ಅಂತರಾಷ್ಟ್ರೀಯ ಎಡಚರರ ದಿನ: ವಿಶ್ವಶ್ರೇಷ್ಠ  ಎಡಗೈ ಬ್ಯಾಟ್ಸ್‌ಮನ್ ಗಳನ್ನು ನೆನೆದ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ 

ಅಂತರರಾಷ್ಟ್ರೀಯ ಎಡಚರರ ದಿನಾಚರಣೆಯಾಗಿರುವ ಇಂದು (ಗುರುವಾರ ಆ.೧೩) ಭಾರತದ ಮಾಜಿ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಕ್ರಿಕೆಟ್‌ನ "ಶ್ರೇಷ್ಠ ಎಡಗೈ ಬ್ಯಾಟ್ಸ್‌ಮನ್ ಗಳಿಗೆ " ಗೌರವ ಸಲ್ಲಿಸಿದ್ದಾರೆ.
ಯುವರಾಜ್ ಸಿಂಗ್
ಯುವರಾಜ್ ಸಿಂಗ್

ನವದೆಹಲಿ: ಅಂತರರಾಷ್ಟ್ರೀಯ ಎಡಚರರ ದಿನಾಚರಣೆಯಾಗಿರುವ ಇಂದು (ಗುರುವಾರ ಆ.೧೩) ಭಾರತದ ಮಾಜಿ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಕ್ರಿಕೆಟ್‌ನ "ಶ್ರೇಷ್ಠ ಎಡಗೈ ಬ್ಯಾಟ್ಸ್‌ಮನ್ ಗಳಿಗೆ " ಗೌರವ ಸಲ್ಲಿಸಿದ್ದಾರೆ.

ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾ, ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಮತ್ತು ಆಡಮ್ ಗಿಲ್‌ಕ್ರಿಸ್ಟ್ ಅವರನ್ನೊಳಗೊಂಡ ಕೊಲಾಜ್ ಅನ್ನು ಯುವರಾಜ್ ಟ್ವೀಟ್ ಮಾಡಿದ್ದಾರೆ.

"ಕ್ರಿಕೆಟ್ ನಲ್ಲಿನ ಕೆಲ ಶ್ರೇಷ್ಠ ಎಡಗೈ ಬ್ಯಾಟ್ಸ್‌ಮನ್ ಗಳಿಗೆ ನನ್ನ ಗೌರವ ಸೂಚನೆ ಇಲ್ಲಿದೆ. ಈ ಗೋಲ್ಡನ್ ಲಿಸ್ಟ್ ಗೆ ನಿಮ್ಮ ನೆಚ್ಚಿನ ಎಡಗೈ ಬ್ಯಾಟ್ಸ್‌ಮನ್ ಗಳ ಹೆಸರು ಸೇರಿಸಿ ನನ್ನೊಡನೆ ಹಂಚಿಕೊಳ್ಳಿ#InternationalLeftHandersDay," ಯುವರಾಜ್ ಬರೆದುಕೊಂಡಿದ್ದಾರೆ. 

ಯುವರಾಜ್ ಸ್ವತಃ ಎಡಗೈಬ್ಯಾಟ್ಸ್‌ಮನ್ ಆಗಿದ್ದರು, ಮತ್ತು ಅವರ ವೃತ್ತಿಜೀವನದ ಅವಧಿಯಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಕೆಲವು ಅದ್ಭುತ ವಿಜಯಗಳಿಗೆ ಕಾರಣವಾಗಿದ್ದಾರೆ. . ಅವರು 2000 ರಲ್ಲಿ ಕೀನ್ಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿ, ಜೂನ್ 2017 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ  ಏಕದಿನ ಪಂದ್ಯದ ನಂತರ ಏಕದಿನ ಕ್ರಿಕೆಟ್ ನಿಂದ ನಿವೃತ್ತರಾದರು,  ಹಾಗೆಯೇ ಅವರು 2019 ರ ಜೂನ್‌ನಲ್ಲಿ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತರಾದರು.

38 ರ ಹರೆಯದ ಯುವರಾಜ್  2007 ರ ವಿಶ್ವ ಟಿ 20 ಮತ್ತು 2011 ರ ವಿಶ್ವಕಪ್‌ನಲ್ಲಿ ತಮ್ಮ ಸಾಧನೆಗಳೊಂದಿಗೆ ಭಾರತದ ಶ್ರೇಷ್ಠ ಕ್ರಿಕೆಟ್ ಟೀಂ ನ ಭಾಗವಾಗಿದ್ದರು, ಬ್ಯಾಟಿಂಗ್ ಶ್ರೇಷ್ಠತೆ ಮಾತ್ರವಲ್ಲದೆ ಯುವರಾಜ್ ಎಡಗೈ ಸ್ಪಿನ್ನರ್ ಸಹ ಆಗಿದ್ದರು,  ಅವರ ಬೌಲಿಂಗ್ 2011 ರ ವಿಶ್ವಕಪ್‌ನಲ್ಲಿ ಅವರ ಬ್ಯಾಟಿಂಗ್‌ನಷ್ಟೇ ದೊಡ್ಡ ಪಾತ್ರವನ್ನು ವಹಿಸಿತು. ಅವರು ಏಕದಿನ ವೃತ್ತಿಜೀವನದಲ್ಲಿ 8,701 ರನ್ ಗಳಿಸಿದ್ದರೆ  111 ವಿಕೆಟ್‌ಗಳನ್ನು ಪಡೆದಿದ್ದರು,  ಟೆಸ್ಟ್‌ನಲ್ಲಿ 1,900 ರನ್ ಮತ್ತು ಟಿ 20 ಐಗಳಲ್ಲಿ 1,177 ರನ್ ಗಳಿಸಿದ್ದರು, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com