ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಕೋರೆ ಆಂಡರ್ಸನ್

ಏಕದಿನ ಪಂದ್ಯಗಳಲ್ಲಿ ಎರಡನೇ ಅತಿ ವೇಗದ ಶತಕ ಗಳಿಸಿದ ದಾಖಲೆಯನ್ನು ಹೊಂದಿರುವ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಕೋರೆ ಆಂಡರ್ಸನ್, ನ್ಯೂಜಿಲೆಂಡ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. 
ಕೋರೆ ಆಂಡರ್ಸನ್
ಕೋರೆ ಆಂಡರ್ಸನ್

ನವದೆಹಲಿ: ಏಕದಿನ ಪಂದ್ಯಗಳಲ್ಲಿ ಎರಡನೇ ಅತಿ ವೇಗದ ಶತಕ ಗಳಿಸಿದ ದಾಖಲೆಯನ್ನು ಹೊಂದಿರುವ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಕೋರೆ ಆಂಡರ್ಸನ್, ನ್ಯೂಜಿಲೆಂಡ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. 

ಆಂಡರ್ಸನ್ ಅವರೀಗ ಯುಎಸ್‌ನಲ್ಲಿ ನಡೆಯಲಿರುವ ಮೇಜರ್ ಲೀಗ್ ಕ್ರಿಕೆಟ್ ಟಿ-20 ಪಂದ್ಯಾವಳಿಯೊಂದಿಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಆಂಡರ್ಸನ್ ಅತಿ ವೇಗದ ಶತಕ ದಾಖಲೆ ಹೊಂದಿದ್ದರು. ಇದನ್ನು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮುರಿದರು. ಕ್ವೀನ್ಸ್‌ಟೌನ್‌ನಲ್ಲಿ 2014 ರ ಜನವರಿ 1 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಂಡರ್ಸನ್ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಡಿವಿಲಿಯರ್ಸ್ ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಒಂದು ಶತಕವನ್ನು ಗಳಿಸಿದರು.

ಆಂಡರ್ಸನ್ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು ಮತ್ತು 2015 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ನ ರನ್ನರ್ ಅಪ್ ಫಿನಿಶಿಂಗ್ ನ ಭಾಗವಾಗಿದ್ದರು. ವಿವಿಧ ಗಾಯಗಳ ಸಮಸ್ಯೆಗಳಿಂದ ಹಾಗೂ ದೀರ್ಘಕಾಲದ ಬೆನ್ನುನೋವಿನ ಸಮಸ್ಯೆಯಿಂದ ಅವರ ವೃತ್ತಿಜೀವನ ತೊಂದರೆಗೆ ಸಿಲುಕಿತ್ತು. ಅವರು 2018 ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್  ಪರ ಕಟ್ಟ ಕಡೆಯ ಟಿ 20 ಅಂತರಾಷ್ಟ್ರೀಯ ಪಂದ್ಯ  ಆಡಿದ್ದರು. ಅವರು ಇತ್ತೀಚೆಗೆ ಆಗಸ್ಟ್ ನಲ್ಲಿ ಬಾರ್ಬಡೋಸ್ ಟ್ರೈಡೆಂಟ್ಸ್ ಗಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com