ಭಯಾನಕ ವಾತವಾರಣದಲ್ಲಿ ಭಾರತ ಜೊತೆಗಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಕಷ್ಟ ಸಾಧ್ಯ-ಇಮ್ರಾನ್ ಖಾನ್

ಪ್ರಸುತ್ತ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಹದಗೆಟ್ಟಿದ್ದು, ಭಯಾನಕ ವಾತವಾರಣದಲ್ಲಿ  ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

Published: 18th August 2020 12:33 AM  |   Last Updated: 18th August 2020 12:35 AM   |  A+A-


India-Pak_player_Imrankhan1

ಭಾರತ-ಪಾಕಿಸ್ತಾನ ತಂಡ, ಪ್ರಧಾನಿ ಇಮ್ರಾನ್ ಖಾನ್

Posted By : Nagaraja AB
Source : PTI

ಇಸ್ಲಾಮಾಬಾದ್: ಪ್ರಸುತ್ತ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಹದಗೆಟ್ಟಿದ್ದು, ಭಯಾನಕ ವಾತವಾರಣದಲ್ಲಿ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

ಪ್ರಸ್ತುತ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವಣ ಕ್ರಿಕೆಟ್ ಆಯೋಜನೆ ಸಾಧ್ಯವಿಲ್ಲ ಎಂದು ಅವರು ಸ್ಕೈ ಸ್ಪೂರ್ಟ್ಸ್ ಡಾಕ್ಯುಮೆಂಟರಿಗೆ ತಿಳಿಸಿದ್ದಾರೆ.

2008ರಲ್ಲಿ ಮುಂಬೈ ದಾಳಿ ನಡೆದ ನಂತರ ಈವರೆಗೂ ಭಾರತ ಮತ್ತು ಪಾಕಿಸ್ತಾನ ನಡುವಣ ಟೆಸ್ಟ್ ಪಂದ್ಯ ನಡೆದಿಲ್ಲ. ಆದಾಗ್ಯೂ, 2012ರಲ್ಲಿ ಏಕದಿನ ಪಂದ್ಯವಾಡಲು ಪಾಕಿಸ್ತಾನ ಭಾರತಕ್ಕೆ ಕಿರು ಪ್ರವಾಸ ಕೈಗೊಂಡಿತ್ತು. 1992ರ ವಿಶ್ವಕಪ್ ವಿಜೇತ ಪಾಕಿಸ್ತಾನ ತಂಡದ ನಾಯಕರಾಗಿದ್ದ ಇಮ್ರಾನ್ ಖಾನ್, 1979 ಮತ್ತು 1987ರಲ್ಲಿ ನಡೆದ ಭಾರತದಲ್ಲಿ ನಡೆದಿದ್ದ ಎರಡು ಸರಣಿಗಳನ್ನು ನೆನಪು ಮಾಡಿಕೊಂಡಿದ್ದು, ಆ ಸಂದರ್ಭದಲ್ಲಿ ಉಭಯ ರಾಷ್ಟ್ರಗಳಿಗಿಂತಲೂ ಕ್ರಿಕೆಟ್ ಗೆ ಉತ್ತಮ ವಾತಾವರಣವಿತ್ತು ಎಂದಿದ್ದಾರೆ.

1979ರಲ್ಲಿ ಬೃಹತ್ ಅಭಿಮಾನಿ ಬಳಗವಿತ್ತು, ಸರ್ಕಾರಗಳು ಕೂಡಾ ಅಡೆತಡೆ ತೊಡೆದುಹಾಕಲು ಪ್ರಯತ್ನಿಸುತ್ತಿದ್ದವು. ಅಭಿಮಾನಿಗಳು ಉಭಯ ತಂಡಗಳಿಗೂ ಮೆಚ್ಚುಗೆ ಸೂಚಿಸುತ್ತಿದ್ದರು. ಆದರೆ, 1987ರಲ್ಲಿ ಭಾರತದಲ್ಲಿ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಉಭಯ ರಾಷ್ಟ್ರಗಳ ಸರ್ಕಾರಗಳ ನಡುವಣ ಸಂಬಂಧ ಬಿಗಡಾಯಿಸಿದ್ದರಿಂದ ಅಭಿಮಾನಿಗಳು ಹಗೆತನ ಸಾಧಿಸುತ್ತಿದ್ದರು.

2005ರಲ್ಲಿ ಪಾಕಿಸ್ತಾನಕ್ಕೆ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ತಮ್ಮ ದೇಶ ಸೋತರೂ ಪ್ರೇಕ್ಷಕರು ಭಾರತವನ್ನು ಹುರಿದುಂಬಿಸುತ್ತಿದ್ದರು ಎಂದು ಹೇಳಿದ ಇಮ್ರಾನ್,  ಭಾರತ-ಪಾಕಿಸ್ತಾನ ಸರಣಿ ಆಸ್ಟ್ರೇಲಿಯಾಕ್ಕಿಂತ ದೊಡ್ಡ  ಪ್ರತಿಸ್ಪರ್ಧಿಗಳಾಗಿವೆ ಎಂದು ಸ್ಪಷ್ಪಪಡಿಸಿದರು.

Stay up to date on all the latest ಕ್ರಿಕೆಟ್ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp