ಒಮ್ಮೆ ಸಚಿನ್‌ರನ್ನು ಸ್ಲೆಡ್ಜ್ ಮಾಡಿದ್ದೆ, ಮತ್ತೆ ಮಾಡಲು ಧೈರ್ಯವೇ ಬರಲಿಲ್ಲ: ಸಕ್ಲೈನ್ ಮುಷ್ತಾಕ್

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಒಮ್ಮೆ ಸ್ಲೆಡ್ಜ್ ಮಾಡಿದ್ದೆ, ಈ ವೇಳೆ ಅವರು ಆಡಿದ ಆ ಒಂದು ಮಾತು ಕೇಳಿ ನಂತರ ನನಗೆ ಸ್ಲೆಡ್ಜ್ ಮಾಡಲು ಧೈರ್ಯ ಬರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಹೇಳಿದ್ದಾರೆ.

Published: 24th April 2020 08:33 PM  |   Last Updated: 25th April 2020 12:44 PM   |  A+A-


Saqlain Mushtaq-Sachin

ಸಕ್ಲೈನ್ ಮುಷ್ತಾಕ್-ಸಚಿನ್

Posted By : Vishwanath S
Source : Online Desk

ನವದೆಹಲಿ: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಒಮ್ಮೆ ಸ್ಲೆಡ್ಜ್ ಮಾಡಿದ್ದೆ, ಈ ವೇಳೆ ಅವರು ಆಡಿದ ಮಾತು ಕೇಳಿ ನಂತರ ನನಗೆ ಸ್ಲೆಡ್ಜ್ ಮಾಡಲು ಧೈರ್ಯ ಬರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಹೇಳಿದ್ದಾರೆ. 

ಅದು ತೊಂಬತ್ತರ ದಶಕದಲ್ಲಿ ನಡೆದ ಘಟನೆ. ಕೆನಡಾದಲ್ಲಿ ನಡೆದಿದ್ದ ಸಹರಾ ಕಪ್ ಟೂರ್ನಿ ವೇಳೆ ನಾನು ಸಚಿನ್ ರನ್ನು ಸ್ಲೆಡ್ಜ್ ಮಾಡಿದ್ದೆ. ಆಗ ಸಚಿನ್ ನನ್ನ ಬಳಿ ಬಂದು ನಾನು ಎಂದಿಗೂ ನಿನ್ನ ಜೊತೆ ಅಸಭ್ಯವಾಗಿ ವರ್ತಿಸುವುದಿಲ್ಲ. ಆದರೆ ನೀವು ಯಾಕೆ ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. 

ಆಗ ನಾನು ಅವರಿಗೆ ಏನು ಹೇಳಬೇಕೆಂದು ತಿಳಿಯದಷ್ಟು ಮುಜುಗರಕ್ಕೊಳಗಾದೆ. ಆ ನಂತರ ಎಂದಿಗೂ ನಾನು ಅವರನ್ನು ಸ್ಲೆಡ್ಜ್ ಮಾಡುವ ಗೋಜಿಗೆ ಹೋಗಲಿಲ್ಲ ಎಂದು ಹೇಳಿದ್ದಾರೆ. 

ಸಚಿನ್ ತೆಂಡೂಲ್ಕರ್ ಅವರ 47ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಿಟಿಐ ಸಕ್ಲೈನ್ ಮುಷ್ತಾಕ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿಸಿದ್ದು ಈ ವೇಳೆ ಈ ವಿಚಾರವನ್ನು ಮುಷ್ತಾಕ್ ಬಹಿರಂಗಪಡಿಸಿದ್ದಾರೆ. 

ಅವರು ನನಗೆ 'ನಾನು ನಿಮ್ಮನ್ನು ಒಬ್ಬ ವ್ಯಕ್ತಿ ಮತ್ತು ಆಟಗಾರನಾಗಿ ಹೆಚ್ಚು ಗೌರವಿಸುತ್ತೇನೆ ಎಂದು ಹೇಳಿದರು. ಈ ಮಾತಿನಿಂದ ನಾನು ತುಂಬಾ ಮುಜುಗರಕ್ಕೊಳಗಾಗಿದ್ದೆ, ಆನಂತರ ನಾನು ಅವರನ್ನು ಮತ್ತೆ ಸ್ಲೆಡ್ಜ್ ಮಾಡಲಿಲ್ಲ. ನಾನು ಅವರಿಗೆ ಏನು ಹೇಳಿದೆ ಎಂದು ಈಗ ನಾನು ನಿಮಗೆ ಹೇಳಲಾರೆ ಆದರೆ ಆಟದ ನಂತರ ನಾನು ಸಚಿನ್ ಅವರಲ್ಲಿ ಕ್ಷಮೆಯಾಚಿಸಿದೆ ಎಂದು ಹೇಳಿದ್ದಾರೆ.

Stay up to date on all the latest ಕ್ರಿಕೆಟ್ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp