ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆಗೆ ನಾಯಕತ್ವದ ಒತ್ತಡವಿಲ್ಲ: ಸುನಿಲ್ ಗವಾಸ್ಕರ್

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಇನ್ನು ನಾಯಕತ್ವದ ಒತ್ತಡದಿಂದ ರಹಾನೆ ತತ್ತರಿಸುವುದಿಲ್ಲ ಎಂದು ಬ್ಯಾಟಿಂಗ್ ಶ್ರೇಷ್ಠ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ-ರಹಾನೆ
ಕೊಹ್ಲಿ-ರಹಾನೆ

ನವದೆಹಲಿ: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಇನ್ನು ನಾಯಕತ್ವದ ಒತ್ತಡದಿಂದ ರಹಾನೆ ತತ್ತರಿಸುವುದಿಲ್ಲ ಎಂದು ಬ್ಯಾಟಿಂಗ್ ಶ್ರೇಷ್ಠ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಹಗಲು-ರಾತ್ರಿ ಟೆಸ್ಟ್ ನಂತರ ಕೊಹ್ಲಿ ಪಿತೃತ್ವ ರಜೆ ತೆಗೆದುಕೊಳ್ಳುತ್ತಿದ್ದಾರೆ. ನಾಲ್ಕು ಟೆಸ್ಟ್ ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ತಂಡವನ್ನು ರಹಾನೆ ಮುನ್ನಡೆಸುವ ನಿರೀಕ್ಷೆಯಿದೆ.

"ಅಜಿಂಕ್ಯ ರಹಾನೆ ಅವರ ಮೇಲೆ ನಿಜವಾದ ಒತ್ತಡವಿಲ್ಲ, ಏಕೆಂದರೆ ಅವರು ತಂಡವನ್ನು ಎರಡೂ ಬಾರಿ ಮುನ್ನಡೆಸಿ ಗೆದ್ದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ಮುನ್ನಡೆಸಿದ್ದಾಗ ಭಾರತ ಗೆದ್ದಿದೆ. ನಂತರ ಅಫ್ಘಾನಿಸ್ತಾನ ವಿರುದ್ಧ ಸಹ ತಂಡವನ್ನು ಮುನ್ನಡೆಸಿದ್ದು ಅಂದೂ ಭಾರತ ಗೆದ್ದಿತು ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ. 

ಹೀಗಾಗಿ ನಾಯಕತ್ವಕ್ಕೆ ಸಂಬಂಧಿಸಿದಂತೆ, ಯಾವುದೇ ಒತ್ತಡವಿಲ್ಲ, ಏಕೆಂದರೆ ರಹಾನೆ ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದು ಅವರಿಗೆ ತಿಳಿದಿದೆ. "ಆದ್ದರಿಂದ, ಕ್ಯಾಪ್ಟನ್ ಆಗಿರುವುದು ಅಥವಾ ಕ್ಯಾಪ್ಟನ್ ಆಗಿ ಮುಂದುವರಿಯುವುದು ಅವರ ಚಿಂತನೆಯ ಭಾಗವಾಗಲಿದೆ ಎಂದು ನಾನು ಭಾವಿಸುವುದಿಲ್ಲ ಎಂದರು. 

ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಡ್ರಾದಲ್ಲಿ ಕೊನೆಗೊಂಡ ಎರಡು ಅಭ್ಯಾಸ ಪಂದ್ಯಗಳಲ್ಲಿ ರಹಾನೆ ತಂಡದ ನಾಯಕತ್ವ ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com