ಕ್ರೀಡಾಸ್ಫೂರ್ತಿಯನ್ನೇ ಪ್ರಶ್ನಿಸುವಂತಿದ್ದ ಮಂಕಿಗೇಟ್ ಪ್ರಕರಣ ಕುರಿತು ಅನಿಲ್ ಕುಂಬ್ಳೆ ಹೇಳಿದಿಷ್ಟು!

2007ರ ಆಸ್ಟ್ರೇಲಿಯಾ-ಭಾರತ ನಡುವಿನ ಟೆಸ್ಟ್ ಸರಣಿ ವೇಳೆ ನಡೆದಿದ್ದ ಮಂಕಿಗೇಟ್ ಪ್ರಕರಣ ಕ್ರಿಕೆಟ್ ಇತಿಹಾಸದಲ್ಲೇ ಕಹಿ ಘಟನೆಯಾಗಿ ಉಳಿದಿದೆ. ಇನ್ನು ಮಂಕಿಗೇಟ್ ನಂತರದ ನಿರ್ಧಾರ ಸವಾಲಿನದಾಗಿತ್ತು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ. 
ಕುಂಬ್ಳೆ-ಹರ್ಭಜನ್ ಸಿಂಗ್
ಕುಂಬ್ಳೆ-ಹರ್ಭಜನ್ ಸಿಂಗ್

ನವದೆಹಲಿ: 2007ರ ಆಸ್ಟ್ರೇಲಿಯಾ-ಭಾರತ ನಡುವಿನ ಟೆಸ್ಟ್ ಸರಣಿ ವೇಳೆ ನಡೆದಿದ್ದ ಮಂಕಿಗೇಟ್ ಪ್ರಕರಣ ಕ್ರಿಕೆಟ್ ಇತಿಹಾಸದಲ್ಲೇ ಕಹಿ ಘಟನೆಯಾಗಿ ಉಳಿದಿದೆ. ಇನ್ನು ಮಂಕಿಗೇಟ್ ನಂತರದ ನಿರ್ಧಾರ ಸವಾಲಿನದಾಗಿತ್ತು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ. 

ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್ ಅವರನ್ನು ಮಂಕಿ ಎಂದು ಕರೆದು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಹರ್ಭಜನ್ ಸಿಂಗ್ ಗುರಿಯಾಗಿದ್ದರು. ಈ ಆರೋಪದಿಂದ ಭಜ್ಜಿ ಮೂರು ಪಂದ್ಯಗಳ ನಿಷೇಧಕ್ಕೂ ಒಳಗಾಗಿದ್ದರು. ನಿಷೇಧದ ಜೊತೆಗೆ ಪಂದ್ಯ ಶುಲ್ಕದ ಅರ್ಧ ಮೊತ್ತವನ್ನು ತಡೆಹಿಯಲಾಗಿತ್ತು.

ದೊಡ್ಡ ವಿವಾದ ಸೃಷ್ಟಿಸಿದ್ದ ಮಂಕಿಗೇಟ್ ಪ್ರಕರಣ ಬಳಿಕ ಟೆಸ್ಟ್ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸಾಗಲು ಅವಕಾಶವಿತ್ತು. ಆದರೆ ಹಾಗೆ ಮಾಡದೆ ಕ್ರೀಡಾಸ್ಫೂರ್ತಿ ಮೆರೆದ ತಂಡಕ್ಕೆ ನಂತರ ಒಳ್ಳೆಯದೇ ಆಯಿತು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. 

ಕೆಲ ಅಹಿತಕರ ಘಟನೆಗಳು ಸಂಭವಿಸಿದಾಗ ಮೈದಾನದಲ್ಲೇ ನಾಯಕನಾದವರು ಸೂಕ್ತ ನಿರ್ಧಾರವನ್ನು ಕೈಗೊಳ್ಳಲು ಬದ್ಧನಾಗಿರಬೇಕು. ಆದರೆ ಮಂಕಿಗೇಟ್ ಪ್ರಕರಣದಲ್ಲಿ ಮೈದಾನದ ಹೊರಗೂ ಸೂಕ್ತ ನಿರ್ಧಾರ ಕೈಗೊಳ್ಳುವ ಸವಾಲು ಎದುರಾಗಿತ್ತು ಎಂದರು. 

ಕ್ರೀಡೆಯ ಮಹತ್ವವನ್ನು ಉಳಿಸುವ ಸವಾಲು ಎದುರಾಗಿತ್ತು. ಸರಣಿಯನ್ನು ಮೊಟಕುಗೊಳಿಸಿ ಅರ್ಧಕ್ಕೆ ವಾಪಸ್ಸಾದರೆ ಭಾರತವೇ ತಪ್ಪು ಮಾಡಿದ್ದು ಹೀಗಾಗಿ ವಾಪಸಾಗಿದೆ ಎಂದು ಜನರು ಹೇಳುತ್ತಿದ್ದರು ಎಂದು ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನಲ್ ಷೋನಲ್ಲಿ ಕುಂಬ್ಳೆ ಹೇಳಿದರು. 

ಈ ಪ್ರಕರಣದಲ್ಲಿ ಐಸಿಸಿ ನಿರ್ಧಾರದಿಂದ ಹರ್ಭಜನ್ ಸಿಂಗ್ ಗೆ ಅನ್ಯಾಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಕುಂಬ್ಳೆ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com