ಕೊಹ್ಲಿ, ಸೆಹ್ವಾಗ್, ಸಚಿನ್‌ಗೆ ಅತ್ಯುತ್ತಮ ವಿರೋಧಿಗಳ ಪಟ್ಟ

ಆಸ್ಟ್ರೇಲಿಯಾ ತಂಡದ ಮಾಜಿ ಬ್ಯಾಟ್ಸ್ ಮನ್ ಮೈಕಲ್ ಹಸ್ಸಿ ಆಯ್ಕೆ ಮಾಡಿರುವ ಟೆಸ್ಟ್ ಕ್ರಿಕೆಟ್ ನ ಅತ್ಯುತ್ತಮ ವಿರೋಧಿಗಳ ಇಲೆವೆನ್ ತಂಡದಲ್ಲಿ ಭಾರತದ ಬ್ಯಾಟಿಂಗ್ ಮಾಸ್ಟರ್ ಗಳಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.
ಸಚಿನ್-ಕೊಹ್ಲಿ
ಸಚಿನ್-ಕೊಹ್ಲಿ

ಸಿಡ್ನಿ: ಆಸ್ಟ್ರೇಲಿಯಾ ತಂಡದ ಮಾಜಿ ಬ್ಯಾಟ್ಸ್ ಮನ್ ಮೈಕಲ್ ಹಸ್ಸಿ ಆಯ್ಕೆ ಮಾಡಿರುವ ಟೆಸ್ಟ್ ಕ್ರಿಕೆಟ್ ನ ಅತ್ಯುತ್ತಮ ವಿರೋಧಿಗಳ ಇಲೆವೆನ್ ತಂಡದಲ್ಲಿ ಭಾರತದ ಬ್ಯಾಟಿಂಗ್ ಮಾಸ್ಟರ್ ಗಳಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.

ಬ್ಯಾಟಿಂಗ್ ಕ್ರಮಾಂಕದಲ್ಲಿ ಸೆಹ್ವಾಗ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರನ್ನು ಆರಂಭಿಕರಾಗಿ ಹೆಸರಿಸಿರುವ ಹಸ್ಸಿ, ಬ್ರಿಯಾನ್ ಲಾರಾ, ತೆಂಡೂಲ್ಕರ್, ಕೊಹ್ಲಿ, ಜಾಕ್ ಕಾಲಿಸ್ ಮತ್ತು ಕುಮಾರ ಸಂಗಕ್ಕಾರಗೆ ನಂತರ ಸ್ಥಾನ ಕಲ್ಪಿಸಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ದ. ಆಫ್ರಿಕಾದ ಡೇಲ್ ಸ್ಟೇನ್, ಮಾರ್ನ್ ಮಾರ್ಕೆಲ್, ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ ಮತ್ತು ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್ ಸ್ಥಾನ ಪಡೆದಿದ್ದಾರೆ.

2005ರಿಂದ 2013ರವರೆಗೆ ಆಸ್ಟ್ರೇಲಿಯಾ ಪರ 79 ಟೆಸ್ಟ್, 185 ಏಕದಿನ ಮತ್ತು 38 ಟಿ20 ಪಂದ್ಯಗಳನ್ನಾಡಿರುವ ಎಡಗೈ ಆಟಗಾರ ಹಸ್ಸಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಸಹ ಆಟಗಾರ ಮಹೇಂದ್ರ ಸಿಂಗ್ ಅವರನ್ನು ಆಯ್ಕೆ ಮಾಡಿಲ್ಲ. 

ಮೈಕಲ್ ಹಸ್ಸಿಯ ಅತ್ಯುತ್ತಮ ವಿರೋಧಿಗಳ(ಎದುರಾಳಿ) ಇಲೆವೆನ್ ತಂಡ ಇಂತಿದೆ: ವೀರೇಂದ್ರ ಸೆಹ್ವಾಗ್, ಗ್ರೇಮ್ ಸ್ಮಿತ್, ಬ್ರಿಯಾನ್ ಲಾರಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಜಾಕ್ ಕಾಲಿಸ್, ಕುಮಾರ ಸಂಗಕ್ಕಾರ, ಡೇಲ್ ಸ್ಟೇನ್, ಮಾರ್ನ್ ಮಾರ್ಕೆಲ್, ಜೇಮ್ಸ್ ಆ್ಯಂಡರ್ಸನ್ ಮತ್ತು ಮುತ್ತಯ್ಯ ಮುರಳೀಧರನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com