ್ ಬ್ಯಾಕ್  ಆಗಲು ಬಯಸುವುದಿಲ್ಲ ಎಂದು ಹಿರಿಯ ಟೀಂ ಇಂಡಿಯಾ ಸ್ಪೀನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

ವಿಶ್ವಕಪ್ 2019ರಲ್ಲಿನ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವೇ ಧೋನಿಯ ಕಡೆಯ ಪಂದ್ಯ, ಈಗ ಮತ್ತೆ ತಂಡಕ್ಕೆ ವಾಪಸ್ಸಾಗುವುದಿಲ್ಲ ಎಂದು ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಜೊತೆಗಿನ ಇನ್ಸಾಟಾಗ್ರಾಂ ಲೈವ್  ಅಧಿವೇಶನದಲ್ಲಿ ಹರ್ಭಜನ್ ಸಿಂಗ್ ಬಹಿರಂಗಪಡಿಸಿದ್ದಾರೆ.

ಧೋನಿ ಯಾವಾಗ ಮತ್ತೆ ಮೈದಾನಕ್ಕೆ ವಾಪಸ್ ಆಗಲಿದ್ದಾರೆ ಎಂದು ಇನ್ಸಾಟಾಗ್ರಾಮ್ ಬಳಕೆದಾರರ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, ಈ ಬಗ್ಗೆ ಧೋನಿ ಅವರನ್ನೇ ಕೇಳಿ, ಅವರಿಗೆ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ ಎಂದರು.

ಮತ್ತೊಂದು ಕಡೆಯಿಂದ ಉತ್ತರಿಸಿದ ಹರ್ಭಜನ್ ಸಿಂಗ್, ಧೋನಿ ಮತ್ತೆ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ, ವಿಶ್ವಕಪ್ 2019ರಲ್ಲಿನ ಕೊನೆಯ ಪಂದ್ಯವೇ ಅವರ ಕೊನೆಯ ಪಂದ್ಯ ಎಂಬುದಾಗಿ ಅಂದುಕೊಂಡಿರುವುದಾಗಿ ತಿಳಿಸಿದರು 

ಧೋನಿ ಐಪಿಎಲ್ ಯಲ್ಲಿ ಮುಂದುವರೆಯಲಿದ್ದಾರೆ ಆದರೆ, ಏಕದಿನ ಪಂದ್ಯಕ್ಕೆ ಮರಳುವುದು ಕಷ್ಟಸಾಧ್ಯ. 38 ವರ್ಷದ ಧೋನಿ ಪ್ರಸ್ತುತ ಪಂದ್ಯಗಳಿಂದ ಹೊರಗುಳಿಯುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. 

ವಿಶ್ವಕಪ್ 2019 ಸೆಮಿಫೈನಲ್ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಎಂಎಸ್ ಧೋನಿ ತೀವ್ರ ರೀತಿಯ ಟೀಕೆಗಳಿಗೆ ತುತ್ತಾದ ಬಳಿಕ ಯಾವುದೇ ಪಂದ್ಯಗಳನ್ನಾಡಿಲ್ಲ. ಈ ವರ್ಷದ ಆರಂಭದಲ್ಲಿ ಮಾಡಲಾದ ಬಿಸಿಸಿಐ ಕೇಂದ್ರಿಯ ಗುತ್ತಿಗೆ ಆಟಗಾರರ ಪಟ್ಟಿಯಲ್ಲಿ ಧೋನಿ ಹೆಸರು ಕೂಡಾ ಇಲ್ಲ. 

ಧೋನಿ ನಾಯಕತ್ವದಲ್ಲಿನ ಟೀಂ ಇಂಡಿಯಾ ಏಕದಿನ ವಿಶ್ವಕಪ್, ಟಿ-20 ವಿಶ್ವಕಪ್ ಮತ್ತು ಚಾಂಪಿಯನ್ ಶಿಪ್ ಟ್ರೋಫಿಗಳನ್ನು ಎತ್ತಿ ಹಿಡಿದಿದೆ. ಅಲ್ಲದೇ ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರುವಲ್ಲಿಯೂ ಯಶಸ್ವಿಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com