ಆಸಿಸ್ ಗೆ ಮತ್ತೊಂದು ಆಘಾತ: ವಾರ್ನರ್ ಬಳಿಕ ಮತ್ತಿಬ್ಬರು ಆಟಗಾರರಿಗೆ ಗಾಯ, ತಂಡದಿಂದ ಹೊರಕ್ಕೆ

ಭಾರತದ ವಿರುದ್ಧ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದ್ದು, ಡೇವಿಡ್ ವಾರ್ನರ್ ಬೆನ್ನಲ್ಲೇ ಇದೀಗ ಮತ್ತೆ ಇಬ್ಬರು ಆಟಗಾರ ಗಾಯಗೊಂಡು ತಂಡದಿಂದ ಹೊರ ಬಿದ್ದಿದ್ದಾರೆ.
ಆಸಿಸ್ ಗೆ ಮತ್ತೊಂದು ಆಘಾತ: ವಾರ್ನರ್ ಬಳಿಕ ಮತ್ತಿಬ್ಬರು ಆಟಗಾರರಿಗೆ ಗಾಯ, ತಂಡದಿಂದ ಹೊರಕ್ಕೆ

ಸಿಡ್ನಿ: ಭಾರತದ ವಿರುದ್ಧ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದ್ದು, ಡೇವಿಡ್ ವಾರ್ನರ್ ಬೆನ್ನಲ್ಲೇ ಇದೀಗ ಮತ್ತೆ ಇಬ್ಬರು ಆಟಗಾರ ಗಾಯಗೊಂಡು ತಂಡದಿಂದ ಹೊರ ಬಿದ್ದಿದ್ದಾರೆ.

ಈ ಹಿಂದೆ ಭಾರತದ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ಸೀನ್ ಅಬಾಟ್ ಗಾಯಗೊಂಡಿದ್ದು ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಸಿಡ್ನಿಯಲ್ಲಿ ಭಾರತದ ವಿರುದ್ಧ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ವೇಗಿ ಶಾನ್ ಅಬಾಟ್ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೆನ್ರಿಕ್ಸ್  ಮೋಯ್ಸಿಸ್ ರನ್ನು ಆಯ್ಕೆ ಮಾಡಲಾಗಿದ್ದು, ಸಿಡ್ನಿಯಿಂದ ಅಡಿಲೇಡ್‌ಗೆ ಆಸ್ಟ್ರೇಲಿಯಾ ತಂಡದ ಜೊತೆಗೆ ಮೋಯ್ಸಿಸ್ ಕೂಡ ಪ್ರಯಾಣ ಬೆಳೆಸಿದ್ದಾರೆ. 
ಮೋಯ್ಸಿಸ್ ಹೆನ್ರಿಕ್ಸ್ ಆಸ್ಟ್ರೇಲಿಯಾ ಎ ತಂಡದ ಪರವಾಗಿ ಎರಡನೇ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಬೇಕಾಗಿತ್ತು. ಆದರೆ ಅವರು ಕಡಿಮೆ ಪ್ರಮಾಣದ ಮಂಡಿರಜ್ಜು ಗಾಯಕ್ಕೊಳಗಾಗಿದ್ದ ಕಾರಣ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಈಗ ಅವರು ಸಂಪೂರ್ಣವಾಗಿ  ಚೇತರಿಕೆ ಕಂಡಿದ್ದು ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಮೋಯ್ಸಿಸ್ ಹೆನ್ರಿಕ್ಸ್ ಭಾರತದ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಂಡಿದ್ದರು. ಎರಡು ಏಕದಿನ ಪಂದ್ಯಗಳಲ್ಲಿ ಪಾಲ್ಗೊಂಡಿದ್ದ ಅವರು ಚುಟುಕು ಕ್ರಿಕೆಟ್‌ ಸರಣಿಯ  ಎಲ್ಲಾ ಮೂರು ಪಂದ್ಯಗಳಲ್ಲೂ ಆಸಿಸ್ ತಂಡವನ್ನು ಪ್ರತಿನಿಧಿಸಿದ್ದರು. 

ಸೀನ್ ಅಬಾಟ್ ಬೆನ್ನಲ್ಲೇ ಮತ್ತೋರ್ವ ಆಟಗಾರ ಕೂಡ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾದ ಯುವ ಆಟರಂಬಿಕ ಆಟಗಾರ ಪುಕೋವ್ಸ್ಕಿ ಕೂಡ ಗಾಯಗೊಂಡಿದ್ದು, ಮೊದಲ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಆದರೆ ಎರಡನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ  ತಂಡದ ಪರವಾಗಿ ಕಣಕ್ಕಿಳಿಯುವ ಭರವಸೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ವ್ಯಕ್ತಪಡಿಸಿದೆ. ಈ ಮಧ್ಯೆ ಮೊದಲ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಬಳಿಕ ಗಾಯಗೊಂಡಿದ್ದ ಕ್ಯಾಮರೂನ್ ಗ್ರೀನ್ ಚೇತರಿಕೆ ಕಂಡಿದ್ದು ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com