ಇಡೀ ವಿಶ್ವ ನಿಮ್ಮ ಸಾಧನೆಯನ್ನು ಕಂಡಿದೆ, ನಾನು ಒಬ್ಬ ವ್ಯಕ್ತಿಯನ್ನು ನೋಡಿದೆ: ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ವಿದಾಯಕ್ಕೆ ಕೊಹ್ಲಿ ಪ್ರತಿಕ್ರಿಯೆ

ಇಡೀ ವಿಶ್ವ ನಿಮ್ಮ ಸಾಧನೆಯನ್ನು ಕಂಡಿದೆ. ನಾನು ನಿಮ್ಮಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿದ್ದೇನೆಂದು ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಿದ ಮಹೇಂದ್ರ ಸಿಂಗ್ ಧೋನಿ ಕುರಿತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಹೇಳಿದ್ದಾರೆ. 
ಎಂಎಸ್.ಧೋನಿ, ವಿರಾಟ್ ಕೊಹ್ಲಿ
ಎಂಎಸ್.ಧೋನಿ, ವಿರಾಟ್ ಕೊಹ್ಲಿ

ನವದೆಹಲಿ: ಇಡೀ ವಿಶ್ವ ನಿಮ್ಮ ಸಾಧನೆಯನ್ನು ಕಂಡಿದೆ. ನಾನು ನಿಮ್ಮಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿದ್ದೇನೆಂದು ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಿದ ಮಹೇಂದ್ರ ಸಿಂಗ್ ಧೋನಿ ಕುರಿತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಹೇಳಿದ್ದಾರೆ. 

ಭಾರತೀಯ ಕ್ರಿಕೆಟ್'ಗೆ ಎಲ್ಲವನ್ನೂ ಕೊಟ್ಟ ಅತ್ಯಪೂರ್ವ ನಾಯಕ ಧೋನಿಯಾಗಿದ್ದು, ಧೋನಿ ನಿನ್ನೆಯಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಿದ್ದಾರೆ. 

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿಯವರು, ಪ್ರತಿ ಕ್ರಿಕೆಟಿಗನೂ ಒಂದಲ್ಲ ಒಂದು ದಿನ ನಿವೃತ್ತಿ ಘೋಷಿಸಬೇಕು. ಆದರೆ, ಬಹಳ ಹತ್ತಿರವಾದವರು ನಿವೃತ್ತಿ ನಿರ್ಧಾರ ಕೈಗೊಂಡಾಗ ಬೇಸರವಾಗುತ್ತದೆ. ನಿಮ್ಮ ಸಾಧನೆಗಳು ಈ ದೇಶದ ಪ್ರತಿಯೊಬ್ಬರ ಮನದಲ್ಲೂ ಉಳಿಯಲಿದೆ. ಇದೀ ವಿಶ್ವ ನಿಮ್ಮ ಸಾಧನೆಗಳನ್ನು ಕಂಡಿದೆ. ನಾನು ನಿಮ್ಮಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿದ್ದೇನೆ. ಥ್ಯಾಂಕ್ಯೂ ನಾಯಕ. ಎಂದು ಟ್ವೀಟ್ ಮಾಡಿದ್ದಾರೆ. 

ಭಾರತದ ಮಾಜಿ ಕ್ರಿಕೆಟಿಗೆ, ಕ್ರಿಕೆಟ್ ದಂತಕಥೆ ಮತ್ತು ಭಾರತ ರತ್ನ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ, ಭಾರತೀಯ ಕ್ರಿಕೆಟ್'ಗೆ ನಿಮ್ಮ ಕೊಡುಗೆ ಅಪಾರವಾದದ್ದು. 2011ರಲ್ಲಿ ಜೊತೆಯಾಗಿ ಐಸಿಸಿ ಏಕದಿನ ವಿಶ್ವಕಪ್ ಜಯಿಸಿದ್ದು ನನ್ನ ಜೀವನದ ಅತ್ಯಂತ ಶ್ರೇಷ್ಠ ಕ್ಷಣ. ಆ ಕ್ಷಣವನ್ನು ಎಂದಿಗೂ ಮರೆಯಲಾರೆ. 2ನೇ ಇನ್ನಿಂಗ್ಸ್ ಆರಂಬಿಸುತ್ತಿರುವ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಶುಭಾ ಹಾರೈಸಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ. 

ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ಕ್ರಿಕೆಟ್ ದಂತಕಥೆ ಎಂ.ಎಸ್.ಧೋನಿ ನಿವೃತ್ತಿ ಘೋಷಿಸಿದ್ದಾರೆ. ಸುವರ್ಣ ಕ್ಷಣಗಳನ್ನು ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದ. ನಿಮ್ಮ ಮುಂದಿನ ಇನ್ನಿಂಗ್ಸ್'ಗೆ ಶುಭ ಹಾರೈಸುತ್ತೇನೆಂದು ತಿಳಿಸಿದ್ದಾರೆ. 

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮಾಡಿ ಇದೊಂದು ಯುಗಾಂತ್ಯ, ಎಂತಹ ಅಮೋಘ ಕ್ರಿಕೆಟಿಗನನ್ನು ಈ ದೇಶ ಹಾಗೂ ಕ್ರಿಕೆಟ್ ಜಗತ್ತು ಕಂಡಿತು. ಧೋನಿಯ ನಾಯಕತ್ವ ಗುಣಮಗಳನ್ನು ಮತ್ತೊಬ್ಬರಿಂದ ಕಾಣುವುದು ಬಹಳ ಕಷ್ಟ. ಅದರಲ್ಲೂ ಸೀಮಿತ ಓವರ್ ಕ್ರಿಕೆಟ್ ನಲ್ಲಿ ಧೋನಿಗೆ ದೋನಿಯೇ ಸಾಟಿ ಎಂದು ಹೇಳಿದ್ದಾರೆ. 

ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಟ್ವೀಟ್ ಮಾಡಿ, ಅತ್ಯದ್ಭುತ ಅಂತರಾಷ್ಟ್ರೀಯ ವೃತ್ತಿ ಬದುಕನ್ನು ಕಂಡ ನಿಮಗೆ ಅಭಿನಂದನೆ. ನಿಮ್ಮೊಂದಿಗೆ ಆಡಿದ್ದು ನನಗೆ ಸಿಕ್ಕ ಗೌರವ. ನಿಮ್ಮ ತಾಳ್ಮೆ ಹಾಗೂ ನೀವು ದೇಶಕ್ಕೆ ತಂಡುಕೊಟ್ಟ ಕೀರ್ತಿ ಸದಾ ಎಲ್ಲರ ನೆನಪುಗಳಲ್ಲಿ ಉಳಿಯಲಿದೆ. ನಿಮಗೆ ಶುಭ ಹಾರೈಸುತ್ತೇನೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com