ಫಿಟ್ನೆಸ್ ಪರೀಕ್ಷೆಯಲ್ಲಿ ರೋಹಿತ್ ಶರ್ಮಾ ಪಾಸ್; ಆಸಿಸ್ ವಿರುದ್ಧದ ಟೆಸ್ಟ್ ಸರಣಿಗೆ ಲಭ್ಯ

ಭಾರತ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಇಂದು ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಮುಂಬರುವ ಆಸಿಸ್ ವಿರುದ್ಧದ ಟೆಸ್ಟ್ ಸರಣಿಗೆ ಲಭ್ಯರಾಗಲಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಬೆಂಗಳೂರು: ಭಾರತ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಇಂದು ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಮುಂಬರುವ ಆಸಿಸ್ ವಿರುದ್ಧದ ಟೆಸ್ಟ್ ಸರಣಿಗೆ ಲಭ್ಯರಾಗಲಿದ್ದಾರೆ.

ಈ ಬಗ್ಗೆ ಸ್ವತಃ ಬಿಸಿಸಿಐ ಮಾಹಿತಿ ನೀಡಿದ್ದು, ಎಡಗೈ ಹ್ಯಾಮ್ ಸ್ಟ್ರಿಂಗ್ ಗಾಯದಿಂದ ಬಳಲುತ್ತಿದ್ದ ರೋಹಿತ್ ಶರ್ಮಾ ಇದೀಗ ಗಾಯದಿಂದ ಚೇತರಿಸಿಕೊಂಡಿದ್ದು, ಬೆಂಗಳೂರಿನಲ್ಲಿರುವ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯು ಬಲಗೈ ಬ್ಯಾಟ್ಸ್‌ಮನ್‌ ಅಂತಿಮ ಹಂತದ ಫಿಟ್ನೆಸ್‌ ಹಾಗೂ ಕೌಶಲ  ಮೌಲ್ಯ ಮಾಪನ ಮುಗಿಸಿದೆ. ಈ ಫಿಟ್ನೆಸ್ ಪರೀಕ್ಷೆಯಲ್ಲೂ ಕೂಡ ಪಾಸ್ ಆಗಿದ್ದಾರೆ. ಆ ಮೂಲಕ ರೋಹಿತ್ ಆಸಿಸ್ ಪ್ರವಾಸದ ಕುರಿತು ಎದ್ದಿದ್ದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ.

ಡಿ.13ರಂದು ಅಂದರೆ ನಾಳೆ ರೋಹಿತ್‌ ಶರ್ಮಾ ಮುಂಬೈನಿಂದ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಸಿಡ್ನಿಗೆ ತಲುಪಿದ ಬಳಿಕ ರೋಹಿತ್ ಶರ್ಮಾ 14 ದಿನಗಳ ಕ್ವಾರಂಟೈನ್‌ ನಲ್ಲಿರಲಿದ್ದಾರೆ.  ಆಸ್ಟ್ರೇಲಿಯಾ ತಲುಪಿದ ಬಳಿಕ ಅವರು ಐಸೋಲೇಷನ್‌ನಲ್ಲಿ ಇರಬೇಕಾದ ಅವಶ್ಯಕತೆ  ಇರುವುದರಿಂದ, ನಿಯಮವನ್ನು ಪೂರ್ಣಗೊಳಿಸಬೇಕಾಗಿದೆ. ಹೀಗಾಗಿ ಅಡಿಲೇಡ್ (ಡಿ.17 ರಿಂದ 21) ಹಾಗೂ ಮೆಲ್ಬೋರ್ನ್‌(ಡಿ.26 ರಿಂದ 30) ಎರಡು ಟೆಸ್ಟ್‌ಗಳಿಗೆ ಅಲಭ್ಯರಾಗಲಿದ್ದಾರೆ. ಡಿ.26ರಂದು ಕ್ರಿಸ್‌ಮಸ್‌ ಬಳಿಕ ರೋಹಿತ್‌ ಶರ್ಮಾ ಮೆಲ್ಬೋರ್ನ್‌ನಲ್ಲಿ ತಂಡದ ಸಂಪರ್ಕ  ಮಾಡಲಿದ್ದಾರೆ.

ಇನ್ನು ಜ.3 ರಿಂದ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಹಾಗೂ ಜ.15 ರಿಂದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತದ ಪರ ಇನಿಂಗ್ಸ್ ಆರಂಭಿಸಲಿದ್ದಾರೆ. ಆರಂಭಿಕ ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ ತವರಿಗೆ ವಾಪಸ್‌ ಆಗುವ ಹಿನ್ನೆಲೆಯಲ್ಲಿ ಕೊನೆಯ ಎರಡು  ಪಂದ್ಯಗಳಿಗೆ ರೋಹಿತ್‌ ಶರ್ಮಾ ಲಭ್ಯರಾಗುವುದರಿಂದ ಭಾರತಕ್ಕೆ ಬ್ಯಾಟಿಂಗ್ ವಿಭಾಗ‌ ಬಲಿಷ್ಠವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com