ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಯ ದಾಖಲೆ ಮುರಿದ ಇಯಾನ್ ಮೋರ್ಗನ್

ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗನ್ ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ  ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂ.ಎಸ್. ಧೋನಿ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ.
ಇಯಾನ್ ಮೋರ್ಗನ್
ಇಯಾನ್ ಮೋರ್ಗನ್

ಲಂಡನ್: ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗನ್ ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂ.ಎಸ್. ಧೋನಿ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ದೋನಿ ಹೊಂದಿದ್ದ ನಾಯಕನಾಗಿ ಹೆಚ್ಚಿನ ಸಿಕ್ಸರ್ ಗಳಿಸಿದ ಅಂತರರಾಷ್ಟ್ರೀಯ ದಾಖಲೆಯನ್ನು ಮೋರ್ಗನ್ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ತಮ್ಮ ವೃತ್ತಿಬದುಕಿನಲ್ಲಿ  328 ಅಂತರರಾಷ್ಟ್ರೀಯ ಸಿಕ್ಸರ್‌ಗಳನ್ನು ಸಿಡಿಸಿರುವ ಮೋರ್ಗನ್ ನಾಯಕನಾಗಿ 212 ನೇ ಸಿಕ್ಸರ್ ಸಿಡಿಸುವ ಮೂಲಕ ಧೋನಿ ಹೆಸರಲ್ಲಿದ್ದ ದಾಖಲೆ ಮುರಿದರು. 

ಧೋನಿ 332 ಪಂದ್ಯಗಳಲ್ಲಿ ನಾಯಕನಾಗಿ 211 ಸಿಕ್ಸರ್‌ಗಳನ್ನು ಹೊಂದಿದ್ದಾರೆ. ಮತ್ತೊಂದೆಡೆ, ಮೋರ್ಗನ್ ಅರ್ಧಕ್ಕಿಂತ ಕಡಿಮೆ ಪಂದ್ಯಗಳಲ್ಲಿ (163) 212 ಸಿಕ್ಸರ್‌ಗಳನ್ನು  ಸಿಡಿಸಿ ಗಮನ ಸೆಳೆದಿದ್ದಾರೆ.

ಆದಾಗ್ಯೂ, ಧೋನಿ ಇನ್ನೂ ಮೂರು ಸ್ವರೂಪಗಳಲ್ಲಿನ ಕ್ರಿಕೆಟ್ ನಲ್ಲಿ ವೃತ್ತಿಜೀವನದ ಸಿಕ್ಸರ್‌ಗಳ ವಿಷಯದಲ್ಲಿ ಮೋರ್ಗನ್‌ಗಿಂತ ಮುಂದಿದ್ದಾರೆ. ಮೋರ್ಗನ್ ಅವರ 328 ಕ್ಕೆ ಹೋಲಿಸಿದರೆ ಧೋನಿ 359 ಸಿಕ್ಸೆಕ್ಸ್ ದಾಖಲೆ ಹೊಂದಿದ್ದಾರೆ.

ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ 171 ಸಿಕ್ಸರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್(170) ನಂತರದ ಸ್ಥಾನದಲ್ಲಿದ್ದಾರೆ.

ಮೋರ್ಗನ್ ಮಂಗಳವಾರ ಕೇವಲ 84 ಎಸೆತಗಳಲ್ಲಿ ಐದು ಸಿಕ್ಸರ್ ಗಳೊಂದಿಗೆ 106 ರನ್ ಗಳಿಸಿ ಇಂಗ್ಲೆಂಡ್ ಐರ್ಲೆಂಡ್ ವಿರುದ್ಧ 328 ರನ್ ಗಳಿಸಲು ನೆರವಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com