ದೇವರ ಆಶೀರ್ವಾದ: ಗಂಡು ಮಗುವಿನ ಫೋಟೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ!

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಶನಿವಾರ ತಮ್ಮ ಮನೆಗೆ ಆಗಮಿಸಿರುವ ನೂತನ ಗಂಡು ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Published: 01st August 2020 02:40 PM  |   Last Updated: 01st August 2020 05:00 PM   |  A+A-


Pandya_is_seen_holding_the_baby_boy_in_his_arms_in_a_hospital1

ಮಗುವಿನೊಂದಿಗೆ ಹಾರ್ದಿಕ್ ಪಾಂಡ್ಯ

Posted By : Nagaraja AB
Source : The New Indian Express

ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಶನಿವಾರ ತಮ್ಮ ಮನೆಗೆ ಆಗಮಿಸಿರುವ ನೂತನ ಗಂಡು ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಹಾರ್ದಿಕ್ ಪಾಂಡ್ಯ ಕೈಯಲ್ಲಿ ಮಗುವನ್ನು ಕೈಗಳಿಂದ ಹಿಡಿದು ಸಂತೋಷದಿಂದ ನೋಡುತ್ತಿರುವ ಫೋಟೋವನ್ನು 
'ದೇವರಿಂದ ಆಶೀರ್ವಾದ 'ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

 

ಪಾಂಡ್ಯ ಹಾಗೂ ನಟಾಸಾ ಸ್ಟಾಂಕೊವಿಕ್ ದಂಪತಿ ಗುರುವಾರ ವಡೋದರದಲ್ಲಿ ಗಂಡು ಮಗುವಿಗೆ  ಜನ್ಮ ನೀಡಿದ್ದು,  ಮಗುವಿನ ಕೈ ಹಿಡಿದಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. 

ಈ ಇಬ್ಬರು ಮೇ  ತಿಂಗಳಲ್ಲೇ ನಮ್ಮ ಕುಟುಂಬಕ್ಕೆ ಹೊಸ ಸದಸ್ಯ ಬರಲಿದ್ದಾನೆ ಎಂದು ಘೋಷಿಸಿದ್ದರು. ಈ ವರ್ಷಾರಂಭದಲ್ಲಿ ಹಾರ್ದಿಕ್ ಪಾಂಡ್ಯ ನಟಾಸಾ ಅವರೊಂದಿಗೆ ಮದುವೆ ನಿಶ್ಚಿತಾರ್ಥವಾಗಿರುವ ವಿಚಾರವನ್ನು ತಿಳಿಸಿದ್ದರು. ಜನವರಿ 1ರಂದು ನಟಾಸಾಗೆ ಮದುವೆಯ ಪ್ರಸ್ತಾಪ ಮಾಡುವ ಚಿತ್ರವನ್ನು ಹಂಚಿಕೊಂಡಿದ್ದ ಹಾರ್ದಿಕ್  ಪಾಂಡ್ಯ, ' ಮೇ ತೇರಾ, ತೂ ಮೇರಿ
ಜಾನ್, ಸಾರಾ ಹಿಂದೂಸ್ತಾನ್ ಎಂದು ಬರೆದುಕೊಂಡಿದ್ದರು.

Stay up to date on all the latest ಕ್ರಿಕೆಟ್ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp