ಐಪಿಎಲ್ 2020: ಉದ್ಘಾಟನಾ ಪಂದ್ಯದಿಂದ ಸೂಪರ್ ಕಿಂಗ್ಸ್ ಹಿಂದೆ ಸರಿಯುವ ಸಾಧ್ಯತೆ 

ಎಲ್ಲಾ ಅಡೆತಡೆಗಳ ನಡುವೆ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಅಂಗಣದಲ್ಲಿ ಆಯೋಜನೆಯಾಗಲು ಸಜ್ಜಾಗಿದ್ದು,  ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಬಯೋ ಸೆಕ್ಯೂರ್‌ ವಾತಾವರಣ ಇರುವ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಚೆನ್ನೈ ಸೂಪರ್ ಕಿಂಗ್ಸ್ ತಂಡ

ನವದೆಹಲಿ: ಎಲ್ಲಾ ಅಡೆತಡೆಗಳ ನಡುವೆ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಅಂಗಣದಲ್ಲಿ ಆಯೋಜನೆಯಾಗಲು ಸಜ್ಜಾಗಿದ್ದು,  ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಬಯೋ ಸೆಕ್ಯೂರ್‌ ವಾತಾವರಣ ಇರುವ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ.

ಟೂರ್ನಿ ಸಲುವಾಗಿ ಈಗಾಗಗಲೇ ಎಲ್ಲಾ 8 ತಂಡಗಳು ದುಬೈನಲ್ಲಿ ಬೀಡು ಬಿಟ್ಟಿದ್ದು, 3 ವಾರಗಳ ಅಭ್ಯಾಸ ಶಿಭಿರ ಆರಂಭಿಸಿವೆ. ಆದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರರಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡಿರುವುದು ಇದೀಗ ಕಳವಳಕ್ಕೆ ಕಾರಣವಾಗಿದೆ.

ಕೋವಿಡ್‌-19 ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿಎಸ್‌ಕೆ ಆಟಗಾರರು ಅಭ್ಯಾಸ ಬಿಟ್ಟು ಮತ್ತೆ 6 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಿದೆ.ಹೀಗಾಗಿ ಸೆಪ್ಟೆಂಬರ್‌ 19ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್‌ ವಿರುದ್ದದ ಐಪಿಎಲ್‌ 2020 ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಸಿಎಸ್‌ಕೆ ಅಲಭ್ಯವಾಗುವ ಸಾಧ್ಯತೆ ಇದೆ.

ನಿಗದಿಯಂತೆ ಮಾರ್ಚ್‌ 29ರಿಂದ ಮೇ 29ರವರೆಗೆ ಟೂರ್ನಿ ನಡೆದಿದ್ದರೆ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಮತ್ತು ಚೆನ್ನೈ ತಂಡಗಳು ಮುಖಾಮುಖಿಯಾಗಬೇಕಿತ್ತು. ಅಂತೆಯೇ ಹೊಸ ವೇಳಾಪಟ್ಟಿಯಲ್ಲೂ  ಇದೇ ತಂಡಗಳು ಮೊದಲ ಪಂದ್ಯವನ್ನಾಡಲಿವೆ ಎಂಬುದು ಅಭಿಮಾನಿಗಳು ನಿರೀಕ್ಷೆಯಾಗಿತ್ತು.ಆದರೆ,ಐಪಿಎಲ್‌ 2020 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಸ್ಪರ್ಧಿಸುವ ಸ್ಥಿತಿಯಲ್ಲಿಲ್ಲ ಎಂದು ಬಿಸಿಸಿಐನ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com