ಧೋನಿ ವಿಚಾರದಲ್ಲಿ ಬಿಸಿಸಿಐಯನ್ನು ಟೀಕಿಸಿದ ಮಾಜಿ ಕ್ರಿಕೆಟಿಗ ಸಕ್ಲೇನ್‌ ಮುಷ್ತಾಕ್‌ಗೆ ಪಿಸಿಬಿ ಎಚ್ಚರಿಕೆ!

ಕ್ರಿಕೆಟ್‌ ವ್ಯವಹಾರಗಳಿಗೆ ಕುರಿತು ಯೂಟ್ಯೂಬ್‌ ಚಾನೆಲ್‌ಗಳಲ್ಲಿ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿರುವ ಸಂಬಂಧ ಕೋಚಿಂಗ್‌ ಕಾರ್ಯದಲ್ಲಿ ತೊಡಗಿರುವ ಪಾಕ್‌ ಮಾಜಿ ಕ್ರಿಕೆಟಿಗರಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ನಿರ್ಬಂಧ ಹೇರಿದೆ.
ಸಕ್ಲೈನ್ ಮುಷ್ತಾಕ್-ಧೋನಿ
ಸಕ್ಲೈನ್ ಮುಷ್ತಾಕ್-ಧೋನಿ

ನವದೆಹಲಿ: ಕ್ರಿಕೆಟ್‌ ವ್ಯವಹಾರಗಳಿಗೆ ಕುರಿತು ಯೂಟ್ಯೂಬ್‌ ಚಾನೆಲ್‌ಗಳಲ್ಲಿ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿರುವ ಸಂಬಂಧ ಕೋಚಿಂಗ್‌ ಕಾರ್ಯದಲ್ಲಿ ತೊಡಗಿರುವ ಪಾಕ್‌ ಮಾಜಿ ಕ್ರಿಕೆಟಿಗರಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ನಿರ್ಬಂಧ ಹೇರಿದೆ. 

ಮಾಜಿ ಸ್ಪಿನ್ನರ್‌ ಸಕ್ಲೇನ್‌ ಮುಷ್ತಾಕ್ ಅವರು ಯುಟ್ಯೂಬ್ವಿಡಿಯೋವೊಂದರಲ್ಲಿ ಎಂಎಸ್ ಧೋನಿ ಮತ್ತು ಬಿಸಿಸಿಐ ಕುರಿತು ಮಾಡಿದ ಟೀಕೆಗಳು ವಿವಾದವನ್ನು ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಪಿಸಿಬಿಯು ಅವರಿಗೆ ಎಚ್ಚರಿಕೆಯನ್ನು ನೀಡಿದೆ.

ಇತ್ತೀಚೆಗೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಮಾತನಾಡಿದ್ದ ಸಕ್ಲೇನ್‌ ಮುಷ್ತಾಕ್‌, ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಬಿಸಿಸಿಐ ನಡೆಸಿಕೊಂಡ ರೀತಿ ಸರಿಯಿಲ್ಲವೆಂದು ಟೀಕಿಸಿದ್ದರು. ಎಂಎಸ್‌ ಧೋನಿ 2019 ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಆಗಸ್ಟ್ 15 ರಂದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು.

ವಿಶ್ವಕಪ್‌ ಟೂರ್ನಿಯ ಬಳಿಕ ಕೆಲ ತಿಂಗಳುಗಳ ಕಾಲ ಟೀಮ್‌ ಇಂಡಿಯಾದಿಂದ ದೂರ ಉಳಿಯಲು ನಿರ್ಧರಿಸಿದ್ದ ಎಂಎಸ್‌ ಧೋನಿಯನ್ನು ಬಿಸಿಸಿಐ ದಿಢೀರನೆ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈ ಬಿಟ್ಟಿತ್ತು. ಆ ಮೂಲಕ ಎಂಎಸ್‌ ಧೋನಿಗೆ ರಾಷ್ಟ್ರೀಯ ತಂಡದ ಬಾಗಿಲು ಬಹುತೇಕ ಬಂದ್‌ ಎಂಬ ಸೂಚನೆಯನ್ನು ಪರೋಕ್ಷವಾಗಿ ರವಾನಿಸಿತ್ತು.

ಬಿಸಿಸಿಐ ಹಾಗೂ ಭಾರತೀಯ ಕ್ರಿಕೆಟಿಗರ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕೆಲ ಮಾಜಿ ಕ್ರಿಕೆಟಿಗರ ನಡೆಯು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಇಷ್ಟವಿಲ್ಲ ಎಂಬ ಅಂಶವು ವಿಶ್ವಾಸಾರ್ಹ ಮೂಲಗಳು ದೃಢಪಡಿಸಿವೆ. ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಸಂಬಂಧ ಉತ್ತಮವಾಗಿಲ್ಲದ ಕಾರಣ, ಈ ಹಿಂದೆ ಪಿಸಿಬಿ ರಾಷ್ಟ್ರೀಯ ಕ್ರಿಕೆಟಿಗರಿಗೆ ಭಾರತೀಯ ಕ್ರೀಡಾಪಟುಗಳ ಬಗ್ಗೆ ಪ್ರತಿಕ್ರಿಯೆ ನೀಡದಂತೆ ಸಲಹೆ ನೀಡಿತ್ತು.

ಎಂಎಸ್ ಧೋನಿಯ ಕ್ರಿಕೆಟ್‌ ಸಾಧನೆಯನ್ನು ಸಕ್ಲೇನ್‌ ಮುಷ್ತಾಕ್‌ ಶ್ಲಾಘಿಸಿದ್ದರು ಹಾಗೂ ಮಾಜಿ ನಾಯಕನಿಗೆ ವಿದಾಯ ಪಂದ್ಯ ನೀಡದ ಕುರಿತು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕ್ರಮವನ್ನು ಅವರು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ಪಿಸಿಬಿ ಅಸಮಾಧಾನ ಹೊರಹಾಕಿದೆ ಪತ್ರಿಕೆಯೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com