ಹೊಡೆದಾಡಿಕೊಂಡ ಎಂಎಸ್ ಧೋನಿ-ರೋಹಿತ್ ಅಭಿಮಾನಿಗಳು: ಓರ್ವನ ಸ್ಥಿತಿ ಗಂಭೀರ!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿಗಳು ಬ್ಯಾನರ್ ವಿಚಾರಕ್ಕೆ ಬಡಿದಾಡಿಕೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ. 

Published: 23rd August 2020 06:09 PM  |   Last Updated: 23rd August 2020 06:09 PM   |  A+A-


Rohit Sharma-MS Dhoni

ರೋಹಿತ್ ಶರ್ಮಾ-ಎಂಎಸ್ ಧೋನಿ

Posted By : Vishwanath S
Source : Online Desk

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿಗಳು ಬ್ಯಾನರ್ ವಿಚಾರಕ್ಕೆ ಬಡಿದಾಡಿಕೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ. 

ಬ್ಯಾನರ್ ಹಾಕುವ ವಿಚಾರಕ್ಕೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕುರುಂದವಾಡ್ ನಲ್ಲಿ ಈ ಘಟನೆ ನಡೆದಿದ್ದು ಧೋನಿ ಅಭಿಮಾನಿಗಳು ರೋಹಿತ್ ಅಭಿಮಾನಿಯೋರ್ವನನ್ನು ಗಂಭೀರವಾಗಿ ಥಳಿಸಿದ್ದಾರೆ. 

ಎಂಎಸ್ ಧೋನಿ ಆಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಧೋನಿ ಅಭಿಮಾನಿಗಳು ಕುರುಂದವಾಡ್ ನಲ್ಲಿ ಬ್ಯಾನರ್ ಹಾಕಿದ್ದರು. ಇನ್ನು ನಿನ್ನೆ ರೋಹಿತ್ ಶರ್ಮಾ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಣೆಯಾಗಿತ್ತು. ಇದರಿಂದಾಗಿ ರೋಹಿತ್ ಅಭಿಮಾನಿಗಳು ಅದೇ ಜಾಗದಲ್ಲಿ ಬ್ಯಾನರ್ ಹಾಕಿದ್ದರು. ಈ ವೇಳೆ ಧೋನಿ ಬ್ಯಾನರ್ ಅನ್ನು ಕಿತ್ತು ಹಾಕಲಾಗಿತ್ತು. 

ಇದರಿಂದ ರೊಚ್ಚಿಗೆದ್ದ ಎಂಎಸ್ ಧೋನಿ ಅಭಿಮಾನಿಗಳು ರೋಹಿತ್ ಅಭಿಮಾನಿ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ನಂತರ ಆತನನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. 

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp