ಆಸ್ಟ್ರೇಲಿಯಾ ಗೆ ಆಘಾತ: ಮೊದಲ ಟೆಸ್ಟ್ ಪಂದ್ಯಕ್ಕೆ ಡೇವಿಡ್ ವಾರ್ನರ್ ಅಲಭ್ಯ

ಏಕದಿನ, ಟಿ20 ಸರಣಿ ಬಳಿಕ ಟೆಸ್ಟ್ ಸರಣಿಯ ದೃಷ್ಟಿ ನೆಟ್ಟಿರುವ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಆಘಾತ ಎದುರಾಗಿದ್ದು, ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ಗಾಯಗೊಂಡ ವಾರ್ನರ್
ಗಾಯಗೊಂಡ ವಾರ್ನರ್

ಸಿಡ್ನಿ: ಏಕದಿನ, ಟಿ20 ಸರಣಿ ಬಳಿಕ ಟೆಸ್ಟ್ ಸರಣಿಯ ದೃಷ್ಟಿ ನೆಟ್ಟಿರುವ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಆಘಾತ ಎದುರಾಗಿದ್ದು, ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಈ ಬಗ್ಗೆ ಸ್ವತಃ ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆ ನೀಡಿದ್ದು, ಭಾರತದ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಡೇವಿಡ್ ವಾರ್ನರ್ ಅಲಭ್ಯರಾಗಲಿದ್ದಾರೆ. ಇದೇ ಡಿಸೆಂಬರ್ 17ರಿಂದ ಅಡಿಲೇಡ್ ನಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯ ಹಗಲು-ರಾತ್ರಿ ಪಂದ್ಯವಾಗಿದ್ದು, ಈ ಪಂದ್ಯದಿಂದ  ವಾರ್ನರ್ ಗೈರಾಗಲಿದ್ದಾರೆ.

ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಡೇವಿಡ್ ವಾರ್ನರ್ ಗಾಯಕ್ಕೆ ತುತ್ತಾಗಿದ್ದರು. ಭಾರತದ ಇನ್ನಿಂಗ್ಸ್ ನ 4ನೇ ಓವರ್ ವೇಳೆ ಹೇಜಲ್ ವಡ್ ಎಸೆದ ಎಸೆತವನ್ನ ಶಿಖರ್ ಧವನ್ ಸ್ಟ್ರೇಟ್ ಡ್ರೈವ್ ಮಾಡಿದರು, ಈ ಚೆಂಡನ್ನು ಹಿಡಿಯುವ ಧಾವಂತದಲ್ಲಿ ಓಡಿ ಬಂದ ವಾರ್ನರ್, ಡೈವ್ ಮಾಡಿದರು. ಈ  ವೇಳೆ ಅವರ ಬಲಗಾಲ ತೊಡೆಗೆ ಬಲವಾಗಿ ಪೆಟ್ಟು ಬಿದ್ದಿತು. ಕೂಡಲೇ  ಅಲ್ಲಿಯೇ ವಾರ್ನರ್ ಕುಸಿದುಬಿದ್ದರು. ಸ್ಥಳಕ್ಕಾಗಮಿಸಿದ ಫಿಸಿಯೋ ಧೆರಪಿ ಕೂಡಲೇ ವಾರ್ನರ್ ರನ್ನು ಡ್ರೆಸಿಂಗ್ ರೂಂಗೆ ಕರೆದೊಯ್ದು ಪ್ರಾಥಮಿಕ ಪರೀಕ್ಷೆ ನಡೆಸಿದರು. ಬಳಿಕ ಮುಂಜಾಗ್ರತಾ ಕ್ರಮವಾಗಿ ಸ್ಕಾನಿಂಗ್ ಗಾಗಿ ಕಾರಿನಲ್ಲಿ ಆಸ್ಪತ್ರೆಗೆ  ಕರೆದೊಯ್ದರು. ಬಳಿಕ ವಾರ್ನರ್ ಬಾಕಿ ಉಳಿದಿದ್ದ ಏಕದಿನ ಪಂದ್ಯ ಹಾಗೂ ಟಿ20 ಸರಣಿಗೂ ಅಲಭ್ಯರಾಗಿದ್ದರು. ಇದೀಗ ಮೊದಲ ಟೆಸ್ಟ್ ಪಂದ್ಯದಿಂದಲೂ ದೂರ ಉಳಿಯುವಂತಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡೇವಿಡ್ ವಾರ್ನರ್. ಗಾಯಕ್ಕೆ ತುತ್ತಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಬೇಗ ಚೇತರಿಕೆ ಕಂಡಿದ್ದೇನೆ, ಆದರೆ ಟೆಸ್ಟ್ ಪಂದ್ಯಕ್ಕೆ ಶೇ.100ರಷ್ಟು ಫಿಟ್ ಇರಬೇಕು. ನಾನು ಸಿಡ್ನಿಯಲ್ಲೇ ಇರಲಿದ್ದು, ಫಿಟ್ನೆಸ್ ಮರಳಿ ಪಡೆಯುತ್ತೇನೆ, ತಂಡದ ಇತರೆ ಆಟಗಾರರು ಶೇ.100 ರಷ್ಟು ಫಿಟ್ ಆಗಿದ್ದು,  ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ತಮಗಿದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಆಸಿಸ್ ಕೋಚ್ ಜಸ್ಟಿನ್ ಲ್ಯಾಂಗರ್ ಅವರು, 'ಡಿಸೆಂಬರ್ 26 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಪ್ರಾರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದ ವೇಳೆಗೆ  ವಾರ್ನರ್ ಸಂಪೂರ್ಣ ಫಿಟ್ ಆಗಿರಲಿದ್ದು, 2ನೇ ಟೆಸ್ಟ್ ಆಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com