ವೃತ್ತಿ ಜೀವನಕ್ಕೆ ವಿದಾಯ ಹೇಳಲು ಪ್ರಮುಖ ಕಾರಣ ತಿಳಿಸಿದ ಗಿಲ್‌ಕ್ರಿಸ್ಟ್‌!

ವಿಶ್ವದ ಶ್ರೇಷ್ಠ ವಿಕೆಟ್‌ ಕೀಪರ್‌ಗಳಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಮ್‌ ಗಿಲ್‌ಕ್ರಿಸ್ಟ್ ಕೂಡ ಒಬ್ಬರು. 2008ರಲ್ಲಿ ಭಾರತದ ವಿರುದ್ಧ ಅಡಿಲೇಡ್‌ನಲ್ಲಿ ನಡೆದಿದ್ದ 4ನೇ ಟೆಸ್ಟ್ ವೇಳೆ ವಿಕೆಟ್‌ ಕೀಪರ್‌ ತಕ್ಷಣ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದರು. ಅಂದು ವಿವಿಯಸ್‌ ಲಕ್ಷ್ಮಣ್‌ ಅವರ ಕ್ಯಾಚ್‌ ಬಿಟ್ಟಿದ್ದೆ ಪ್ರಮುಖ ಕಾರಣ ಎಂಬುದು ವರದಿಗಾರರಿಗೆ ಮನವರಿಕೆಯ
ಆಡಂ ಗಿಲ್ ಕ್ರಿಸ್ಟ್
ಆಡಂ ಗಿಲ್ ಕ್ರಿಸ್ಟ್

ನವದೆಹಲಿ: ವಿಶ್ವದ ಶ್ರೇಷ್ಠ ವಿಕೆಟ್‌ ಕೀಪರ್‌ಗಳಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಮ್‌ ಗಿಲ್‌ಕ್ರಿಸ್ಟ್ ಕೂಡ ಒಬ್ಬರು. 2008ರಲ್ಲಿ ಭಾರತದ ವಿರುದ್ಧ ಅಡಿಲೇಡ್‌ನಲ್ಲಿ ನಡೆದಿದ್ದ 4ನೇ ಟೆಸ್ಟ್ ವೇಳೆ ವಿಕೆಟ್‌ ಕೀಪರ್‌ ತಕ್ಷಣ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದರು. ಅಂದು ವಿವಿಯಸ್‌ ಲಕ್ಷ್ಮಣ್‌ ಅವರ ಕ್ಯಾಚ್‌ ಬಿಟ್ಟಿದ್ದೆ ಪ್ರಮುಖ ಕಾರಣ ಎಂಬುದು ವರದಿಗಾರರಿಗೆ ಮನವರಿಕೆಯಾಗಿತ್ತು. 

ವೃತ್ತಿ ಜೀವನಕ್ಕೆ ವಿದಾಯ ಹೇಳಿ 12 ವರ್ಷಗಳ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಆಡಮ್‌ ಗಿಲ್‌ಕ್ರಿಸ್ಟ್, ಭಾರತದ ವಿರುದ್ಧ ಅಡಿಲೇಡ್‌ ಟೆಸ್ಟ್ ಪಂದ್ಯದಲ್ಲಿ ವಿವಿಯಸ್‌ ಲಕ್ಷ್ಮಣ್‌ ಅವರ ಕ್ಯಾಚ್ ಬಿಟ್ಟಿದ್ದು ಅಂದು ತಾವು ತೆಗೆದುಕೊಂಡಿದ್ದ ನಿವೃತ್ತಿ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸಿತ್ತು ಎಂದು ಹೇಳಿಕೊಂಡಿದ್ದಾರೆ.

ಟಿವಿ ನಿರೂಪಕಿ ಮಡೋನಾ ಟಿಕ್ಸೀರಾ ಅವರ 'ಲೈವ್‌ ಕನೆಕ್ಟ್' ಶೋನಲ್ಲಿ ಮಾತನಾಡಿದ ಆಸೀಸ್‌ ಮಾಜಿ ವಿಕೆಟ್‌ ಕೀಪರ್‌," ಅಡಿಲೇಡ್‌ ಟೆಸ್ಟ್ ಪಂದ್ಯದಲ್ಲಿ ವಿವಿಎಸ್‌ ಲಕ್ಷ್ಮಣ್‌ ಅವರ ಕ್ಯಾಚ್‌ ಬಿಟ್ಟಿದ್ದು, ವೃತ್ತಿ ಜೀವನಕ್ಕೆ ವಿದಾಯ ಹೇಳಲು ಒಳ್ಳೆಯ ಕಾರಣವಾಗಿತ್ತು. ನೀವು ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಬಯಸುವುದಿಲ್ಲ," ಎಂದು ಅವರು ಹೇಳಿದರು.

ನಿವೃತ್ತಿಯ ವರದಿಗಳನ್ನು ನಿರಾಕರಿಸುವ ಮೂಲಕ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಕಾಲಿಟ್ಟ ಗಿಲ್‌ಕ್ರಿಸ್ಟ್, ಟೆಸ್ಟ್ ಪಂದ್ಯ ನಡೆಯುತ್ತಿರುವಾಗ ತಕ್ಷಣ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದು ಎಲ್ಲರಿಗೂ ಅಚ್ಚರಿ ಉಂಟುಮಾಡಿತ್ತು.

ತನ್ನ ದೊಡ್ಡ ಹೊಡೆತಗಳಿಂದ ಪಂದ್ಯದ ಹಾದಿಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದ ಆಡಮ್‌ ಗಿಲ್‌ಕ್ರಿಸ್ಟ್, ವಿವಿಎಸ್‌ ಲಕ್ಷ್ಮಣ್ ಮತ್ತು ಹರಭಜನ್ ಸಿಂಗ್‌ ಯಾವಾಗಲೂ ಆಸ್ಟ್ರೇಲಿಯಾತಂಡಕ್ಕೆ ದೊಡ್ಡ ಸವಾಲಾಗಿ ಪರಿಣಿಸಿದ್ದರು ಎಂದು ಹೇಳಿದ್ದಾರೆ. "ಅವರು (ವಿವಿಯಸ್‌ ಲಕ್ಷ್ಮಣ್‌), ನಮ್ಮನ್ನು ಉರುಳಿಸಲು ಭಾರತದ ಬ್ಯಾಟಿಂಗ್ ವಿಭಾಗವನ್ನು ಸಮರ್ಪಕವಾಗಿ ಬಳಸುತ್ತಿದ್ದರು. ನಂತರ ಹರಭಜನ್ ಸಿಂಗ್ ಬಂದು ಬೌಲಿಂಗ್‌ ಮಾಡಿ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದರು," ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com