ಜಾಗತಿಕವಾಗಿ ಕೊಹ್ಲಿ, ರೋಹಿತ್, ಧೋನಿ ಅತ್ಯಂತ ಜನಪ್ರಿಯ ಕ್ರಿಕೆಟಿಗರು: ಅಧ್ಯಯನ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜನಪ್ರಿಯತೆಗೆ ಯಾವುದೇ ಮಿತಿಯಿಲ್ಲ ಎಂಬುದನ್ನು ಮತ್ತೊಮ್ಮೆ ಅಧ್ಯಯನವೊಂದು ಪುನಃ ದೃಢಪಡಿಸಿದ್ದು ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ ಎಂದು ತಿಳಿದುಬಂದಿದೆ.

Published: 10th August 2020 07:18 PM  |   Last Updated: 10th August 2020 07:18 PM   |  A+A-


Dhoni-Kohli-Rohit

ಧೋನಿ-ಕೊಹ್ಲಿ-ರೋಹಿತ್ ಶರ್ಮಾ

Posted By : Vishwanath S
Source : IANS

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜನಪ್ರಿಯತೆಗೆ ಯಾವುದೇ ಮಿತಿಯಿಲ್ಲ ಎಂಬುದನ್ನು ಮತ್ತೊಮ್ಮೆ ಅಧ್ಯಯನವೊಂದು ಪುನಃ ದೃಢಪಡಿಸಿದ್ದು ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ ಎಂದು ತಿಳಿದುಬಂದಿದೆ.

ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ತಂಡಕ್ಕೆ ಸಂಬಂಧಿಸಿದಂತೆ 'ಟೀ ಇಂಡಿಯಾ' ಸಹ ಅಗ್ರಸ್ಥಾನದಲ್ಲಿದೆ.

ಅಧ್ಯಯನದ ಪ್ರಕಾರ, ಈ ವರ್ಷದ ಜನವರಿಯಿಂದ ಜೂನ್‌ವರೆಗೆ ಕೊಹ್ಲಿಯನ್ನು ತಿಂಗಳಿಗೆ ಸರಾಸರಿ 16.2 ಲಕ್ಷದಷ್ಟು ಆನ್‌ಲೈನ್‌ನಲ್ಲಿ ಹುಡುಕಲಾಗಿದ್ದು, ಭಾರತೀಯ ಕ್ರಿಕೆಟ್ ತಂಡವನ್ನು ಇದೇ ಅವಧಿಯಲ್ಲಿ ತಿಂಗಳಿಗೆ ಸರಾಸರಿ 2.4 ಲಕ್ಷ ಬಾರಿ ಹುಡುಕಲಾಗಿದೆ.

ಅಧ್ಯಯನದ ಪ್ರಕಾರ, ಟಾಪ್ -10ರ ಇತರ ಕ್ರಿಕೆಟಿಗರು ರೋಹಿತ್ ಶರ್ಮಾ, ಎಂ.ಎಸ್.ಧೋನಿ, ಜಾರ್ಜ್ ಮ್ಯಾಕೆ, ಜೋಶ್ ರಿಚರ್ಡ್ಸ್, ಹಾರ್ದಿಕ್ ಪಾಂಡ್ಯ, ಸಚಿನ್ ತೆಂಡೂಲ್ಕರ್, ಕ್ರಿಸ್ ಮ್ಯಾಥ್ಯೂಸ್ ಮತ್ತು ಶ್ರೇಯಸ್ ಅಯ್ಯರ್. 2020ರ ಜನವರಿಯಿಂದ ಜೂನ್ ವರೆಗೆ ಪ್ರತಿ ಕ್ರಿಕೆಟಿಗನನ್ನು ಕ್ರಮವಾಗಿ ಸರಾಸರಿ 9.7, 9.4, 9.1, 7.1, 6.7, 5.4, 4.1 ಮತ್ತು 3.4 ಲಕ್ಷ ಬಾರಿ ಹುಡುಕಲಾಗಿದೆ.

ಕ್ರಿಕೆಟ್ ತಂಡಗಳಿಗೆ ಸಂಬಂಧಿಸಿದಂತೆ, ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆ. ಪ್ರತಿ ಕ್ರಿಕೆಟ್ ತಂಡವನ್ನು ಕ್ರಮವಾಗಿ .66, .33, .29, .23, .16, .12, .12, .09, .05, .04, ಮತ್ತು .03 ಲಕ್ಷ ಬಾರಿ ಹುಡುಕಲಾಯಿತು.

Stay up to date on all the latest ಕ್ರಿಕೆಟ್ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp