ಆಸೀಸ್ ವಿರುದ್ಧ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾಗೆ ಮತ್ತೊಂದು ಆಘಾತ!

ಆಸ್ಟ್ರೇಲಿಯಾ ವಿರುದ್ಧದ ಮೊದಲ ದಿನದ ರಾತ್ರಿ ಟೆಸ್ಟ್‌ನಲ್ಲಿ ತಮ್ಮ ಕಡಿಮೆ ಸ್ಕೋರ್ 36 ರನ್ ಗಳಿಸುವ ಮೂಲಕ ಹೀನಾಯ ಸೋಲನ್ನು ಅನುಭವಿಸಿದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.
ಶಮಿ
ಶಮಿ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ದಿನದ ರಾತ್ರಿ ಟೆಸ್ಟ್‌ನಲ್ಲಿ ತಮ್ಮ ಕಡಿಮೆ ಸ್ಕೋರ್ 36 ರನ್ ಗಳಿಸುವ ಮೂಲಕ ಹೀನಾಯ ಸೋಲನ್ನು ಅನುಭವಿಸಿದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.

ಹೌದು, ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಗಾಯಗೊಂಡಿದ್ದು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. 

ಭಾರತದ ಎರಡನೇ ಇನ್ನಿಂಗ್ಸ್‌ನ ಮೂರನೇ ದಿನವಾದ ಶನಿವಾರ ಭಾರತೀಯ ಇನ್ನಿಂಗ್ಸ್‌ನ ಕೊನೆಯಲ್ಲಿ ಬಲಗೈಯಲ್ಲಿ ಪ್ಯಾಟ್ ಕಮ್ಮಿನ್ಸ್ ಬೌನ್ಸರ್‌ನಿಂದ ಶಮಿ ಗಾಯಗೊಂಡರು, ನಂತರ ಅವರು ಹೊರಗೆ ಹೋಗಬೇಕಾಯಿತು ಮತ್ತು ಭಾರತದ ಇನ್ನಿಂಗ್ಸ್ 36 ರನ್‌ಗಳಲ್ಲಿ ಕೊನೆಗೊಂಡಿತು.

ಶಮಿ ಮೈದಾನದಲ್ಲಿ ಅನುಭವಿಸಿದ ಅಸಹನೀಯ ನೋವು ಮೂಳೆ ಮುರಿತದ ಪರಿಣಾಮ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com