ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಬಹುಮುಖ್ಯ ಸಲಹೆ ನೀಡಿದ ರಾಹುಲ್‌ ದ್ರಾವಿಡ್

ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಮಾಜಿ ಕ್ರಿಕೆಟಿಗರ ಅನುಭವದ ಲಾಭವನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು  ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಸಲಹೆ ನೀಡಿದ್ದಾರೆ.
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ನವದೆಹಲಿ:ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಮಾಜಿ ಕ್ರಿಕೆಟಿಗರ ಅನುಭವದ ಲಾಭವನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು  ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಸಲಹೆ ನೀಡಿದ್ದಾರೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸದಸ್ಯತ್ವ ಪಡೆದಿರುವ ಎಲ್ಲಾ ರಾಜ್ಯ ಕ್ರಿಕೆಟ್‌  ಸಂಸ್ಥೆಗಳನ್ನು ಉದ್ದೇಶಿಸಿ ಬಿಸಿಸಿಐನ ವಿಶೇಷ ವೆಬಿನಾರ್‌ನಲ್ಲಿ  ಮಾತನಾಡಿರುವ ರಾಹುಲ್ ದ್ರಾವಿಡ್, ತಮ್ಮ ಸಲಹೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕಾಗಿಲ್ಲ, ರಾಜ್ಯಗಳ ಅನುಕೂಲಕ್ಕೆ ತಕ್ಕಂತೆ ಪರಿಗಣಿಸಬಹುದು ಎಂದಿದ್ದಾರೆ.

ವಿವಿಧ ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಕಾರ್ಯದರ್ಶಿಗಳು, ಕ್ರಿಕೆಟ್‌ ಕಾರ್ಯಗಳ ಮುಖ್ಯಸ್ಥರು, ಭಾರತ ತಂಡದ  ಮಾಜಿ ಓಪನರ್‌ ಸುಜಿತ್‌ ಸೋಮಸುಂದರ್ (ಎನ್‌ಸಿಎ ಶಿಕ್ಷಣ ವಿಭಾಗದ ಮುಖ್ಯಸ್ಥ) ಮತ್ತು ಟ್ರೇನರ್  ಆಶಿಶ್‌ ಕೌಶಿಕ್‌ ಬಿಸಿಸಿಐ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು.

 ಇದೇ ವೇಳೆ ಕೋವಿಡ್‌-19 ಸಂಕಷ್ಟದ ಸಮಯದಲ್ಲಿ ಆಟಗಾರರು ಫಿಟ್ನೆಸ್‌ ಕಾಯ್ದುಕೊಳ್ಳುವಂತೆ ಮಾಡಲು  ನೆರವಾಗಲು ಏನೆಲ್ಲಾ ಮಾಡಬೇಕು ಎಂಬುದರ ಕಡೆಗೂ ಚರ್ಚೆಯಾಗಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ಕೂಡ ಆಗಿರುವ ರಾಹುಲ್‌ ದ್ರಾವಿಡ್‌ ಹಲವು ಉಪಯುಕ್ತ ಸಲಹೆಗಳನ್ನೂ  ಕೂಡ ಹಂಚಿಕೊಂಡರು.

"ಮಾಜಿ ಕ್ರಿಕೆಟಿಗರ ಅನುಭವವನ್ನು ಬಳಸಿಕೊಳ್ಳಬೇಕು ಎಂಬುದು ಕಡ್ಡಾಯ ಎಂದು ರಾಹುಲ್‌ ದ್ರಾವಿಡ್ ಎಲ್ಲಿಯೂ ಹೇಳಲಿಲ್ಲ. ಆದರೆ, ಈ ಕಡೆಗೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಗಮನ ನೀಡಬೇಕು ಎಂದು ಸಲಹೆ ಕೊಟ್ಟರು," ಎಂದು ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದ ರಾಜ್ಯ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿಯೊಬ್ಬರು ಪಿಟಿಐ ಸುದ್ಧಿ ಸಂಸ್ಥೆಗೆ ಹೇಳಿದ್ದಾರೆ.ಆಟಗಾರರಿಗೆ ಆನ್‌ಲೈನ್‌ ತರಬೇತಿ!ಇನ್ನು ಕೊರೊನಾ ವೈರಸ್‌ ಹರಡುವ ಭಯ ಆವರಿಸಿರುವ ಕಾರಣ ಒಂದೆಡೆ 25-30 ಆಟಗಾರರು ಒಟ್ಟಾಗಿ ಅಭ್ಯಾಸ ಮಾಗುವುದು ಸಾಧ್ಯವಿಲ್ಲವಾಗಿದೆ.

ಹೀಗಾಗಿ ಆಟಗಾರರ ಅಭ್ಯಾಸ ಅಲುವಾಗಿ ಆನ್‌ಲೈನ್‌ ತರಬೇತಿ ಉತ್ತಮ ಮಾರ್ಗೋಪಾಯವಾಗಲಿದೆ ಎಂದು ವೆಬಿನಾರ್‌ನಲ್ಲಿ ದ್ರಾವಿಡ್‌, ಸುಜಿತ್ ಮತ್ತು ಕೌಶಿಕ್‌ ಅಭಿಪ್ರಾಯ ಪಟ್ಟಿದ್ದಾರೆ."ಮಾಜಿ ಕ್ರಿಕೆಟಿಗರನ್ನು ಬಳಿಸಿಕೊಂಡರೆ ಅವರ ಅನುಭವ ವ್ಯರ್ಥವಾಗುವುದಿಲ್ಲ. ಇನ್ನು ಭವಿಷ್ಯದಲ್ಲಿ ಆನ್‌ ತರಬೇತಿ ಬಹುಮುಖ್ಯ ಪಾತ್ರವಹಿಸಲಿದೆ. ಸದ್ಯದ ಪರಿಸ್ಥಿತಿಗಳಲ್ಲಿ 25-30 ಆಟಗಾರರು ಒಂದೆಡೆ ಸೇರಿ ಅಭ್ಯಾಸ ಮಾಡಲಾಗದು," ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com