ನಿವೃತ್ತಿ ಬಳಿಕವೂ ದಕ್ಷಿಣ ಆಫ್ರಿಕಾ ತಂಡವನ್ನು ಮತ್ತೆ ಮುನ್ನಡೆಸುವಂತೆ ಎಬಿ ಡಿವಿಲಿಯರ್ಸ್‌ಗೆ ಆಹ್ವಾನ

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆ ಮಾಜಿ ಕ್ರಿಕೆಟಿಗ ಎಬಿ ಡಿ'ವಿಲಿಯರ್ಸ್‌ ನಿವೃತ್ತಿಯಿಂದ ಹೊರಬಂದ ಬಳಿಕ ಹರಿಣ ಪಡೆಯನ್ನು ಮತ್ತೆ ಮುನ್ನಡೆಸುವಂತೆ ಆಹ್ವಾನ ನೀಡಿದೆಯಂತೆ. ಆದರೆ, ಕಮ್‌ಬ್ಯಾಕ್‌ ಬಳಿಕ ಈ ಹಿಂದಿನ ಶ್ರೇಷ್ಠ ಕಂಡುಕೊಳ್ಳುವುದರ ಬಗ್ಗೆ ಎಬಿಡಿ ಅನುಮಾನ ವ್ಯಕ್ತ ಪಡಿಸಿದ್ದಾರೆ.
ಡಿವಿಲಿಯರ್ಸ್
ಡಿವಿಲಿಯರ್ಸ್

ನವದೆಹಲಿ: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆ ಮಾಜಿ ಕ್ರಿಕೆಟಿಗ ಎಬಿ ಡಿ'ವಿಲಿಯರ್ಸ್‌ ನಿವೃತ್ತಿಯಿಂದ ಹೊರಬಂದ ಬಳಿಕ ಹರಿಣ ಪಡೆಯನ್ನು ಮತ್ತೆ ಮುನ್ನಡೆಸುವಂತೆ ಆಹ್ವಾನ ನೀಡಿದೆಯಂತೆ. ಆದರೆ, ಕಮ್‌ಬ್ಯಾಕ್‌ ಬಳಿಕ ಈ ಹಿಂದಿನ ಶ್ರೇಷ್ಠ ಕಂಡುಕೊಳ್ಳುವುದರ ಬಗ್ಗೆ ಎಬಿಡಿ ಅನುಮಾನ ವ್ಯಕ್ತ ಪಡಿಸಿದ್ದಾರೆ.

2018ರ ಮಧ್ಯದಲ್ಲಿ ಹಠಾತ್ತನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಕ್ರಿಕೆಟರ್‌, 2019ರ ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಕ್ರಿಕೆಟ್‌ ಸಂಸ್ಥೆ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ ಅದು ಸಾಧ್ಯವಾಗಿರಲಿಲ್ಲ. ಇದೀಗ ಕ್ರಿಕೆಟ್‌ ಸೌತ್‌ ಆಫ್ರಿಕಾದ ಆಡಳಿತದಲ್ಲಿ ಬದಲಾವಣೆಯಾಗಿದ್ದು, ಎಬಿಡಿಗೆ ಕಮ್‌ಬ್ಯಾಕ್‌ ಮಾಡಲು ರಹದಾರಿ ಮಾಡಿಕೊಡಲಾಗಿದೆ.

"ದಕ್ಷಿಣ ಆಫ್ರಿಕಾ ತಂಡದ ಪರ ಮರಳಿ ಆಡುವ ತುಡಿತ ನನ್ನಲ್ಲಿದೆ. ಅಂದಹಾಗೆ ತಂಡವನ್ನು ಮುನ್ನಡೆಸುವಂತೆ ಕೂಡ ಆಹ್ವಾನ ಸಿಕ್ಕಿದೆ ಎಂದು 36 ವರ್ಷದ ಅನುಭವಿ ಬಲಗೈ ಬ್ಯಾಟ್ಸ್‌ಮನ್‌ ಡಿ'ವಿಲಿಯರ್ಸ್ ಸ್ಟಾರ್‌ ಸ್ಪೋರ್ಟ್ಸ್‌ ನಡೆಸಿಕೊಟ್ಟ ಕ್ರಿಕೆಟ್‌ ಕನೆಕ್ಟೆಡ್‌ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com