ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ

ಮುಂಬರುವ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಋತುವಿನ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ‘ಆಸಕ್ತಿಯ ಅಭಿವ್ಯಕ್ತಿ’ (ಬಿಡ್) ಆಹ್ವಾನಿಸಿದೆ.
ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ

ನವದೆಹಲಿ: ಮುಂಬರುವ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಋತುವಿನ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ‘ಆಸಕ್ತಿಯ ಅಭಿವ್ಯಕ್ತಿ’(ಬಿಡ್) ಆಹ್ವಾನಿಸಿದೆ.

" 2020ರ ಆಗಸ್ಟ್ 18ರಿಂದ 2020ರ ಡಿಸೆಂಬರ್ 31ರವರೆಗಿನ ಅವಧಿಗೆ ಮಾತ್ರ ಹಕ್ಕುಗಳು ಲಭ್ಯವಿದೆ. ಹಕ್ಕುಗಳು ಲಭ್ಯವಿರುವ ಉತ್ಪನ್ನಗಳು ಮತ್ತು ಉತ್ಪನ್ನ ವರ್ಗಗಳಿಗೆ ಸಂಬಂಧಿಸಿದ ವಿವರಗಳನ್ನು ಇಒಐ ಸಲ್ಲಿಸುವ ಮತ್ತು ಅರ್ಹರಾಗಿರುವ ವ್ಯಕ್ತಿಗಳಿಗೆ ಮಾತ್ರ ಒದಗಿಸಲಾಗುತ್ತದೆ," ಎಂದು ಬಿಸಿಸಿಐ ಹೇಳಿದೆ.

" ಕೊನೆಯ ಲೆಕ್ಕ ಪರಿಶೋಧನೆಯ ಖಾತೆಗಳ ಪ್ರಕಾರ ಆಸಕ್ತ ಮೂರನೇ ವ್ಯಕ್ತಿಯ ವಹಿವಾಟು 300 ಕೋಟಿ ರೂ. ಇರಬೇಕು," ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಬಿಸಿಸಿಐ ತನ್ನ ಮೇಲ್ ನಲ್ಲಿ ಆಸಕ್ತ 'ಮೂರನೇ ವ್ಯಕ್ತಿಗಳು' ತಮ್ಮ 'ಆಸಕ್ತಿಯ ಅಭಿವ್ಯಕ್ತಿ'ಯನ್ನು 2020ರ ಆಗಸ್ಟ್ 14ರಂದು ಸಂಜೆ 5 ಗಂಟೆಯೊಳಗೆ ಕಳುಹಿಸುವಂತೆ ಕೋರಿದೆ.

ಇಒಐ ವಿತರಣೆಯ ನಂತರ, ಬಿಸಿಸಿಐ ಹಕ್ಕುಗಳು, ಉತ್ಪನ್ನ ವಿಭಾಗಗಳು ಮತ್ತು ಅರ್ಹ ಮೂರನೇ ವ್ಯಕ್ತಿಗಳಿಗೆ ಅರ್ಹತೆಗಳನ್ನು ತಿಳಿಸುತ್ತದೆ. ಅಂತಿಮ ಬಿಡ್ ಅನ್ನು 2020ರ ಆಗಸ್ಟ್ 18ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರ ನಡುವೆ eoi@bcci.tv ಗೆ ಕಳುಹಿಸಬೇಕು,”ಎಂದು ಬಿಸಿಸಿಐ ತನ್ನ ಮೇಲ್ ನಲ್ಲಿ ತಿಳಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com