ಪ್ರತಿಯೊಂದು ಪಂದ್ಯದಲ್ಲಿ ನಾನೇ ನಾಯಕನೆಂದು ತಿಳಿದು ಆಡಿದ್ದೇನೆ: ಕೆಎಲ್ ರಾಹುಲ್

ಕರ್ನಾಟಕದ ತಾರೆ ಕೆಎಲ್‌ ರಾಹುಲ್‌ಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಅತ್ಯಂತ ಮಹತ್ವದ್ದಾಗಿದೆ. ಐಪಿಎಲ್‌ 2020 ಟೂರ್ನಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಮುನ್ನಡೆಸುವ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಮೊತ್ತ ಮೊದಲ ಬಾರಿ ಫ್ರಾಂಚೈಸಿ ತಂಡದ ನಾಯಕನಾಗಿ ಹೊಸ ಇನಿಂಗ್ಸ್‌ ಆರಂಭಿಸಲಿದ್ದಾರೆ.
ಕೆಎಲ್ ರಾಹುಲ್
ಕೆಎಲ್ ರಾಹುಲ್

ನವದೆಹಲಿ: ಕರ್ನಾಟಕದ ತಾರೆ ಕೆಎಲ್‌ ರಾಹುಲ್‌ಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಅತ್ಯಂತ ಮಹತ್ವದ್ದಾಗಿದೆ. ಐಪಿಎಲ್‌ 2020 ಟೂರ್ನಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಮುನ್ನಡೆಸುವ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಮೊತ್ತ ಮೊದಲ ಬಾರಿ ಫ್ರಾಂಚೈಸಿ ತಂಡದ ನಾಯಕನಾಗಿ ಹೊಸ ಇನಿಂಗ್ಸ್‌ ಆರಂಭಿಸಲಿದ್ದಾರೆ.

ಕಳೆದ ಎರಡು ಆವೃತ್ತಿಗಳಲ್ಲಿ ಪಂಜಾಬ್‌ ತಂಡವನ್ನು ಮುನ್ನಡೆಸಿದ್ದ ಆರ್‌ ಅಶ್ವಿನ್‌ ಈಗ ಡೆಲ್ಲಿ ಕ್ಯಾಪಿಟಲ್ಸ್‌ ಪಾಲಾಗಿದ್ದಾರೆ. ಇನ್ನು 2019ರ ಐಪಿಎಲ್‌ ಬಳಿಕ ಅನಿಲ್‌ ಕುಂಬ್ಳೆ ಅವರನ್ನು ಮುಖ್ಯ ಕೋಚ್‌ ಆಗಿ ನೇಮಕ ಮಾಡಿದ್ದ ಪಂಜಾಬ್‌ ತಂಡ ಬಳಿಕ ಕೆಎಲ್‌ ರಾಹುಲ್‌ ತಮ್ಮ ನೂತನ ನಾಯಕ ಎಂದು ಘೋಷಿಸಿತ್ತು.

ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಬಯೋ ಸೆಕ್ಯೂರ್‌ ವಾತಾವರಣ ಇರುವ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ದುಬೈ, ಶಾರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಆಯೋಜನೆ ಆಗಲಿದೆ. ಈ ಟೂರ್ನಿಯಲ್ಲಿ ನಾಯಕತ್ವದ ಅಭಿಯಾನ ಆರಂಭಿಸಲು ರಾಹುಲ್‌ ಕಾತುರದಿಂದ ಎದುರು ನೋಡುತ್ತಿದ್ದಾರೆ.

ನಾನು ಈವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ನಾನೇ ನಾಯಕ ಎಂದು ಭಾವಿಸಿ ಆಡಿದ್ದೇನೆ. ಅಂಗಣದಲ್ಲಿ ಪ್ರತಿ ಬಾರಿ ನಾನು ಈ ಪರಿಸ್ಥಿರಿಯಲ್ಲಿ ಇದಿದ್ದರೆ ಏನು ಮಾಡುತ್ತಿದ್ದೆ? ಎಂಬುದನ್ನು ಆಲೋಚಿಸುತ್ತಿರುತ್ತೇನೆ," ಎಂದು ರಾಹುಲ್‌ 'ದಿ ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಈ ಪರಿಸ್ಥಿತಿಯಲ್ಲಿ ಯಾವ ಬೌಲರ್‌ ಆಡಿಸಬೇಕು? ಎಂದು ನಾನು ಆಲೋಚಿಸುತ್ತಿರುತ್ತೇನೆ. ಅಂದಹಾಗೆ ಆಲೋಚಿಸುವುದಕ್ಕಿಂತಲೂ ವಾಸ್ತವ ಎದುರಿಸುವಾಗ ಕಠಿಣವಾಗಿರುತ್ತದೆ ಎಂಬುದು ನನಗೆ ಗೊತ್ತಿದೆ. ಹೀಗಾಗಿ ಯಾವುದೇ ನಿರೀಕ್ಷೆಗಳೊಂದಿಗೆ ನಾನು ಮುಂದಾಗುತ್ತಿಲ್ಲ. ನನ್ನ ವೃತ್ತಿಬದುಕಿನ ಬಹುಪಾಲು ಕ್ರಿಕೆಟ್‌ ಆಡಿರುವುದು ಇದೇ ಮನಸ್ಥಿತಿಯಲ್ಲಿ ಎಂದಿದ್ದಾರೆ.

ಫೀಲ್ಡ್‌ನಲ್ಲಿ ಆ ಕ್ಷಣಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇನೆ. ಏಕೆಂದರೆ ಮೊದಲೇ ಯೋಜನೆಗಳನ್ನು ರೂಪಿಸಿಕೊಂಡರೆ ಹೆಚ್ಚು ಗೊಂದಲಗಳು ಸೃಷ್ಟಿಯಾಗುತ್ತದೆ ಎಂದು ತಮ್ಮ ಚೊಚ್ಚಲ ಕ್ಯಾಪ್ಟನ್ಸಿ ಅಭಿಯಾನ ಕುರಿತಾಗಿ ರಾಹುಲ್‌ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com