ಇಂಗ್ಲೆಂಡ್ ಗಿಂತ ಪಾಕಿಸ್ತಾನ ಉತ್ತಮ ತಂಡ ಎಂದ ಇಂಜಮಾಮ್ ಉಲ್ ಹಕ್

ಪಾಕಿಸ್ತಾನ ತಂಡ ಇಂಗ್ಲೆಂಡ್ ಗಿಂತಲೂ ಉತ್ತಮ ತಂಡ ಎಂದು ಉಲ್ಲೇಖಿಸಿರುವ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಅಜರ್ ಅಲಿ ತಂಡ ಮೊದಲ ಟೆಸ್ಟ್ ಸೋಲಿನಿಂದ ಪುಟಿದೇಳಲಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಜಯಿಸುವ ಸಾಮರ್ಥ್ಯ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Published: 10th August 2020 08:22 PM  |   Last Updated: 10th August 2020 08:22 PM   |  A+A-


Inzamam-ul-Haq

ಇಂಜಿಮಾಮ್ ಉಲ್ ಹಕ್

Posted By : Vishwanath S
Source : UNI

ನವದೆಹಲಿ: ಪಾಕಿಸ್ತಾನ ತಂಡ ಇಂಗ್ಲೆಂಡ್ ಗಿಂತಲೂ ಉತ್ತಮ ತಂಡ ಎಂದು ಉಲ್ಲೇಖಿಸಿರುವ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಅಜರ್ ಅಲಿ ತಂಡ ಮೊದಲ ಟೆಸ್ಟ್ ಸೋಲಿನಿಂದ ಪುಟಿದೇಳಲಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಜಯಿಸುವ ಸಾಮರ್ಥ್ಯ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಅಂತಿಮ ದಿನದಂದು ಪಾಕಿಸ್ತಾನ ಗೆಲ್ಲುವ ಹೊಸ್ತಿಲಲ್ಲಿತ್ತು. ಆದರೆ ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಅವರ ಪ್ರತಿದಾಳಿ ಹೊಡೆತಕ್ಕೆ ಧನ್ಯವಾದಗಳನ್ನು ಹೇಳಲೇಬೇಕು ಎಂದು ಇಂಜಮಾಮ್ ನುಡಿದಿದ್ದಾರೆ. 

120 ಟೆಸ್ಟ್ ನಿಂದ 8830 ರನ್ ಮತ್ತು 378 ಏಕದಿನ ಪಂದ್ಯಗಳಿಂದ 11739 ರನ್ ಕಲೆಹಾಕಿರುವ 50 ವರ್ಷದ ಇಂಜಮಾಮ್, ಪಾಕಿಸ್ತಾನವು ಗೆಲುವಿನ ಬಾಗಿಲಲ್ಲಿ ಸೋಲು ಕಂಡಿರುವುದು ನಿರಾಶಾದಾಯಕವಾಗಿದೆ. ಆದರೆ ಎರಡನೇ ಪಂದ್ಯದತ್ತ ಎಲ್ಲ ವಿಷಯಗಳನ್ನು ಸೆಳೆಯಲು ತಮ್ಮ ದೇಶವನ್ನು ಬೆಂಬಲಿಸಬೇಕಿದೆ ಎಂದಿದ್ದಾರೆ.

Stay up to date on all the latest ಕ್ರಿಕೆಟ್ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp