2008ರ ನಂತರ ಮೊದಲ ಬಾರಿ ಶತಕ ಗಳಿಸದೆಯೆ ವರ್ಷ ಕೊನೆಗೊಳಿಸಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2008ರ ನಂತರ ಇದೇ ಮೊದಲ ಬಾರಿ ಏಕದಿನ ಮಾದರಿಯಲ್ಲಿ ಏಕೈಕ ಶತಕ ಗಳಿಸದೇ ವರ್ಷಾಂತ್ಯ ಕೊನೆಗೊಳಿಸಿದ್ದಾರೆ. 
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಕ್ಯಾನ್ ಬೆರಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2008ರ ನಂತರ ಇದೇ ಮೊದಲ ಬಾರಿ ಏಕದಿನ ಮಾದರಿಯಲ್ಲಿ ಏಕೈಕ ಶತಕ ಗಳಿಸದೇ ವರ್ಷಾಂತ್ಯ ಕೊನೆಗೊಳಿಸಿದ್ದಾರೆ. 

2008ರಲ್ಲಿ ಪದಾರ್ಪಣೆ ಮಾಡಿದಾಗಿನಿಂದಲೂ ಕೊಹ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆ ಮುರಿಯುತ್ತ ಬಂದಿದ್ದಾರೆ.

ಅದರಲ್ಲೂ ಏಕದಿನ ಮಾದರಿಯಲ್ಲಿ ಸಚಿನ್ ದಾಖಲಿಸಿರುವ 49 ಶತಕಗಳನ್ನು ಮುರಿಯುವ ಹೊಸ್ತಿಲಲ್ಲಿರುವ ಕೊಹ್ಲಿ ಈ ವರ್ಷ ಏಕೈಕ ಶತಕ ಗಳಿಸಲು ಸಾಧ್ಯವಾಗಿಲ್ಲ. ಸದ್ಯ 43 ಶತಕ ದಾಖಲಿಸಿರುವ ಕೊಹ್ಲಿ, ಸಚಿನ್ ದಾಖಲೆ ಸರಿಗಟ್ಟಲು ಕೇವಲ 6 ಶತಕಗಳ ಕೊರತೆಯಲ್ಲಿದ್ದಾರೆ. 

ಸಿಡ್ನಿಯಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಕೊಹ್ಲಿ 44ನೇ ಶತಕದ ಹೊಸ್ತಿಲಲ್ಲಿದ್ದರು. ಆದರೆ ಕೇವಲ 11 ರನ್ ಗಳ ಕೊರತೆಯಿಂದ ಸಾಧ್ಯವಾಗಿಲ್ಲ. ಈ ಮಧ್ಯೆ 3ನೇ ಪಂದ್ಯದಲ್ಲಿ 63 ರನ್ ಗಳಿಸಿದ ಕೊಹ್ಲಿ ಏಕದಿನ ಮಾದರಿಯಲ್ಲಿ ಅತಿ ವೇಗವಾಗಿ 12 ಸಾವಿರ ರನ್ ಕಲೆಹಾಕಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಕೇವಲ 242 ಇನಿಂಗ್ಸ್ ಗಳಲ್ಲಿ ಈ ಮೈಲುಗಲ್ಲು ಸ್ಥಾಪಿಸಿದರೆ, ಸಚಿನ್ 300 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com