ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಬಗ್ಗೆ ಐಸಿಸಿ ಅಧ್ಯಕ್ಷರಿಂದ ಮಹತ್ವದ ಹೇಳಿಕೆ!

ಹೊಸದಾಗಿ ನೇಮಕಗೊಂಡಿರುವ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಭಾರತ- ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಕುರಿತು ಹೇಳಿಕೆ ನೀಡಿದ್ದು, ಕ್ರಿಕೆಟ್ ಗೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನಗಳನ್ನು ಒಗ್ಗೂಡಿಸಲು ಸಾಧ್ಯವಾದಷ್ಟು ಯತ್ನಿಸುವುದಾಗಿ ಹೇಳಿದ್ದಾರೆ.
ಐಸಿಸಿ
ಐಸಿಸಿ

ನವದೆಹಲಿ: ಹೊಸದಾಗಿ ನೇಮಕಗೊಂಡಿರುವ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಭಾರತ- ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಕುರಿತು ಹೇಳಿಕೆ ನೀಡಿದ್ದು, ಕ್ರಿಕೆಟ್ ಗೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನಗಳನ್ನು ಒಗ್ಗೂಡಿಸಲು ಸಾಧ್ಯವಾದಷ್ಟು ಯತ್ನಿಸುವುದಾಗಿ ಹೇಳಿದ್ದಾರೆ.

ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಗ್ರೆಗ್ ಬಾರ್ಕ್ಲೇ, " ಈ ಅಂಶಗಳು ಕ್ರಿಕೆಟ್ ನ್ನೂ ಮೀರಿದ್ದಾಗಿದೆ. ಆದರೆ ಎರಡೂ ಮಂಡಳಿಗಳ ನಡುವಿನ ಸಂಬಂಧವನ್ನು ಸುಧಾರಿಸುವುದಕ್ಕಾಗಿ  ಐಸಿಸಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧವನ್ನು ಈ ಹಿಂದಿನಂತೆ ಇರುವುದನ್ನೇ ನಾವೂ ಆಶಿಸುತ್ತೇವೆ, ಇದು ಕ್ರಿಕೆಟ್ ಗೂ ಮೀರಿ ಭೌಗೋಳಿಕ-ರಾಜಕೀಯ ಸಮಸ್ಯೆಗಳು ಭಾರತ-ಪಾಕ್ ನಡುವೆ ಇದೆ ಎಂಬುದು ವಾಸ್ತವದ ಸ್ಥಿತಿ, ಆದರೂ ಪಾಕ್-ಭಾರತ ಈ ಹಿಂದಿನ ಸ್ಥಿತಿಗೆ ಮರಳುವುದಕ್ಕೆ ಐಸಿಸಿ ಸಹಕರಿಸಲಿದೆ ಎಂದು ಗ್ರೆಗ್ ಬಾರ್ಕ್ಲೇ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com