ಐಪಿಎಲ್ ಟೈಟಲ್ ಪ್ರಾಯೋಜಕತ್ವ: ಅಮೆಜಾನ್, ಅನ್ಅಕಾಡೆಮಿ ಕಣ್ಣು

ಈ ಬಾರಿಯ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಕಂಪನಿ ವಿವೋ ಹಿಂದೆ ಸರಿದಿರುವಂತೆಯೇ ಹೊಸ ಬ್ರಾಂಡ್ ಗಳಿಗೆ ಮಾರುಕಟ್ಟೆ ತೆರದುಕೊಂಡಿದ್ದು, ಅಮೆಜಾನ್ ಮತ್ತು  ಅನ್ಅಕಾಡೆಮಿ ಕಣ್ಣು ಇಟ್ಟಿವೆ.
ಐಪಿಎಲ್
ಐಪಿಎಲ್

ನವದೆಹಲಿ: ಈ ಬಾರಿಯ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಕಂಪನಿ ವಿವೋ ಹಿಂದೆ ಸರಿದಿರುವಂತೆಯೇ  ಹೊಸ ಬ್ರಾಂಡ್ ಗಳಿಗೆ ಮಾರುಕಟ್ಟೆ ತೆರದುಕೊಂಡಿದ್ದು,ಅಮೆಜಾನ್ ಮತ್ತು ಅನ್ ಅಕಾಡೆಮಿ ಕಣ್ಣು ಇಟ್ಟಿವೆ. ಜಿಯೋ ಕೂಡಾ ಕಪ್ಪು ಕುದುರೆ ಎನ್ನಲಾಗುತ್ತಿದೆ.

ಅಮೆಜಾನ್ ನಂತಹ ಬ್ರಾಂಡ್ ಗಳಿಗೆ ದೀವಾಳಿ ವಾರಾಂತ್ಯದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಲು ಐಪಿಎಲ್ ಕಾರಣವಾಗಲಿದೆ. ಅಲ್ಲದೇ, ವಿವೋ ಜೊತೆಗೆ ಮಾಡಿಕೊಂಡಿದ್ದ 440 ಕೋಟಿ ಒಪ್ಪಂದಕ್ಕಿಂತ ಕಡಿಮೆ ಒಪ್ಪಂದವೇರ್ಪಡಬಹುದು. ಅವಕಾಶಗಳನ್ನು ಕಬಳಿಸಲು ಇದು ಡಬಲ್ ಗೆಲುವಿನ ಪರಿಸ್ಥಿತಿಯಾಗಬಹುದು ಎಂದು ಮಾರ್ಕೆಟ್ ವಿಶ್ಲೇಷಕರೊಬ್ಬರು ಐಎಎನ್ಎಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಲಾಕ್ ಡೌನ್  ಮತ್ತು ಆರ್ಥಿಕತೆ ಪರಿಣಾಮದ ನಂತರ ಇ- ಲರ್ನಿಂಗ್ ಮತ್ತು ಇ- ಕಾಮರ್ಸ್ ವಲಯದ ಈ ಎರಡು ಕಂಪನಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ.ಕ್ರಿಕೆಟ್ ಜೊತೆಗೆ ಸಹವಾಸ ಬೆಳೆಸಲು ಅನ್ ಅಕಾಡೆಮಿ ಎದುರು ನೋಡುತ್ತಿದೆ.

ಮತ್ತೊಂದೆಡೆ ಫೈನಲ್ ಮುಗಿದ ನಾಲ್ಕು ದಿನಗಳ ನಂತರ ದೀಪಾವಳಿ ಹಬ್ಬಇದೆ. ತಿಂಗಳು ಇಡೀ ಆಚರಿಸುವ ದೀಪಾವಳಿ ಹಬ್ಬಕ್ಕೆ ಅಮೆಜಾನ್ ಅಥವಾ ಫ್ಲಿಪ್ ಕಾರ್ಟ್ ನಂತಹ ಇ-ಮಾರ್ಕೆಟ್ ಕಂಪನಿಗಳ ವಸ್ತುಗಳಿಗೆ ವೇದಿಕೆ ಒದಗಿಸುವಲ್ಲಿಯೂ ಐಪಿಎಲ್ ನೆರವಾಗಲಿದೆ. ಇದಕ್ಕೆ ಸಿದ್ಧವಾದರೆ ಅಮೆಜಾನ್ ಐಪಿಎಲ್ ಪ್ರಾಯೋಜಕತ್ವದ ಮುಂಚೂಣಿಯಲ್ಲಿ ಬರಲಿದೆ ಎಂದು ಚಲನಚಿತ್ರ ಜಾಹೀರಾತು ನಿರ್ಮಾಪಕ ಪ್ರಹ್ಲಾದ್ ಕಕ್ಕರ್ ಹೇಳುತ್ತಾರೆ.

ಮತ್ತೊಂದೆಡೆ ಈಗಾಗಲೇ 8 ತಂಡಗಳೊಂದಿಗೆ ಸಹಭಾಗಿತ್ವ ಹೊಂದಿರುವ, ಬಿಸಿಸಿಐನೊಂದಿಗೆ ಪಾಲುದಾರರಾಗಿರುವ  ಜಿಯೋ ಕಂಪನಿ  ಐಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದರೂ ಅಶ್ಚರ್ಯಪಡಬೇಕಾಗಿಲ್ಲ ಎಂದು ಮತ್ತೋರ್ವ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com