ರೋಹಿತ್ ಶರ್ಮಾ ಗಾಯದ ಬಗ್ಗೆ ನಾಯಕ ಕೊಹ್ಲಿಗೆ ಮಾಹಿತಿ ನೀಡುವುದು ಕೋಚ್ ರವಿಶಾಸ್ತ್ರಿ ಕೆಲಸ: ಗಂಭೀರ್

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಗಾಯದ ಸಮಸ್ಯೆಯನ್ನು ತಂಡದ ನಾಯಕ ವಿರಾಟ್ ಕೊಹ್ಲಿಗೆ ಮಾಹಿತಿ ನೀಡುವುದು ಕೋಚ್ ರವಿಶಾಸ್ತ್ರಿ ಕೆಲಸ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

Published: 02nd December 2020 02:50 PM  |   Last Updated: 02nd December 2020 02:50 PM   |  A+A-


Gautam Gambhir

ಗೌತಮ್ ಗಂಭೀರ್

Posted By : Vishwanath S
Source : PTI

ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಗಾಯದ ಸಮಸ್ಯೆಯನ್ನು ತಂಡದ ನಾಯಕ ವಿರಾಟ್ ಕೊಹ್ಲಿಗೆ ಮಾಹಿತಿ ನೀಡುವುದು ಕೋಚ್ ರವಿಶಾಸ್ತ್ರಿ ಕೆಲಸ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ. 

ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಗಾಯದ ಸಮಸ್ಯೆ ಎದುರಿಸುತ್ತಿರುವುದು ದುರದೃಷ್ಟಕರ. ಆದರೆ ರೋಹಿತ್ ರ ಗಾಯದ ಸಮಸ್ಯೆ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಮತ್ತು ಆಯ್ಕೆದಾರರು ಸೃಷ್ಟಿಸಿರುವ ಗೊಂದಲದ ಬಗ್ಗೆ ಗಂಭೀರ್ ಅಸಮಾಧಾನ ಹೊರಹಾಕಿದ್ದಾರೆ. 

ಇನ್ನು ರೋಹಿತ್ ರ ಗಾಯದ ಸಮಸ್ಯೆ ಬಗ್ಗೆ ಟೀಂ ಕೋಚ್ ರವಿಶಾಸ್ತ್ರಿ ಅವರು ವಿರಾಟ್ ಕೊಹ್ಲಿಗೆ ಮಾಹಿತಿ ನೀಡಿದ್ದರೆ ಕೊಹ್ಲಿ ಮಾಧ್ಯಮಗಳ ಮುಂದೆ ತಮಗೇನು ಗೊತ್ತಿಲ್ಲ ಎಂದು ಹೇಳಿಕೆ ನೀಡುತ್ತಿರಲಿಲ್ಲ ಎಂದು ಗಂಭೀರ್ ಹೇಳಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ನಡೆದ ಆನ್ ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ ಅವರು ರೋಹಿತ್ ಗಾಯದ ಸಮಸ್ಯೆ ಬಗ್ಗೆ ತಮಗೇನು ಮಾಹಿತಿ ಇಲ್ಲ ಎಂದು ಹೇಳಿದ್ದರು. ಇದು ತಂಡದ ನಾಯಕನಿಗೆ ಶೋಭಿಸುವಂತದಲ್ಲ. ಕಾರಣ ತಂಡದ ಪ್ರಮುಖ ಆಟಗಾರರ ಪ್ರತಿಯೊಂದು ಮಾಹಿತಿ ನಾಯಕನಿಗೆ ಗೊತ್ತಿರಬೇಕು. ಆಗಲೇ ತಂಡದ ನಿರ್ವಹಣೆ ಸುಲಭವಾಗುತ್ತದೆ ಎಂದಿದ್ದಾರೆ. 

ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಸರಣಿ ಕೈಚೆಲ್ಲಿ ಕೂತಿದೆ. 

Stay up to date on all the latest ಕ್ರಿಕೆಟ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp