ಮೊದಲ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಹೀನಾಯ ಸೋಲು!

ಆಸ್ಟ್ರೇಲಿಯಾ ತಂಡದ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಇನ್ನೂ ಮೂರು ದಿನಗಳು ಬಾಕಿ ಇರುವಾಗಲೇ ಮೊದಲನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಆ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 0-1 ಹಿನ್ನಡೆ ಕಂಡಿದೆ.  
ಅಡಿಲೇಡ್'ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರು
ಅಡಿಲೇಡ್'ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರು

ಅಡಿಲೇಡ್: ಆಸ್ಟ್ರೇಲಿಯಾ ತಂಡದ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಇನ್ನೂ ಮೂರು ದಿನಗಳು ಬಾಕಿ ಇರುವಾಗಲೇ ಮೊದಲನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಆ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 0-1 ಹಿನ್ನಡೆ ಕಂಡಿದೆ. 

ಶನಿವಾರ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡದ ಮೇಲೆ ಜಾಶ್‌ ಹೇಝಲ್‌ವುಡ್‌(8ಕ್ಕೆ5) ಹಾಗೂ ಪ್ಯಾಟ್‌ ಕಮಿನ್ಸ್ (24ಕ್ಕೆ 4 ) ಅವರ ಮಾರಕ ದಾಳಿ ನಡೆಸಿದರು. ಆ ಮೂಲಕ ಕೊಹ್ಲಿ ಪಡೆ 21.2 ಓವರ್‌ಗಳಿಗೆ ಕೇವಲ 36 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ 90 ರನ್‌ ಗುರಿ ನೀಡಿತು.

ಮೊದಲನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದ ಭಾರತದ ಬ್ಯಾಟ್ಸ್‌ಮನ್‌ಗಳು, ದ್ವಿತೀಯ ಇನಿಂಗ್ಸ್‌ನಲ್ಲಿ ವಿಫಲರಾದರು. ಮಯಾಂಕ್‌ ಅಗರ್ವಾಲ್‌ 9 ರನ್‌, ವಿರಾಟ್‌ ಕೊಹ್ಲಿ 4 ರನ್‌, ಪೃಥ್ವಿ ಶಾ 4 ರನ್ ‌ಗಳಿಸಿದರೆ‌, ಚೇತೇಶ್ವರ ಪೂಜಾರ ಹಾಗೂ ರಹಾನೆ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. 

ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ 8 ಹಾಗೂ ವೃದ್ದಿಮಾನ್‌ ಸಹಾ 4 ರನ್‌ ಗಳಿಗೆ ಸೀಮಿತರಾದರು. ಆರಂಭದಿಂದಲೇ ಮಾರಕ ದಾಳಿ ನಡೆಸಿದ್ದ ಆಸ್ಟ್ರೇಲಿಯಾ ಬೌಲರ್‌ಗಳು ಭಾರತದ ಬ್ಯಾಟ್ಸ್‌ಮನ್‌ಗಳನ್ನು ನಿಯಮಿತವಾಗಿ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಸಫಲರಾದರು. 

ಮೊದಲನೇ ಇನಿಂಗ್ಸ್‌ನಲ್ಲಿ ಒಂದೇ ಒಂದು ವಿಕೆಟ್‌ ಪಡೆದಿದ್ದ ಜಾಶ್‌ ಹೇಝಲ್‌ವುಡ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತಕ್ಕೆ ಸಿಂಹ ಸ್ವಪ್ನರಾದರು. ಒಟ್ಟು ಐದು ಓವರ್‌ ಬೌಲಿಂಗ್‌ ಮಾಡಿದ ಹೇಝಲ್‌ವುಡ್,‌ ಕೇವಲ 8 ರನ್‌ ನೀಡಿ ಐದು ವಿಕೆಟ್‌ ಕಬಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ ಪ್ಯಾಟ್‌ ಕಮಿನ್ಸ್ 10.2 ಓವರ್‌ಗಳಿಗೆ 21 ರನ್‌ ನೀಡಿ ನಾಲ್ಕು ವಿಕೆಟ್‌ಗಳನ್ನು ಸೇರಿಸಿಕೊಂಡರು. 

ನಂತರ 90 ರನ್‌ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 21 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 93 ರನ್‌ ಗಳಿಸಿ, 8 ವಿಕೆಟ್‌ಗಳ ಗೆಲುವಿನ ನಗೆ ಬೀರಿತು. ಮ್ಯಾಥ್ಯೂ ವೇಡ್‌ 33 ರನ್‌ ಗಳಿಸಿ ಔಟಾದರೆ, ಜೋ ಬರ್ನ್ಸ್ ಅಜೇಯ 51 ರನ್‌ ಗಳಿಸಿ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದರು. ಭಾರತದ ಪರ ಆರ್‌ ಅಶ್ವಿನ್‌ ಒಂದೇ ಒಂದು ವಿಕೆಟ್‌ ಕಬಳಿಸಿದರು. 

ಶುಕ್ರವಾರ ಎರಡನೇ ದಿನ ರವಿಚಂದ್ರನ್‌ ಅಶ್ವಿನ್‌ (55ಕ್ಕೆ 4), ಉಮೇಶ್‌ ಯಾದವ್‌ (40ಕ್ಕೆ 3),‌ ಹಾಗೂ ಜಸ್‌ಪ್ರಿತ್‌ ಬುಮ್ರಾ (52ಕ್ಕೆ 2) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡ 191 ರನ್‌ಗಳಿಗೆ ಆಲೌಟ್‌ ಆಗಿತ್ತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ 244 ರನ್‌ ಗಳಿಸಿದ್ದ ಕೊಹ್ಲಿ ಪಡೆ 53 ರನ್‌ ಮುನ್ನಡೆ ಗಳಿಸಿತ್ತು. 

ಭಾರತದ ಪರ ಹೊಸ ಚೆಂಡಿನಲ್ಲಿ ಮಾರಕ ದಾಳಿ ನಡೆಸಿದ ಜಸ್‌ಪ್ರಿತ್‌ ಬುಮ್ರಾ, ಮ್ಯಾಥ್ಯೂ ವೇಡ್‌(8) ಹಾಗೂ ಜೋಬರ್ನ್ಸ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಆ ಮೂಲಕ ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ನೀಡಿದ್ದರು. ನಂತರ ಚೆಂಡು ಕೈಗೆತ್ತಿಕೊಂಡಿದ್ದ ಆರ್‌ ಅಶ್ವಿನ್, ಸ್ಟೀವನ್‌ ಸ್ಮಿತ್‌(1), ಟ್ರಾವಿಸ್‌ ಹೆಡ್‌(7), ಕ್ಯಾಮೆರಾನ್‌ ಗ್ರೀನ್(11) ಹಾಗೂ ನೇಥನ್‌ ಲಯಾನ್‌ (10) ಅವರನ್ನು ಔಟ್‌ ಮಾಡಿದ್ದರು.

ಆರಂಭದಲ್ಲಿ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದ ಭಾರತ ತಂಡದ ವೇಗಿ ಉಮೇಶ್‌ ಯಾದವ್, ಕೊನೆಗೂ ಆಸ್ಟ್ರೇಲಿಯಾ ತಂಡದ ಪ್ರಮುಖ ವಿಕೆಟ್‌ ಮಾರ್ನಸ್‌ ಲಾಬುಶೇನ್(47) ಹಾಗೂ ಪ್ಯಾಟ್‌ ಕಮಿನ್ಸ್(0) ಹಾಗೂ ಜಾಶ್‌ ಹೇಝಲ್‌ವುಡ್‌(8) ವಿಕೆಟ್‌ಗಳನ್ನು ಪಡೆದರು.

ಸ್ಕೋರ್ ವಿವರ:
ಭಾರತ

ಪ್ರಥಮ ಇನಿಂಗ್ಸ್‌: 244/10 (93.1 ಓವರ್‌)
ವಿರಾಟ್‌ ಕೊಹ್ಲಿ-74
ಚೇತೇಶ್ವರ್ ಪೂಜಾರಾ-43
ಅಜಿಂಕ್ಯ ರಹಾನೆ-42
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್ 53ಕ್ಕೆ 4, ಪ್ಯಾಟ್‌ ಕಮಿನ್ಸ್ 48ಕ್ಕೆ 3, ಜಾಶ್‌ ಹೇಝಲ್‌ವುಡ್‌ 47ಕ್ಕೆ 1, ನೇಥನ್‌ ಲಯಾನ್‌ 68ಕ್ಕೆ 1.

ದ್ವಿತೀಯ ಇನಿಂಗ್ಸ್: 39/9 (ಡಿ) ( 21.2 ಓವರ್‌)
ಮಯಾಂಕ್‌ ಅಗರ್ವಾಲ್‌-9
ಹನುಮ ವಿಹಾರಿ-8
ವಿರಾಟ್‌ ಕೊಹ್ಲಿ-4
ಬೌಲಿಂಗ್‌: ಜಾಶ್‌ ಹೇಝಲ್‌ವುಡ್‌ 8ಕ್ಕೆ 5, ಪ್ಯಾಟ್‌ ಕಮಿನ್ಸ್ 21ಕ್ಕೆ 4

ಆಸ್ಟ್ರೇಲಿಯಾ
ಪ್ರಥಮ ಇನಿಂಗ್ಸ್‌: 191/10 (72.1)
ಟಿಮ್‌ ಪೇಯ್ನ್‌-73*
ಮಾರ್ನಸ್‌ ಲಾಬುಶೇನ್‌-47
ಬೌಲಿಂಗ್‌: ಆರ್‌ ಅಶ್ವಿನ್ 55ಕ್ಕೆ 4, ಉಮೇಶ್‌ ಯಾದವ್ 40ಕ್ಕೆ 3,‌ ಜಸ್‌ಪ್ರಿತ್‌ ಬುಮ್ರಾ 52ಕ್ಕೆ 2, ಮೊಹಮ್ಮದ್‌ ಶಮಿ 41ಕ್ಕೆ 0

ದ್ವಿತೀಯ ಇನಿಂಗ್ಸ್: 93/2 (21 ಓವರ್‌)
ಮ್ಯಾಥ್ಯೂ ವೇಡ್‌-33
ಜೋ ಬರ್ನ್ಸ್‌-51*
ಮಾರ್ನಸ್‌ ಲಾಬುಶೇನ್‌-6
ಸ್ಟೀವನ್‌ ಸ್ಮಿತ್‌-1*
ಬೌಲಿಂಗ್‌: ಆರ್‌ ಅಶ್ವಿನ್‌ 16ಕ್ಕೆ 1, ಜಸ್‌ಪ್ರಿತ್‌ ಬುಮ್ರಾ 27ಕ್ಕೆ 0, ಉಮೇಶ್‌ ಯಾದವ್‌ 49ಕ್ಕೆ 0

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com