ತಾನು ಮೂರ್ಖನೆಂದು ಅಕ್ಮಲ್ ಸಾಬೀತು ಮಾಡಿದ: ರಮೀಜ್ ರಾಜಾ

ಭ್ರಷ್ಟಾಚಾರ ಆರೋಪದ ಮೇರೆಗೆ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ವಿರುದ್ಧ ವಿಧಿಸಲಾಗಿರುವ ನಿಷೇಧದ ಪಿಸಿಬಿ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀರ್ ರಾಜಾ ಸ್ವಾಗತಿಸಿದ್ದಾರೆ.
ತಾನು ಮೂರ್ಖನೆಂದು ಅಕ್ಮಲ್ ಸಾಬೀತು ಮಾಡಿದ: ರಮೀಜ್ ರಾಜಾ
ತಾನು ಮೂರ್ಖನೆಂದು ಅಕ್ಮಲ್ ಸಾಬೀತು ಮಾಡಿದ: ರಮೀಜ್ ರಾಜಾ

ಲಾಹೋರ್: ಭ್ರಷ್ಟಾಚಾರ ಆರೋಪದ ಮೇರೆಗೆ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ವಿರುದ್ಧ ವಿಧಿಸಲಾಗಿರುವ ನಿಷೇಧದ ಪಿಸಿಬಿ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀರ್ ರಾಜಾ ಸ್ವಾಗತಿಸಿದ್ದಾರೆ. ಅಲ್ಲದೆ ಈ ಬ್ಯಾಟ್ಸ್ ಮನ್ ತಾನು ಮುರ್ಖ ಎಂದು ಅಧಿಕೃತವಾಗಿ ಸಾಬೀತುಪಡಿಸುವ ಮೂಲಕ ಮುರ್ಖರ ಪಟ್ಟಿಗೆ ಸೇರ್ಪಡೆಗೊಂಡಿದ್ದಾನೆ. ಇಂತಹ ಜನರನ್ನು ಜೈಲಿಗೆ ಹಾಕಬೇಕು ಎಂದು ಕಿಡಿಕಾರಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಗೆ ಆಹ್ವಾನಿಸಿದ ಕುರಿತು ವರದಿ ಮಾಡದಿರುವ ಕಾರಣ ಉಮರ್ ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಕ್ರಿಕೆಟ್ ನ ಎಲ್ಲ ಮೂರು ಮಾದರಿಗಳಿಂದ ಮೂರು ವರ್ಷ ನಿಷೇಧ ಹೇರಿದೆ. "ಉಮರ್ ಅಕ್ಮಲ್ ಅಧಿಕೃತವಾಗಿ ಮೂರ್ಖರ ಪಟ್ಟಿಗೆ ಸೇರ್ಪಡೆಯಾಗಿದ್ದಾನೆ. ಮೂರು ವರ್ಷ ನಿಷೇಧಕ್ಕೊಳಗಾಗಿದ್ದಾನೆ. ಮತ್ತೇಕೆ ಸಮಯವನ್ನು ವ್ಯರ್ಥಗೊಳಿಸಬೇಕು. ಮ್ಯಾಚ್ ಫಿಕ್ಸಿಂಗ್ ವಿರುದ್ಧ ಶಾಸನಾತ್ಮಕ ಕಾನೂನು ಜಾರಿಗೊಳಿಸಲು ಪಾಕಿಸ್ತಾನಕ್ಕೆ ಇದು ಅತ್ಯತ್ತುಮ ಸಮಯವಾಗಿದೆ. ಇಂಥವನ್ನು ಜೈಲಿಗೆ ಕಳುಹಿಸದಿದ್ದರೆ ಇತರರಿಗೆ ಭಯ ಉಂಟಾಗುವುದಿಲ್ಲ" ಎಂದು ರಮೀರ್ ರಾಜಾ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ಭ್ರಷ್ಟಾಚಾರ ನಿಗ್ರಹ ಘಟಕದ ಶಿಸ್ತು ಸಮಿತಿಯ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಫಜಲ್ ಇ ಮಿರಾನ್ ಚೌಹಾಣ್, ಸೋಮವಾರ ಅಕ್ಮಲ್ ಗೆ ಎಲ್ಲ ರೀತಿಯ ಕ್ರಿಕೆಟ್ ನಿಂದ ಮೂರು ವರ್ಷ ನಿಷೇಧ ಶಿಕ್ಷೆ ಹೇರಿದ್ದಾರೆ. ಉಮರ್ ಅಕ್ಮಲ್, ಪಾಕಿಸ್ತಾನ ಪರ 16 ಟೆಸ್ಟ್, 121 ಏಕದಿನ ಮತ್ತು 84 ಟಿ20 ಪಂದ್ಯಗಳನ್ನಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com