ಟಿ20 ಶ್ರೇಯಾಂಕ: ಅಗ್ರಸ್ಥಾನದಲ್ಲಿ ಇಂಗ್ಲೆಂಡ್, ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾ

ಐಸಿಸಿ ಟಿ-20 ಕ್ರಿಕೆಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದ್ದು ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Published: 02nd December 2020 07:15 PM  |   Last Updated: 02nd December 2020 07:19 PM   |  A+A-


England Team

ಇಂಗ್ಲೆಂಡ್ ತಂಡ

Posted By : Vishwanath S
Source : UNI

ನವದೆಹಲಿ: ಐಸಿಸಿ ಟಿ-20 ಕ್ರಿಕೆಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದ್ದು ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ದಕ್ಷಿಣ ಆಫ್ರಿಕಾ ವಿರುದ್ಧ 3–0 ಕ್ಲೀನ್ ಸ್ವೀಪ್ ಮಾಡುವ ಮೂಲಕ, ಇಂಗ್ಲೆಂಡ್ ಟಿ-20 ಶ್ರೇಯಾಂಕದಲ್ಲಿ ಪ್ರಥಮ ಸ್ಥಾನದಲ್ಲಿದೆ. ಟಿ20 ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲು ಇಂಗ್ಲೆಂಡ್ 271 ಪಾಯಿಂಟ್‌ಗಳನ್ನು ಹೊಂದಿತ್ತು ಮತ್ತು ಸರಣಿಯನ್ನು ಗೆದ್ದ ನಂತರ 275ಕ್ಕೆ ಏರಿದೆ.

ಟಿ20 ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು 266 ಅಂಕ ಗಳಿಸಿರುವ ಭಾರತ ಮೂರನೇ ಸ್ಥಾನ, ಪಾಕಿಸ್ತಾನ ನಾಲ್ಕನೇ, ದಕ್ಷಿಣ ಆಫ್ರಿಕಾ ಐದನೇ ಮತ್ತು ನ್ಯೂಜಿಲೆಂಡ್ ಆರನೇ ಸ್ಥಾನದಲ್ಲಿದೆ.

Stay up to date on all the latest ಕ್ರಿಕೆಟ್ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp