ಶಿರ್ಸಾಸನ ಮಾಡಿದ ಗರ್ಭೀಣಿ ಅನುಷ್ಕಾ: ಪತ್ನಿಗೆ ಆಸರೆಯಾಗಿ ಕಾಲು ಹಿಡಿದ ಕೊಹ್ಲಿ, ಫೋಟೋ ವೈರಲ್!
ಗರ್ಭೀಣಿ ಅನುಷ್ಕಾ ಶರ್ಮಾ ಅವರು ಶಿರ್ಸಾಸನ ಹಾಕಿದ್ದು ಈ ವೇಳೆ ಪತ್ನಿಯ ಕಾಲುಗಳನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಡಿದಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published: 01st December 2020 05:07 PM | Last Updated: 02nd December 2020 02:46 PM | A+A A-

ಕೊಹ್ಲಿ-ಅನುಷ್ಕಾ
ಗರ್ಭೀಣಿ ಅನುಷ್ಕಾ ಶರ್ಮಾ ಅವರು ಶಿರ್ಸಾಸನ ಹಾಕಿದ್ದು ಈ ವೇಳೆ ಪತ್ನಿಯ ಕಾಲುಗಳನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಡಿದಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ದೇಹವನ್ನು ಆರೋಗ್ಯವಾಗಿಡುವ ಸಲುವಾಗಿ ಅನುಷ್ಕಾ ಅವರು ಪ್ರತಿ ದಿನ ಯೋಗ ಮಾಡುತ್ತಾರೆ. ಇದೀಗ ಗರ್ಭೀಣಿ ಆಗಿರುವ ಅವರು ಮಗುವಿನ ಉತ್ತಮ ಬೆಳವಣಿಗೆಗಾಗಿ ಯೋಗ ಮಾಡಿದ್ದಾರೆ.
ತಾವು ಶಿರ್ಸಾಸನ ಮಾಡಿರುವ ಫೋಟೋವನ್ನು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಅನುಷ್ಕಾ ಅವರು ಫೋಟೋಗೆ ದೀರ್ಘ ವಿವರಣೆ ಕೊಟ್ಟಿದ್ದು, ಯೋಗ ನನ್ನ ಜೀವನದ ಭಾಗ. ಆದರೆ, ಈಗಿನ ಸ್ಥಿತಿಯಲ್ಲಿ ತಲೆಕೆಳಗಾಗಿ ನಿಲ್ಲುವುದು ಅಷ್ಟು ಸುಲಭವಲ್ಲ. ಆದರೆ ನನ್ನು ದೇಹದ ಸಮತೋಲನ ಕಾಯ್ದುಕೊಳ್ಳಲು ಪತಿ ನೆರವಾಗಿದ್ದಾರೆ. ಇದು ಎಲ್ಲವೂ ಯೋಗ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ ಎಂದಿದ್ದಾರೆ.