ಪ್ರೇಕ್ಷಕರಿಗೆ ಅನುಮತಿಸಿದರೆ ಮೆಲ್ಬೋರ್ನ್​ನಲ್ಲೆ ಆಸ್ಟ್ರೇಲಿಯಾ VS ಭಾರತ ಬಾಕ್ಸಿಂಗ್ ಡೇ ಟೆಸ್ಟ್: ಕ್ರಿಕೆಟ್ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಯೋಜಿಸುವ ಇಚ್ಛೆಯನ್ನು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣ ಕೈಬಿಟ್ಟಿಲ್ಲ. 
ಟೀಂ ಇಂಡಿಯಾ
ಟೀಂ ಇಂಡಿಯಾ

ಮೆಲ್ಬೋರ್ನ್: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಯೋಜಿಸುವ ಇಚ್ಛೆಯನ್ನು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣ ಕೈಬಿಟ್ಟಿಲ್ಲ. 

ಒಂದು ವೇಳೆ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಅನುಮತಿಸಿದರೆ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲೇ ಪಂದ್ಯವನ್ನು ಆಯೋಜಿಸಲಾಗುತ್ತದೆ. ಒಂದು ವೇಳೆ ಕೊರೋನಾ ನಿಯಂತ್ರಣಕ್ಕೆ ಬಾರದೇ ಹೋದರೆ ಪಂದ್ಯವನ್ನು ಅಡಿಲೇಡ್ ಗೆ ಸ್ಥಳಾಂತರಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ನಿಕ್ ಹಾಕ್ಲೆ ಹೇಳಿದ್ದಾರೆ. 

ಕೊರೋನಾವನ್ನು ಎದುರಿಸಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದ್ದು ಅವು ಶೀಘ್ರವಾಗಿ ಪರಿಣಾಮ ಬೀರುತ್ತವೆ ಎಂದು ನಾವು ಭಾವಿಸುತ್ತೇವೆ. ಒಂದು ವೇಳೆ ಹಿಂದಿನ ಪರಿಸ್ಥಿತಿಗೆ ಹಿಂತಿರುಗಿ ಜನರು ಹೊರಬರುವಂತಾದರೆ ಕ್ರೀಡಾಂಗಣಕ್ಕೂ ಜನರು ಬರುತ್ತಾರೆ. ಆಗ ಲೈವ್ ಈವೆಂಟ್‌ಗಳಿಗೆ ಹಿಂತಿರುಗಬಹುದು ಎಂದು ನಿಕ್ ಹಾಕ್ಲೆ ಹೇಳಿದ್ದಾರೆ. 

"ನಾವು ಬಿಸಿಸಿಐ(ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಮತ್ತು ಸರ್ಕಾರದೊಂದಿಗೆ ರಚನಾತ್ಮಕ ಚರ್ಚೆಯಲ್ಲಿದ್ದೇವೆ, ಭಾರತಕ್ಕೆ ಬರುವ ಎಲ್ಲಾ ಪ್ರಯಾಣ ವಿನಾಯಿತಿಗಳನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ವಿಶ್ವ ಕ್ರಿಕೆಟ್‌ನ ಅಪ್ರತಿಮ ಸ್ಥಳಗಳಲ್ಲಿ ಒಂದಾಗಿರುವ ಮೆಲ್ಬೋರ್ನ್ ಕ್ರಿಕೆಟ್ ಮೈದಾನವು ಈ ವರ್ಷದ ಮಾರ್ಚ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ 86,174 ಅಭಿಮಾನಿಗಳು ಆಗಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com