ಕಂಕಷನ್, ಗಾಯದ ಸಮಸ್ಯೆಯಿಂದಾಗಿ ಜಡೇಜಾ ಮೊದಲ ಟೆಸ್ಟ್ ಪಂದ್ಯ ಆಡುವುದು ಡೌಟ್!

ಕಂಕಷನ್ ಮತ್ತು ಮಂಡಿರಜ್ಜು ಗಾಯದಿಂದಾಗಿ ಭಾರತೀಯ ಆಲ್‌ರೌಂಡರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ನವದೆಹಲಿ: ಕಂಕಷನ್ ಮತ್ತು ಮಂಡಿರಜ್ಜು ಗಾಯದಿಂದಾಗಿ ಭಾರತೀಯ ಆಲ್‌ರೌಂಡರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

ಕ್ಯಾನ್‌ಬೆರಾದಲ್ಲಿ ನಡೆದ ಆರಂಭಿಕ ಟಿ20 ಅಂತಾರಾಷ್ಟ್ರೀಯ ಪಂದ್ಯದ ವೇಳೆ ಜಡೇಜಾ ಅವರು ಮಂಡಿರಜ್ಜು ಗಾಯ ಸಮಸ್ಯೆಗೆ ಗುರಿಯಾಗಿದ್ದರು. 32ರ ಹರೆಯದವರು ತಮ್ಮ 50ನೇ ಟೆಸ್ಟ್ ಪಂದ್ಯದ ಸನಿಹದಲ್ಲಿದ್ದಾರೆ. ಆದರೆ ಗಾಯಗೊಂಡಿರುವ ಜಡೇಜಾ ಇನ್ನು ಕನಿಷ್ಠ ಮೂರು ವಾರಗಳವರೆಗೆ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾಗಿ ಡಿಸೆಂಬರ್ 17ರಿಂದ ಅಡಿಲೇಡ್‌ನಲ್ಲಿ ನಡೆಯುವ ಮೊದಲ ಹಗಲು/ರಾತ್ರಿ ಟೆಸ್ಟ್‌ನಿಂದ ಹೊರಗುಳಿಯಲ್ಲಿದ್ದಾರೆ.

ಒಂದು ವೇಳೆ ಇದು ಮಂಡಿರಜ್ಜು ಗಾಯ ಕಡಿಮೆಯಾಗದಿದ್ದರೆ ಆಗ ಡಿಸೆಂಬರ್ 26ರಿಂದ ಮೆಲ್ಬೋರ್ನ್‌ನಲ್ಲಿ ನಡೆಯುವ ಎರಡನೇ ಬಾಕ್ಸಿಂಗ್ ದಿನದ ಟೆಸ್ಟ್‌ನಿಂದ ಸಹ ಜಡೇಜಾ ಹೊರಗುಳಿಯಬೇಕಾಗುತ್ತದೆ. 

ಐಸಿಸಿಯ ಕಂಕಷನ್ ಪ್ರೋಟೋಕಾಲ್ಗಳ ಪ್ರಕಾರ, ಯಾವುದೇ ಆಟಗಾರನಿಗೆ ತಲೆಗೆ ಗಾಯವಾದ ನಂತರ, ಒಬ್ಬ ಆಟಗಾರನಿಗೆ 7ರಿಂದ 10 ದಿನಗಳವರೆಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಇದು ಡಿಸೆಂಬರ್ 11ರಿಂದ ಎಸ್ಸಿಜಿಯಲ್ಲಿ ಮೂರು ದಿನಗಳ ಹಗಲು/ರಾತ್ರಿ ಅಭ್ಯಾಸ ಪಂದ್ಯದಿಂದ ಜಡೇಜಾ ದೂರವಿರಬೇಕಾಗುತ್ತದೆ ಬಗ್ಗೆ ಬಿಸಿಸಿಐ ಮೂಲವು ಪಿಟಿಐಗೆ ತಿಳಿಸಿದೆ.

ಹೀಗಿದ್ದರೂ ಕಂಕಷನ್ ಗಿಂತ ಹೆಚ್ಚಾಗಿ, ಮಂಡಿರಜ್ಜು ಗಾಯವು ಜಡೇಜಾ ಅವರನ್ನು ಕನಿಷ್ಠ ಎರಡು ಟೆಸ್ಟ್ ಪಂದ್ಯಗಳಿಂದ ದೂರವಿಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಆದಾಗ್ಯೂ, ಬಿಸಿಸಿಐ ಮೂಲಗಳ ಪ್ರಕಾರ, ಜಡೇಜಾ ಕಂಕಷನ್ ನಿಂದ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಮಂಡಿರಜ್ಜುನಿಂದ ಸಂಪೂರ್ಣವಾಗಿ ಗುಣಮುಖರಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದಿದೆ. 

ಸಾಗರೋತ್ತರ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾದ ಹಿರಿಯ ಆಲ್ ರೌಂಡರ್ ರವೀಂದ್ರ ಜಡೇಜಾ ಉತ್ತಮ ಸಾಧನೆ ಮಾಡಿದ್ದಾರೆ. ಹೀಗಾಗಿ ಜಡೇಜಾರ ಅವಶ್ಯಕತೆ ತಂಡಕ್ಕಿದೆ. ಜಡೇಜಾ 49 ಟೆಸ್ಟ್‌ಗಳಲ್ಲಿ 213 ವಿಕೆಟ್‌ಗಳನ್ನು ಪಡೆದಿದ್ದಾರೆ. 35.26 ರ ಸರಾಸರಿಯಲ್ಲಿ 14 ಅರ್ಧಶತಕಗಳೊಂದಿಗೆ 1869 ರನ್ ಬಾರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com