ಸರಣಿ ಗೆಲುವಿನ ಮೇಲೆ ಟೀಂ ಇಂಡಿಯಾ ಚಿತ್ತ, ಪುಟಿದೇಳುವ ಕನಸಿನಲ್ಲಿ ಆಸೀಸ್

ಆಡಿದ ಮೊದಲ ಟಿ-20 ಪಂದ್ಯದಲ್ಲಿ 11 ರನ್ ಗಳ ಗೆಲುವು ದಾಖಲಿಸಿರುವ ಭಾರತ ತಂಡ, ಎರಡನೇ ಪಂದ್ಯವನ್ನು ಗೆದ್ದು ಸರಣಿ ವಶಕ್ಕೆ ಪಡೆಯುವ ಕನಸಿನಲ್ಲಿದ್ದು, ಆತಿಥೇಯ ಆಸ್ಟ್ರೇಲಿಯಾ ಚುಟುಕು ಸರಣಿಯಲ್ಲಿ ಪುಟಿದೇಳುವ ವಿಶ್ವಾಸ ಹೊಂದಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಸಿಡ್ನಿ: ಆಡಿದ ಮೊದಲ ಟಿ-20 ಪಂದ್ಯದಲ್ಲಿ 11 ರನ್ ಗಳ ಗೆಲುವು ದಾಖಲಿಸಿರುವ ಭಾರತ ತಂಡ, ಎರಡನೇ ಪಂದ್ಯವನ್ನು ಗೆದ್ದು ಸರಣಿ ವಶಕ್ಕೆ ಪಡೆಯುವ ಕನಸಿನಲ್ಲಿದ್ದು, ಆತಿಥೇಯ ಆಸ್ಟ್ರೇಲಿಯಾ ಚುಟುಕು ಸರಣಿಯಲ್ಲಿ ಪುಟಿದೇಳುವ ವಿಶ್ವಾಸ ಹೊಂದಿದೆ.

ಏಕದಿನ ಸರಣಿಯನ್ನು ಸೋತಿರುವ ವಿರಾಟ್ ಪಡೆ, ಟಿ-20 ಕ್ರಿಕೆಟ್ ನಲ್ಲಿ ಗೆಲುವಿನ ಆರಂಭ ಮಾಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಅರ್ಹ ಗೆಲುವು ದಾಖಲಿಸಿದೆ.

ಕ್ಯಾನ್‌ಬೆರಾದಲ್ಲಿ ಎರಡು ವೈಟ್-ಬಾಲ್ ಪಂದ್ಯಗಳನ್ನು ಗೆದ್ದಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ(ಎಸ್‌ಸಿಜಿ) ಮುಂದಿನ ಎರಡು ಪಂದ್ಯಗಳು ತಮಗೆ ಉತ್ತಮವಾಗಲಿ ಎಂದು ಆಶಿಸಿದ್ದಾರೆ.

ಭಾರತದ ಮೊದಲ ಕಂಕಷನ್ ಸಬ್‌ಸ್ಟಿಟ್ಯೂಟ್‌ ಆಟಗಾರ ಯುಜ್ವೇಂದ್ರ ಚಾಹಲ್ ಅವರ ಭರ್ಜರಿ ಬೌಲಿಂಗ್ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಗೆಲವು ದಾಖಲಿಸಿತ್ತು. ಈ ಪಂದ್ಯದಲ್ಲಿ ಜಡೇಜಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಜಡೇಜಾ 23 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸಿದ್ದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.

ತಂಡದ ಮೊದಲ ಐವರು ಬ್ಯಾಟ್ಸ್ ಮನ್ ಗಳು ಉತ್ತಮ ಬ್ಯಾಟಿಂಗ್ ಮಾಡಲಿದ್ದು ಎರಡನೇ ಪಂದ್ಯದಲ್ಲಿ ತಂಡ ಉತ್ತಮ ಸ್ಕೋರ್ ಕಲೆಹಾಕಲಿದೆ ಎಂದರು. ಇನ್ನು ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಅದ್ಭುತ ಫಾರ್ಮ್ ನಲ್ಲಿದ್ದರೂ ಅವರು ಸಂಪೂರ್ಣ ಫಿಟ್ ಆಗದಿರುವುದು ಭಾರತಕ್ಕೆ ಸಹಾಯವಾಗುತ್ತದೆ. ಇದೇ ವೇಳೆ ಡೇವಿಡ್ ವಾರ್ನರ್ ಈಗಾಗಲೇ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾಗಿದ್ದ ಪ್ರಬಲ ಸ್ಪರ್ಧೆ ಈಗ ಕಾಣುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com