ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನಾನು ನವಭಾರತದ ಪ್ರತಿನಿಧಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ನಾನು ನವ ಭಾರತದ ಪ್ರತಿನಿಧಿ ಎಂದು ಘೋಷಿಸಿಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಶಾವಾದದೊಂದಿಗೆ ಸವಾಲುಗಳನ್ನು ಎದುರಿಸಲು ಎಂದೆಂದಿಗೂ ಸಿದ್ಧರಾಗಿದ್ದೇನೆ ಎಂದಿದ್ದಾರೆ. 

ಅಡಿಲೇಡ್: ನಾನು ನವ ಭಾರತದ ಪ್ರತಿನಿಧಿ ಎಂದು ಘೋಷಿಸಿಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಶಾವಾದದೊಂದಿಗೆ ಸವಾಲುಗಳನ್ನು ಎದುರಿಸಲು ಎಂದೆಂದಿಗೂ ಸಿದ್ಧರಾಗಿದ್ದೇನೆ ಎಂದಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಮುನ್ನಾದಿನದಂದು, ಗ್ರೆಗ್ ಚಾಪೆಲ್ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ ಅವರ ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಬಗ್ಗೆ ಕೇಳಲಾಗಿ "ನನ್ನ ವ್ಯಕ್ತಿತ್ವ ಮತ್ತು ಪಾತ್ರದ ರೀತಿ, ನಾನು ನವ ಭಾರತದ ಪ್ರತಿನಿಧಿ ಎಂಬಂತೆ ನಾನು ನನ್ನನ್ನು ನೋಡುತ್ತೇನೆ" ಎಂದರು.

"ನನ್ನ ಮನಸ್ಸಿನಲ್ಲಿ ಇದು ಮೊದಲ ದಿನದಿಂದ ಇದೆ. ಇದನ್ನು ಆಸ್ಟ್ರೇಲಿಯಾದ ಮನಸ್ಥಿತಿಗೆ ಹೋಲಿಸಬೇಡಿ. ನಾವು ಭಾರತೀಯ ಕ್ರಿಕೆಟ್ ಟೀಂ ಆಗಿ ಎದ್ದು ನಿಲ್ಲಲು ಪ್ರಾರಂಭಿಸಿದ್ದೇವೆ. ನವ ಭಾರತವು ಅತಿ ಹೆಚ್ಚಿನ ಮಂದಿ ಫಾಲೋ ಮಾಡುವ ಕ್ರೀಡಾ ಐಕಾನ್‌ಗಳ ಪ್ರಕಾರ, ಸವಾಲುಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ ನವ ಭಾರತ ಸವಾಲುಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಆಶಾವಾದ ಮತ್ತು ಸಕಾರಾತ್ಮಕತೆಯಿಂದ ತುಂಬಿದೆ. ನಮ್ಮ ಹಾದಿಯಲ್ಲಿ ಬರುವ ಯಾವುದೇ ಸವಾಲುಗಳಿಗೆ ನಾವು ಸಿದ್ಧರಿದ್ದೇವೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ."

ಕೊಹ್ಲಿ ತಮ್ಮ ಟೀಂ ನ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನಂತರ ತಾವು ರಜೆ ಮೇಲೆ ತೆರಳಿದಾಗ ತಂಡವನ್ನು ಮುನ್ನಡೆಸುವಲ್ಲಿ "ಅದ್ಭುತ ಕೆಲಸ" ಮಾಡಲು ಹುರಿದುಂಬಿಸಿದ್ದಾರೆ. ಗುರುವಾರದಿಂದ ಪ್ರಾರಂಭವಾಗುವ ಹಗಲು-ರಾತ್ರಿ ಟೆಸ್ಟ್ ಪಂದ್ಯದ ನಂತರ ಕೊಹ್ಲಿ ತನ್ನ ಮೊದಲ ಮಗುವಿನ ಜನನದ ಕಾರಣಕ್ಕಾಗಿ ಮನೆಗೆ ತೆರಳಲಿದ್ದು, ಉಳಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.

"ಮೊದಲನೆಯದಾಗಿ ನಾವು ಕಳೆದ ವರ್ಷಗಳಲ್ಲಿ ಸಾಕಷ್ಟು ಪರಸ್ಪರ ತಿಳುವಳಿಕೆ ಮತ್ತು ಗೌರವವನ್ನು ಬೆಳೆಸಿಕೊಂಡಿದ್ದೇವೆ. ನಾವು ಒಟ್ಟಿಗೆ ಬ್ಯಾಟಿಂಗ್ ಮಾಡುವ ಉತ್ತಮ ಅನುಭವ ಪಡೆದಿದ್ದೇವೆ. ಅದು ತಂಡಕ್ಕೆ ಏನು ಮಾಡಬೇಕೆಂಬುದರ ಬಗ್ಗೆ ವಿಶ್ವಾಸ ಮತ್ತು ತಿಳುವಳಿಕೆಯನ್ನು ಆಧರಿಸಿದೆ" ಎಂದು ಕೊಹ್ಲಿ ಹೇಳಿದ್ದಾರೆ. ಇಬ್ಬರೂ ಒಂದೇ ರೀತಿ ಯೋಚಿಸುತ್ತೇವೆ. ತಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅವರು ತಿಳಿದಿದ್ದಾಗಿ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಎರಡು ಅಭ್ಯಾಸ ಪಂದ್ಯಗಳಲ್ಲಿ ಅಜಿಂಕ್ಯ ಅವರು ಅದ್ಭುತ ಕೆಲಸ ಮಾಡಿದ್ದಾರೆ ಮತ್ತು ಅವರು ಒಳ್ಳೆಯ ಪ್ರತಿಭೆ ಹೊಂದಿದ್ದಾರೆಂದು ತೋರುತ್ತದೆ ಮತ್ತು ನಮ್ಮ ತಂಡದ ಸಾಮರ್ಥ್ಯಗಳು ಮತ್ತು ಸೂಕ್ಷ್ಮ ವಿಷಯಗಳ ಬಗ್ಗೆ ಹೇಗೆ ಹೋಗಬೇಕು ಎಂದು ಅವರಿಗೆ ತಿಳಿದಿದೆ" ಎಂದು ಕೊಹ್ಲಿ ಹೇಳಿದರು.

ರಹಾನೆ ಅವರು ನಿಗದಿಪಡಿಸಿದ ಟೆಂಪ್ಲೆಟ್ ಅನ್ನು ಖಂಡಿತವಾಗಿಯೂ ಅನುಸರಿಸುತ್ತಾರೆ ಮತ್ತು ಇಬ್ಬರಿಗೂ ಸಂಬಂಧಪಟ್ಟಂತೆ ಯಾವುದೇ ಗೊಂದಲವಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

"ನಾನು ಇಲ್ಲಿರುವ ಸಮಯದವರೆಗೆ ನಿಮಗೆ ತಿಳಿದಿರುವಂತೆ, ನಾಯಕತ್ವ ಮತ್ತು ಆಟಗಾರನಾಗಿ ನನ್ನ ಸಾಮರ್ಥ್ಯಗಳಿಗೆ ತಕ್ಕಂತೆ ಪ್ರದರ್ಶನಗಳನ್ನು ನೀಡುವುದು ಇದ್ದೇ ಇದೆ. ಅಲ್ಲಿಂದಾಚೆಗೆ ರಹಾನೆ ಅದ್ಭುತ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ" ಎಂದು ಕೊಹ್ಲಿ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com