ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು: ಸೋಲನ್ನು ಪದಗಳಲ್ಲಿ ವಿವರಿಸುವುದು ಕಷ್ಟ - ವಿರಾಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಹಗಲು ರಾತ್ರಿ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ಗಳ ಸೋಲಿನ ನಂತರ, ಭಾರತದ ನಾಯಕ ವಿರಾಟ್ ಕೊಹ್ಲಿ ಶನಿವಾರ ಈ ಸೋಲನ್ನು ಪದಗಳಲ್ಲಿ ವಿವರಿಸುವುದು ಕಷ್ಟ ಎಂದು ಹೇಳಿದರು.
ಕೊಹ್ಲಿ
ಕೊಹ್ಲಿ

ಆಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಹಗಲು ರಾತ್ರಿ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ಗಳ ಸೋಲಿನ ನಂತರ, ಭಾರತದ ನಾಯಕ ವಿರಾಟ್ ಕೊಹ್ಲಿ ಶನಿವಾರ ಈ ಸೋಲನ್ನು ಪದಗಳಲ್ಲಿ ವಿವರಿಸುವುದು ಕಷ್ಟ ಎಂದು ಹೇಳಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 53 ರನ್‌ಗಳ ಮುನ್ನಡೆ ದೊರಕಿತು. ಆದರೆ ಮೂರನೇ ದಿನದ ಮೊದಲ ಅವಧಿಯಲ್ಲಿ ಜೋಶ್ ಹ್ಯಾಜಲ್‌ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರು ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಕಾಡಿದರು. ಹೀಗಾಗಿ ತಂಡ ಕೇವಲ 36 ರನ್‌ಗಳಿಗೆ ಆಲೌಟ್ ಆಯಿತು. ಅಲ್ಪ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿತು ಹಾಗೂ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

ಪಂದ್ಯದ ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ, 'ಹೀನಾಯ ಸೋಲನ್ನು ಪದಗಳಲ್ಲಿ ಹೇಳುವುದು ತುಂಬಾ ಕಷ್ಟ. 60 ರನ್‌ ಮುನ್ನಡೆಯೊಂದಿಗೆ ಮೈದಾನಕ್ಕೆ ಇಳಿದ ನಾವು ಕೇವಲ 36 ರನ್ ಗಳಿಗೆ ಸರ್ವಪತನ ಕಂಡೆವು. ಕಳೆದ ಎರಡು ದಿನಗಳಲ್ಲಿ ಕಠಿಣ ಪರಿಶ್ರಮ ಪಟ್ಟು ಉತ್ತಮ ಹಂತದಲ್ಲಿದ್ದ ನಾವು, ಕೇವಲ ಒಂದೇ ಒಂದು ಗಂಟೆಯಲ್ಲಿ ಗೆಲ್ಲಲಾಗದ ಪರಿಸ್ಥಿತಿಗೆ ಒಳಗಾದೆವು ಎಂದು ಬೇಸರ ವ್ಯಕ್ತಪಡಿಸಿದರು.

"ನಾವು ಇಂದು ಸ್ವಲ್ಪ ಹೆಚ್ಚು ಬದ್ಧತೆಯಿಂದ ಆಡಬೇಕಿತ್ತು ಎಂದು ನಾನು ಭಾವಿಸುತ್ತೇನೆ. ಆಸ್ಟ್ರೇಲಿಯಾನ್ನರು ಮೊದಲ ಇನ್ನಿಂಗ್ಸ್ ನಲ್ಲಿ ಬೌಲ್ ಮಾಡಿದ್ದಂತೆ ಎರಡನೇ ಇನ್ನಿಂಗ್ಸ್ ನಲ್ಲಿ ಮಾಡಿದರು. ಆದರೆ ನಾವು ರನ್ ಗಳಿಸಬೇಕಿತ್ತು. ಇನ್ನು ಆಸ್ಟ್ರೇಲಿಯನ್ನರು ಕೆಲವು ಉತ್ತಮ ಎಸೆತಗಳನ್ನು ಎಸೆದರು ಆದರೆ ಮೊದಲ ಇನ್ನಿಂಗ್ಸ್‌ಗಿಂತ ಭಿನ್ನವಾಗಿ ಏನನ್ನೂ ಮಾಡಲಿಲ್ಲ ಎಂದು ಕೊಹ್ಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com