2012ರ ಏಷ್ಯಾಕಪ್: ಪಾಕಿಸ್ತಾನ ವಿರುದ್ಧ ಅಬ್ಬರಿಸಿದ್ದ ಪಂದ್ಯವೇ ಕೊಹ್ಲಿಯ ಅತ್ಯುತ್ತಮ ಇನ್ನಿಂಗ್ಸ್ ಗಳಲ್ಲಿ ಒಂದು: ಗಂಭೀರ್

2012ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ 183 ರನ್ ಗಳಿಸಿದ ಇನ್ನಿಂಗ್ಸ್ ಏಕದಿನ ಕ್ರಿಕೆಟ್‌ನ ಅತ್ಯುತ್ತಮ ಇನ್ನಿಂಗ್ಸ್ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಬಣ್ಣಿಸಿದ್ದಾರೆ.
ಗಂಭೀರ್-ಕೊಹ್ಲಿ
ಗಂಭೀರ್-ಕೊಹ್ಲಿ

ನವದೆಹಲಿ: 2012ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ 183 ರನ್ ಗಳಿಸಿದ ಇನ್ನಿಂಗ್ಸ್ ಏಕದಿನ ಕ್ರಿಕೆಟ್‌ನ ಅತ್ಯುತ್ತಮ ಇನ್ನಿಂಗ್ಸ್ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಬಣ್ಣಿಸಿದ್ದಾರೆ.

ಏಷ್ಯಾಕಪ್‌ನ ಐದನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 330 ರನ್‌ಗಳ ಬಲವಾದ ಗುರಿಯನ್ನು ಬೆನ್ನಟ್ಟಿತು. ವಿರಾಟ್ 22 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಾಯದಿಂದ 148 ಎಸೆತಗಳಲ್ಲಿ 183 ರನ್ ಗಳಿಸಿದ್ದರು. ಮತ್ತು 13 ಎಸೆತಗಳನ್ನು ಬಾಕಿ ಇರುವಾಗ ಭಾರತವು ಆರು ವಿಕೆಟ್‌ಗಳಿಂದ ಜಯಗಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಕೊಹ್ಲಿ ಟೀಂ ಇಂಡಿಯಾ ಪರವಾಗಿ ಮೂರು ಮಾದರಿಯಲ್ಲೂ ಅಸಾಧ್ಯವಾದ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಆದರೆ ಪಾಕ್ ವಿರುದ್ಧ ಆಡಿದ್ದ ಇನ್ನಿಂಗ್ಸ್ ಅತ್ಯಂತ ಶ್ರೇಷ್ಠವಾದದ್ದು ಎಂದು ಗಂಭೀರ್ ಹೇಳಿದ್ದಾರೆ. 

ಸ್ಟಾರ್ ಸ್ಪೋರ್ಟ್ಸ್ ನ ಬೆಸ್ಟ್ ಏಷ್ಯಾ ಕಪ್ ಶೋನಲ್ಲಿ ಮಾತನಾಡಿದ ಗಂಭೀರ್ ಅವರು ನಾವು 330 ರನ್ ಚೇಸ್ ಮಾಡುತ್ತಿದ್ದೇವು. ಅದಾಗಲೇ ತಂಡ ಶೂನ್ಯಕ್ಕೆ 1 ವಿಕೆಟ್ ಕಳೆದುಕೊಂಡಿತ್ತು. ಈಗ ಕೊಹ್ಲಿ 183 ರನ್ ಗಳಿಸಿದ್ದರು. ಈ ಪಂದ್ಯದ ಗೆಲುವಿಗೆ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com